ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್​ ಬಾಸ್​ ಎದುರು ಸ್ಪರ್ಧಿಗಳ ಹೊಸ ಬೇಡಿಕೆ

ಇಂದು ಬಿಗ್​ ಬಾಸ್​ ಎದುರು ಮನೆ ಮಂದಿ ಹೊಸ ಬೇಡಿಕೆ ಇಟ್ಟಿದ್ದಾರೆ. ಶಮಂತ್​ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ಎಂದಿದ್ದಾರೆ ಮನೆ ಮಂದಿ.

ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್​ ಬಾಸ್​ ಎದುರು ಸ್ಪರ್ಧಿಗಳ ಹೊಸ ಬೇಡಿಕೆ
ಬಿಗ್​ ಬಾಸ್​ ಕನ್ನಡ ಸೀಸನ್​ 8

Updated on: Mar 15, 2021 | 10:21 PM

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರದ್ದೂ ಒಂದೇ ಬೇಡಿಕೆ. ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಕು! ಅಷ್ಟಕ್ಕೂ ಎಲ್ಲರೂ ಈ ಬೇಡಿಕೆ ಇಟ್ಟಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಶಮಂತ್​ ಅಲಿಯಾಸ್​ ಬ್ರೋ ಗೌಡ ಅವರ ಸ್ವಾರ್ಥ!

ಮೈಕ್​ ಇದ್ದ ಹೊರತಾಗಿಯೂ ಬ್ರೋ ಗೌಡ ಎಲ್ಲರ ಕಿವಿಯಲ್ಲಿ ಹೋಗಿ ಮಾತನಾಡುತ್ತಿದ್ದರು. ಇದಕ್ಕೆ ಸುದೀಪ್​ ಸಿಟ್ಟಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚುಮಾಡಿ ಮೈಕ್​ ನೀಡುತ್ತೇವೆ. ಆದರೆ, ಕಿವಿಯಲ್ಲಿ ಹೋಗಿ ಮಾತನಾಡುವ ಮೂಲಕ ಶಮಂತ್​  ಅವರು ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದಿದ್ದ ಸುದೀಪ್​, ಇದಕ್ಕೆ ಶಿಕ್ಷೆ ನೀಡುವುದಾಗಿಯೂ ಹೇಳಿದರು.

ಬಿಗ್​ ಬಾಸ್​ ಮೂರನೇ ವಾರದ ಎಲಿಮಿನೇಷನ್​ಗೆ ಶಮಂತ್​ ನೇರವಾಗಿ ನಾಮಿನೇಟ್​ ಆಗಬೇಕು ಅಥವಾ ಮನೆಯವರೆಲ್ಲರೂ ಬೆಡ್​ರೂಂ ಏರಿಯಾವನ್ನು ಬಿಟ್ಟುಕೊಡಬೇಕು ಎನ್ನುವ ಕಂಡೀಷನ್​ ಹಾಕಿದರು ಸುದೀಪ್​. ಬ್ರೋ ಗೌಡ ಅವರನ್ನು ಉಳಿಸಲು ಮನೆಯಲ್ಲಿ ಕೆಲವರು ಸಮ್ಮತಿ ಸೂಚಿಸಿದರೆ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಆದರೆ, ಶಮಂತ್​ ಎಮೋಷನಲ್​ ಆಗಿ ಡೈಲಾಗ್​ ಹೊಡೆದರು. ನನ್ನ ಅಪ್ಪ-ಅಮ್ಮ ಉಸಿರಾಡ್ತಿರೋದು ನನ್ನ ಹೆಸರಿಂದ ಎಂದು ಹೇಳಿ ಭಾವುಕರಾದರು. ಹೀಗಾಗಿ ಮನೆಯವರೆಲ್ಲರೂ ಬೆಡ್​ ರೂಂ ಬಿಡೋಕೆ ಒಪ್ಪಿಕೊಂಡರು. ಈ ಮೂಲಕ ಶಮಂತ್​ ಸೇಫ್​ ಆದರು.

ಶಮಂತ್​ ಅವರನ್ನು ಉಳಿಸೋಕೆ ಹೋಗಿ ಈಗ ಮನೆಮಂದಿಯೆಲ್ಲ ಲಿವಿಂಗ್ ಏರಿಯಾದಲ್ಲಿ ಉಳಿದುಕೊಳ್ಳುವಂತಾಗಿದೆ. ಯಾರಿಗೂ ನಿದ್ರೆ ಕೂಡ ಬರುತ್ತಿಲ್ಲ. ಇದು ಮನೆಯವರ ಕೋಪಕ್ಕೆ ಕಾರಣವಾಗಿದೆ. ಎಲ್ಲರೂ ಶಮಂತ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಷ್ಟೇ ಅಲ್ಲ ಶಮಂತ್​ ಸ್ವಾರ್ಥ ಜೀವಿ ಎಂದು ಕಿಡಿಕಾರುತ್ತಿದ್ದಾರೆ. ಇಂದು ಬಿಗ್​ ಬಾಸ್​ ಎದುರು ಮನೆ ಮಂದಿ ಹೊಸ ಬೇಡಿಕೆ ಇಟ್ಟಿದ್ದಾರೆ. ಶಮಂತ್​ ಅವರನ್ನು ಬೇಕಿದ್ದರೆ ಮನೆಯಿಂದ ಹೊರಗೆ ಕಳುಹಿಸಿ. ನಮಗೆ ನಮ್ಮ ಬೆಡ್​ ರೂಂ ಮತ್ತೆ ಬೇಕು ಎಂದಿದ್ದಾರೆ.

ಇದನ್ನೂ ಓದಿ: BBK8: ‘ದಿವ್ಯಾನ ಬಿಟ್ಟು ಕೊಡು ಗುರೂ’ ಅಂತ ಮಂಜುಗೆ ಮನವಿ ಮಾಡಿದ ಶಮಂತ್​! ಕಿಚ್ಚನ ಎದುರಲ್ಲೇ ರಹಸ್ಯ ಬಯಲು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us