Pathaan: ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದ: ಬಾಲಿವುಡ್​ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿರಿಯ ನಟಿ ಆಶಾ ಪರೇಖ್   

ಹಿರಿಯ ನಟಿ ಆಶಾ ಪಾರೇಖ್ ಅವರು ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅಭಿನಯದ ಪಠಾಣ್​ ಚಿತ್ರದ ‘ಬೇಷರಂ ರಂಗ್’ ಹಾಡಿನ ವಿವಾದದ ಬಗ್ಗೆ ಮಾತನಾಡಿದ್ದಾರೆ.

Pathaan: ಪಠಾಣ್ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದ: ಬಾಲಿವುಡ್​ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಿರಿಯ ನಟಿ ಆಶಾ ಪರೇಖ್   
ಬೇಷರಂ ರಂಗ್ ಹಾಡು, ನಟಿ ಆಶಾ ಪರೇಖ್   
Image Credit source: koimoi.com
Edited By:

Updated on: Dec 24, 2022 | 10:29 PM

ನಟ ಶಾರುಖ್ ಖಾನ್ ನಟನೆಯ ಚಿತ್ರ ‘ಪಠಾಣ್’​ (Pathaan) 2023 ಜನವರಿ 25ರಂದು ಬಿಡುಗಡೆಗೆ ಸಿದ್ಧವಾಗಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ಕೆಲ ವಿವಾದಗಳನ್ನು ಹುಟ್ಟುಹಾಕಿತ್ತು. ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ (Besharam Rang) ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ (Deepika Padukone) ಸಖತ್​ ಹಾಟ್​ ಆಗಿ ಮೈಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಆದರೆ ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಕೇಸರಿ ಬಣ್ಣದ ಬಟ್ಟೆ ಕುರಿತಾಗಿ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲದೆ, ಚಿತ್ರವನ್ನು ನಿಷೇಧಿಸಬೇಕು ಎಂಬ ಕೆಲ ಮಾತುಗಳು ಸಹ ಕೇಳಿಬಂದಿದ್ದವು. ಸದ್ಯ ಇದೇ ವಿಚಾರವಾಗಿ ಹಿರಿಯ ನಟಿ ಆಶಾ ಪರೇಖ್ (Asha Parekh)​ ಅವರು ಮಾತನಾಡಿದ್ದಾರೆ.

ನಟಿ ಆಶಾ ಪರೇಖ್​ ಅವರು ಇತ್ತೀಚೆಗೆ ಸಂದರ್ಶನ ಒಂದದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ‘ಬೇಷರಂ ರಂಗ್’ ಹಾಡಿನ ಕುರಿತಾಗಿ ಕೇಳಲಾಗಿದೆ. ಪ್ರಶ್ನೆಗೆ ಉತ್ತರಿಸಿರುವ ಆಶಾ ಪರೇಖ್, ‘ಚಿತ್ರದ ಮೂಲ ಉದ್ದೇಶ ಮನರಂಜನೆ ನೀಡುವುದಾಗಿದೆ. ನಟಿ ಕೇಸಿರಿ ಬಣ್ಣದ ಬಟ್ಟೆ ಧರಿಸಿರುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ದೀಪಿಕಾ ಪಡುಕೋಣೆ ಪರವಾಗಿ ನಿಂತಿದ್ದಾರೆ. ‘ಕೆಲ ಚಿತ್ರಗಳು ಹೇಳಿಕೊಳ್ಳುವಂತಹ ದಾಖಲೆ ಮಾಡುತ್ತಿಲ್ಲ. ಹಾಗಾಗಿ ಬಾಲಿವುಡ್​ ಅವನತಿಯತ್ತ ಸಾಗುತ್ತಿದೆ’ ಎಂದರು.

ಇದನ್ನೂ ಓದಿ: Pathaan Besharam Rang: ‘ಜಿಹಾದಿ ಶಾರುಖ್​ನ ಜೀವಂತ ಸುಡುತ್ತೇನೆ’; ಓಪನ್ ಆಗಿ ಹೇಳಿಕೆ ನೀಡಿದ ಅಯೋಧ್ಯೆ ಸ್ವಾಮೀಜಿ

‘ಸದ್ಯ ಚಿತ್ರರಂಗದಲ್ಲಿ ಪರಿಸ್ಥಿತಿ ಈಗಾಗಲೇ ತುಂಬಾ ಕೆಟ್ಟಿದೆ. ಮತ್ತೆ ಅದರ ಮೇಲೆ ನಿಷೇಧ ಅಥವಾ ಬಹಿಷ್ಕಾರದ ಪ್ರವೃತ್ತಿಗಳು ಹಾನಿಯನ್ನುಂಟುಮಾಡುತ್ತವೆ. ಉದ್ಯಮವೇ ಕೊನೆಗೊಳ್ಳುತ್ತದೆ. ಮುಂದೆ ಜನರು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗುವುದಿಲ್ಲ. ಸಿನಿಮಾಗಳು ವಿಫಲವಾಗುತ್ತಲೇ ಇದ್ದರೆ, ಇನ್ನೊಂದು ಚಿತ್ರ ಹೇಗೆ ನಿರ್ಮಾಣವಾಗುತ್ತದೆ’ ಎಂದು ಅವರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಷ್ಟೇ ಟ್ರೋಲ್ ಆದರೂ ಕಡಿಮೆ ಆಗಿಲ್ಲ ಶಾರುಖ್ ಖಾನ್ ಖ್ಯಾತಿ; ಸ್ಟಾರ್ ನಟನ ಅಪರೂಪದ ಸಾಧನೆ

ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿರುವ ‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ‘ಯಶ್​ ರಾಜ್​ ಫಿಲ್ಮ್ಸ್​’ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ವಿಲನ್​ ಆಗಿ ಜಾನ್​ ಅಬ್ರಾಹಂ ನಟಿಸಿದ್ದು, ಸ್ಟಾರ್​ ಮೆರುಗು ಹೆಚ್ಚಿದೆ. ಅದ್ದೂರಿ ಬಜೆಟ್​ನಲ್ಲಿ ತಯಾರಾದ ಈ ಸಿನಿಮಾವನ್ನು ವಿವಿಧ ದೇಶಗಳಲ್ಲಿ ಚಿತ್ರಿಸಲಾಗಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಶಾರುಖ್​ ಖಾನ್​ ಅವರು ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆ ಕಾರಣದಿಂದಲೂ ನಿರೀಕ್ಷೆ ಹೆಚ್ಚಿದೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

TV9 Web

TV9 Kannada

Read More
Loading...
Unable to load recommendations.
Follow Us