ಹೀರೋಯಿನ್ಗಳು ಸೌಂದರ್ಯ ಕಾಪಾಡಿಕೊಳ್ಳಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಾರೆ. ಮುಖಕ್ಕೆ ಬಿಸಿಲು ತಾಗದಂತೆ ನೋಡಿಕೊಳ್ಳುವುದು ಮಾತ್ರವಲ್ಲ, ಆಗಾಗ ಪಾರ್ಲರ್ಗೆ ಹೋಗಿ ಫೇಶಿಯಲ್ ಕೂಡ ಮಾಡಿಸಿಕೊಳ್ಳುತ್ತಾರೆ. ಇದೇ ರೀತಿ ಫೇಶಿಯಲ್ ಮಾಡಿಕೊಳ್ಳೋಕೆ ಹೋಗಿ ತಮಿಳು ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿಯ ಮುಖದ ಅಂದವೇ ಹೊರಟು ಹೋಗಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರ ಹಾಕಿದ್ದಾರೆ.
ಕಾಲಿವುಡ್ ನಟಿ ರೈಜಾ ವಿಲ್ಸನ್ ಇತ್ತೀಚೆಗೆ ಫೇಶಿಯಲ್ ಮಾಡಿಸಿಕೊಳ್ಳೋಕೆ ಆಸ್ಪತ್ರೆ ಒಂದಕ್ಕೆ ತೆರಳಿದ್ದರು. ಆಸ್ಪತ್ರೆಯವರು ಫೇಶಿಯಲ್ ಮಾತ್ರ ಮಾಡಿಲ್ಲ. ನಿಮ್ಮ ಸೌಂದರ್ಯ ವೃದ್ಧಿಸುತ್ತೇವೆ ಎಂದು ಚಿಕಿತ್ಸೆಗೆ ಮುಂದಾಗಿದ್ದಾರೆ. ರೈಜಾ ಎಷ್ಟೇ ಹೇಳಿದರೂ ಕೇಳದೆ ಚಿಕಿತ್ಸೆ ನೀಡಿದ್ದಾರೆ.
ಈ ಚಿಕಿತ್ಸೆ ಪಡೆದ ರೈಜಾ ಮನೆಗೆ ಬಂದಿದ್ದಾರೆ. ನಿಧಾನವಾಗಿ ಅವರ ಮುಖ ಊದಿಕೊಳ್ಳೋಕೆ ಆರಂಭವಾಗಿದೆ. ಬೆಳಗೆದ್ದು ನೋಡಿದರೆ ಅವರ ಕಣ್ಣಿನ ಕೆಳ ಭಾಗ ಸಂಪೂರ್ಣವಾಗಿ ಊದಿಕೊಂಡಿತ್ತು. ನಂತರ ಚಿಕಿತ್ಸೆ ನೀಡಿದ ವೈದ್ಯರಿಗೆ ಕರೆ ಮಾಡಿದರೆ ಅವರು ಕಾಲ್ ಪಿಕ್ ಮಾಡಲಿಲ್ಲ. ಆಸ್ಪತ್ರೆಗೆ ಕರೆ ಮಾಡಿದರೆ ವೈದ್ಯರು ಊರಿನಲ್ಲಿಲ್ಲ ಎನ್ನುವ ಉತ್ತರ ಬಂತು.
ಇನ್ನು, ಸಾಕಷ್ಟು ಜನರು ಈ ಆಸ್ಪತ್ರೆಯಿಂದ ಇದೇ ಮಾದರಿಯ ಸಮಸ್ಯೆ ಎದುರಿಸಿದ್ದಾರಂತೆ. ಈ ಬಗ್ಗೆ ರೈಜಾ ಇನ್ ಬಾಕ್ಸ್ಗೆ ಸಾಕಷ್ಟು ಜನರು ಮೆಸೇಜ್ ಮಾಡಿ ಇದೇ ರೀತಿಯ ಸಮಸ್ಯೆ ಹೇಳಿಕೊಂಡಿದ್ದಾರೆ. ಸದ್ಯ, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.
ತಮಿಳು ಬಿಗ್ ಬಾಸ್ ಮೊದಲ ಸೀಸನ್ಅನ್ನು ಕಮಲ್ ಹಾಸನ್ ನಡೆಸಿಕೊಟ್ಟಿದ್ದರು. ಈ ಸೀಸನ್ನಲ್ಲಿ ರೈಜಾ ಸ್ಪರ್ಧಿಯಾಗಿ ಮನೆ ಸೇರಿದ್ದರು. ಈ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಕಿಡಿ ಹಚ್ತೀವಿ; ಶಪಥ ಮಾಡಿದ ಚಕ್ರವರ್ತಿ, ಸಂಬರಗಿ
Bigg Boss Elimination: ಈ ವಾರದ ಎಲಿಮಿನೇಷನ್ಗೆ ಹೊಸ ಮಾರ್ಗ ಅನುಸರಿಸಿದ ಬಿಗ್ ಬಾಸ್!
Published On - 8:44 pm, Sun, 18 April 21