‘ಭೋಲಾ ಶಂಕರ್ ಒಂದು ದುರಂತ’; ಚಿರಂಜೀವಿಗೆ ಮತ್ತೊಂದು ಸೋಲು

ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಸಿನಿಮಾ ಸೋತಿದೆ. ಟ್ರೇಲರ್ ನೋಡಿದ ಅನೇಕರಿಗೆ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿರಲಿಲ್ಲ. ಚಿತ್ರ ನೋಡಿದವರು ತೆಗಳುತ್ತಿದ್ದಾರೆ. ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ನಲ್ಲಿ ಚಿತ್ರಕ್ಕೆ ಕೇವಲ 6.2 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲಿ 4.6 ರೇಟಿಂಗ್ ದೊರೆತಿದೆ.

‘ಭೋಲಾ ಶಂಕರ್ ಒಂದು ದುರಂತ’; ಚಿರಂಜೀವಿಗೆ ಮತ್ತೊಂದು ಸೋಲು
ಚಿರಂಜೀವಿ

Updated on: Aug 12, 2023 | 7:08 AM

ನಟ ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ‘ಆಚಾರ್ಯ’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಹೀನಾಯವಾಗಿ ಸೋತಿತು. ಚಿರಂಜೀವಿ ನಟನೆಯ ‘ಭೋಲಾ ಶಂಕರ್’ ಚಿತ್ರ (Bhola Shankar Movie) ಕೂಡ ಆಗಸ್ಟ್ 11ರಂದು ರಿಲೀಸ್ ಆಯಿತು. ಈ ಚಿತ್ರವನ್ನು ಪ್ರೇಕ್ಷಕರು ‘ದುರಂತ’ ಎಂದು ಘೋಷಿಸಿದ್ದಾರೆ. #Bholashankardisaster ಹ್ಯಾಶ್​ಟ್ಯಾಗ್ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಚಿರಂಜೀವಿ (Chiranjeevi) ವೃತ್ತಿ ಜೀವನಕ್ಕೆ ಇದು ಹೊಡೆತ ನೀಡಿದೆ. ಒಳ್ಳೆಯ ಸ್ಕ್ರಿಪ್ಟ್ ಆಯ್ಕೆ ಮಾಡಿಕೊಳ್ಳುವಂತೆ ಅನೇಕರು ಕೋರಿದ್ದಾರೆ.

‘ಆಚಾರ್ಯ’, ‘ಗಾಡ್ ಫಾದರ್’ ಸಿನಿಮಾಗಳು ಸೋತವು. ಈಗ ಅವರ ನಟನೆಯ ‘ಭೋಲಾ ಶಂಕರ್’ ಸಿನಿಮಾ ಕೂಡ ಸೋತಿದೆ. ಟ್ರೇಲರ್ ನೋಡಿದ ಅನೇಕರಿಗೆ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿರಲಿಲ್ಲ. ಚಿತ್ರ ನೋಡಿದವರು ತೆಗಳುತ್ತಿದ್ದಾರೆ. ಟಿಕೆಟ್ ಬುಕಿಂಗ್ ಆ್ಯಪ್ ‘ಬುಕ್ ಮೈ ಶೋ’ನಲ್ಲಿ ಚಿತ್ರಕ್ಕೆ ಕೇವಲ 6.2 ರೇಟಿಂಗ್ ಸಿಕ್ಕಿದೆ. ಐಎಂಡಿಬಿಯಲ್ಲಿ 4.6 ರೇಟಿಂಗ್ ದೊರೆತಿದೆ. ಮೆಹರ್ ರಮೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ‘ಭೋಲಾ ಶಂಕರ್’ ಟ್ರೇಲರ್​ನಲ್ಲಿ ಮಿಂಚಿದ ಚಿರಂಜೀವಿ; ಖಡಕ್ ವಿಲನ್ ಆಗಿ ಕಾಣಿಸಿಕೊಂಡ ರವಿಶಂಕರ್

ಚಿರಂಜೀವಿ ಅವರಿಗೆ ಜೊತೆಯಾಗಿ ತಮನ್ನಾ ಕಾಣಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಚಿರಂಜೀವಿಗೆ ಜೊತೆಯಾಗಿ ನಟಿಸಿದ್ದಾರೆ. ‘ದಿನ ಕಳೆದಂತೆ ಇಬ್ಬರ ವೃತ್ತಿಜೀವನ ಹದಗೆಡುತ್ತಿದೆ. ಸಿನಿಮಾದಲ್ಲಿ ಚಿರಂಜೀವಿ. ರಾಜಕೀಯದಲ್ಲಿ ವೈಎಸ್ ಜಗನ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಭೂಮಿಕಾ ಚಿತ್ರಮಂದಿರದಲ್ಲಿ ಯಾವುದೇ ಟಿಕೆಟ್ ಬುಕ್ ಆಗಿಲ್ಲ. ಇದನ್ನು ಅನೇಕರು ಟೀಕೆ ಮಾಡಿದ್ದಾರೆ.

ಸದ್ಯ ಚಿರಂಜೀವಿ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಮುಂದೆ ಯಾವ ರೀತಿಯ ಸಿನಿಮಾ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us