ಅಲ್ಲು ಅರ್ಜುನ್ ಮುಂದಿನ ಸಿನಿಮಾ ನಿರ್ದೇಶಿಸಲಿರುವ ಮಲಯಾಳಂ ಸ್ಟಾರ್ ನಟ

Allu Arjun movie: ಅಲ್ಲು ಅರ್ಜುನ್ ‘ಪುಷ್ಪ 2’ ಬಳಿಕ ಅದಕ್ಕಿಂತಲೂ ದೊಡ್ಡ ಸಿನಿಮಾವನ್ನೇ ಮಾಡಬೇಕು ಎಂಬ ಯೋಜಿತ ನಿರ್ಧಾರ ಹಾಕಿಕೊಂಡೇ ಮುಂದಿನ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದೀಗ ಅಟ್ಲಿ ಜೊತೆಗೆ ಹಾಲಿವುಡ್ ಮಾದರಿಯ ಫ್ಯಾಂಟಸಿ, ಸೂಪರ್ ಹೀರೋ ಸಿನಿಮಾ ಮಾಡುತ್ತಿರುವ ಅಲ್ಲು ಅರ್ಜುನ್, ತಮ್ಮ ಮುಂದಿನ ಸಿನಿಮಾಕ್ಕೆ ಭಿನ್ನ ಶೈಲಿಯ ನಿರ್ದೇಶಕರೊಬ್ಬರಿಗೆ ಓಕೆ ಹೇಳಿದ್ದಾರೆ.

ಅಲ್ಲು ಅರ್ಜುನ್ ಮುಂದಿನ ಸಿನಿಮಾ ನಿರ್ದೇಶಿಸಲಿರುವ ಮಲಯಾಳಂ ಸ್ಟಾರ್ ನಟ
Allu Arjun

Updated on: Mar 04, 2026 | 1:13 PM

ಅಲ್ಲು ಅರ್ಜುನ್ (Allu Arjun) ಪ್ರಸ್ತುತ ಟಾಪ್ ಪ್ಯಾನ್ ಇಂಡಿಯಾ ಸ್ಟಾರ್ ನಟರುಗಳಲ್ಲಿ ಒಬ್ಬರು. ಅವರೊಟ್ಟಿಗೆ ಸಿನಿಮಾ ಮಾಡಲು ದೊಡ್ಡ ನಿರ್ಮಾಣ ಸಂಸ್ಥೆಗಳು, ನಿರ್ದೇಶಕರುಗಳು ಸಾಲುಗಟ್ಟಿ ನಿಂತಿದ್ದಾರೆ. ಅಲ್ಲು ಅರ್ಜುನ್ ಸಹ ‘ಪುಷ್ಪ 2’ ಬಳಿಕ ಅದಕ್ಕಿಂತಲೂ ದೊಡ್ಡ ಸಿನಿಮಾವನ್ನೇ ಮಾಡಬೇಕು ಎಂಬ ಯೋಜಿತ ನಿರ್ಧಾರ ಹಾಕಿಕೊಂಡೇ ಮುಂದಿನ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಇದೀಗ ಅಟ್ಲಿ ಜೊತೆಗೆ ಹಾಲಿವುಡ್ ಮಾದರಿಯ ಫ್ಯಾಂಟಸಿ, ಸೂಪರ್ ಹೀರೋ ಸಿನಿಮಾ ಮಾಡುತ್ತಿರುವ ಅಲ್ಲು ಅರ್ಜುನ್, ತಮ್ಮ ಮುಂದಿನ ಸಿನಿಮಾಕ್ಕೆ ಭಿನ್ನ ಶೈಲಿಯ ನಿರ್ದೇಶಕರೊಬ್ಬರಿಗೆ ಓಕೆ ಹೇಳಿದ್ದಾರೆ.

ಮಲಯಾಳಂ ಸಿನಿಮಾಗಳ ಮೂಲಕ ತಮ್ಮ ನಟನೆ ಇಂದ ದೇಶದಾದ್ಯಂತ ಪ್ರತ್ಯೇಕ ಅಭಿಮಾನಿ ವರ್ಗವನ್ನೇ ಗಳಿಸಿರುವ ಬಾಸಿಲ್ ಜೋಸೆಫ್ ಅವರು ಅಲ್ಲು ಅರ್ಜುನ್ ಅವರ ಮುಂದಿನ ಸಿನಿಮಾ ನಿರ್ದೇಶಿಸಲಿದ್ದಾರೆ. ಬಾಸಿಲ್ ಜೋಸೆಫ್, ಮಲಯಾಳಂ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಅವರ ನಟನೆಯ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೀಗ ಅವರು ತುಸು ಸಮಯ ನಟನೆಯಿಂದ ವಿರಾಮ ಪಡೆದು ಅಲ್ಲು ಅರ್ಜುನ್ ಅವರಿಗಾಗಿ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ.

ಬಾಸಿಲ್ ಅವರು ಅದ್ಭುತ ನಟರಾಗಿರುವ ಜೊತೆಗೆ ಒಳ್ಳೆಯ ನಿರ್ದೇಶಕ ಸಹ, ಈ ಹಿಂದೆ ‘ಮಿನ್ನಲ್ ಮುರಳಿ’ ಹೆಸರಿನ ಅದ್ಭುತ ಸೂಪರ್ ಹೀರೋ ಸಿನಿಮಾ ನಿರ್ದೇಶಿಸಿದ್ದರು ಬಾಸಿಲ್. ಇದೀಗ ಅಲ್ಲು ಅರ್ಜುನ್ ಅವರಿಗಾಗಿ ಬಾಸಿಲ್ ಅವರು ಫ್ಯಾಂಟಸಿ ಸೂಪರ್ ಹೀರೋ ಸಿನಿಮಾವನ್ನೇ ನಿರ್ದೇಶಿಸಲಿದ್ದಾರೆ. ಅಸಲಿಗೆ ಬಾಲಿವುಡ್​ ನಟ ರಣ್ವೀರ್ ಸಿಂಗ್ ಅವರಿಗಾಗಿ ಮಾಡಿದ್ದ ಕತೆ ಅದಾಗಿದ್ದು, ಕಾರಣಾಂತರಗಳಿಂದ ರಣ್ವೀರ್ ಸಿಂಗ್ ಆ ಸಿನಿಮಾನಲ್ಲಿ ನಟಿಸಲಿಲ್ಲ. ಇದೀಗ ಅದೇ ಕತೆಯನ್ನು ತುಸು ಬದಲಾವಣೆ ಮಾಡಿ ಅಲ್ಲು ಅರ್ಜುನ್ ಅವರಿಗಾಗಿ ಮಾಡುತ್ತಿದ್ದಾರೆ ಬಾಸಿಲ್.

ಇದನ್ನೂ ಓದಿ:ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ

ಇತ್ತೀಚೆಗಷ್ಟೆ ಬಾಸಿಲ್ ಜೋಸೆಫ್ ಅವರು ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಅವರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಅಲ್ಲಿ ಅವರು ‘ಪುಷ್ಪ’ ನಿರ್ದೇಶಕ ಸುಕುಮಾರ್, ಅಲ್ಲು ಅರ್ಜುನ್ ಅವರ ಈಗಿನ ಸಿನಿಮಾ ನಿರ್ದೇಶಕ ಅಟ್ಲಿ ಅವರನ್ನು ಭೇಟಿ ಆಗಿದ್ದರು. ಇದೀಗ ಅಲ್ಲು ಅರ್ಜುನ್ ಅಟ್ಲಿ ಜೊತೆಗಿನ ಸಿನಿಮಾನಲ್ಲಿ ನಟಿಸುತ್ತಿದ್ದು, ಆ ಸಿನಿಮಾ ಮುಗಿದೊಡನೆ ಬಾಸಿಲ್ ಜೋಸೆಫ್ ಜೊತೆಗಿನ ಸಿನಿಮಾ ಪ್ರಾರಂಭಿಸಲಿದ್ದಾರೆ.

ಅಲ್ಲು ಅರ್ಜುನ್ ಅವರು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾನಲ್ಲಿಯೂ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಆ ಸಿನಿಮಾ ಮತ್ತೆ ಬೇರೊಬ್ಬ ನಟನ ಪಾಲಾಗಿದೆ ಎನ್ನಲಾಗುತ್ತಿದೆ. ಜೂ ಎನ್​​ಟಿಆರ್ ಅವರು ಆ ಸಿನಿಮಾದ ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us