Bigg Boss Elimination: ಈ ವಾರದ ಎಲಿಮಿನೇಷನ್​ಗೆ ಹೊಸ ಮಾರ್ಗ ಅನುಸರಿಸಿದ ಬಿಗ್​ ಬಾಸ್​!

ಸಿನಿಮಾ ಕೆಲಸಗಳಿಗೆ ಸುದೀಪ್​ ಬೇರೆ ಬೇರೆ ಕಡೆಗಳಿಗೆ ತೆರಳಿದರೂ ವೀಕೆಂಡ್​ನಲ್ಲಿ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಇದು 8 ವರ್ಷಗಳಿಂದಲೂ ನಡೆದುಕೊಂಡೇ ಬಂದಿದೆ.

Bigg Boss Elimination: ಈ ವಾರದ ಎಲಿಮಿನೇಷನ್​ಗೆ ಹೊಸ ಮಾರ್ಗ ಅನುಸರಿಸಿದ ಬಿಗ್​ ಬಾಸ್​!
ಬಿಗ್​ ಬಾಸ್​ ಕನ್ನಡ
Follow us
ರಾಜೇಶ್ ದುಗ್ಗುಮನೆ
|

Updated on: Apr 18, 2021 | 7:48 PM

ಬಿಗ್​ ಬಾಸ್​ ಮನೆಯ ಏಳನೆ ವಾರದ ವೀಕೆಂಡ್​ ಭಿನ್ನ ರೀತಿಯ ಎಪಿಸೋಡ್​ಗೆ ಸಾಕ್ಷಿಯಾಗಿದೆ. ಪ್ರತಿ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್​ ಬಂದು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಆದರೆ, ಅನಾರೋಗ್ಯ ಕಾರಣದಿಂದ ಸುದೀಪ್​ ಬಂದಿಲ್ಲ. ಹೀಗಾಗಿ, ಎಲಿಮಿನೇಷನ್​ ಬೇರೆ ರೀತಿಯಲ್ಲಿ ನಡೆದಿದೆ. ಸಿನಿಮಾ ಕೆಲಸಗಳಿಗೆ ಸುದೀಪ್​ ಬೇರೆ ಬೇರೆ ಕಡೆಗಳಿಗೆ ತೆರಳಿದರೂ ವೀಕೆಂಡ್​ನಲ್ಲಿ ಬೆಂಗಳೂರಿಗೆ ವಾಪಾಸಾಗುತ್ತಿದ್ದರು. ಇದು 8 ವರ್ಷಗಳಿಂದಲೂ ನಡೆದುಕೊಂಡೇ ಬಂದಿದೆ. ಆದರೆ, ಈ ಬಾರಿ ಅನಾರೋಗ್ಯದ ಕಾರಣದಿಂದ ಅವರು ನಿರೂಪಣೆ ಮಾಡುತ್ತಿಲ್ಲ. ಈ ವಿಚಾರವನ್ನು ಅವರು ಇತ್ತೀಚೆಗೆ ಅಧಿಕೃತಗೊಳಿಸಿದ್ದರು.

ಸುದೀಪ್​ ಈ ವಾರ ಬರುವುದಿಲ್ಲ ಎಂಬುದು ಮನೆ ಮಂದಿಗೆ ಗೊತ್ತಿರಲಿಲ್ಲ. ಸ್ಪರ್ಧಿಗಳಿಗೆ ಈ ವಿಚಾರ ತಿಳಿದಾಗ ಶಾಕ್​ ಆಗಿದ್ದರು. ಸುದೀಪ್​ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದರು. ಈ ವಾರ ಟಾಸ್ಕ್​ಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸುವ ಕೆಲಸವನ್ನು ಬಿಗ್​ ಬಾಸ್​ ಮಾಡಿದೆ.

ಪ್ರತಿವಾರ ಎಲಿಮಿನೇಷ್​ನಗೆ ನಾಮಿನೇಟ್​ ಆದವರ ಪೈಕಿ ಸೇಫ್​ ಆದ ಕೆಲವರ ಹೆಸರನ್ನು ಸುದೀಪ್​ ಶನಿವಾರವೇ ಘೋಷಣೆ ಮಾಡುತ್ತಿದ್ದರು. ನಂತರ ಭಾನುವಾರ ಅಂತಿಮವಾಗಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದು ಘೋಷಣೆ ಆಗುತ್ತಿತ್ತು. ಆದರೆ, ಈ ಬಾರಿ ಬಿಗ್​ ಬಾಸ್​ ಬೇರೆಯದೇ ಮಾರ್ಗ ಅನುಸರಿಸಿದ್ದಾರೆ.

ಈ ವಾರ ಎಲ್ಲಾ ಸ್ಪರ್ಧಿಗಳನ್ನು ಲಿವಿಂಗ್​ ಏರಿಯಾದಲ್ಲಿ ಕೂರಿಸಲಾಗಿದೆ. ಕೊನೆಗೆ ಪರದೆ ಮೇಲೆ ಈ ವಾರ ನಾಮಿನೇಟ್​ ಆದವರ ವಿಡಿಯೋವನ್ನು ವಿಟಿಯನ್ನು ತೋರಿಸಲಾಗಿದೆ. ಇದನ್ನು ಕಲರ್ಸ್​ ಕನ್ನಡ ವಾಹಿನಿ ಪ್ರೋಮೋ ಮೂಲಕ ಹಂಚಿಕೊಂಡಿದೆ. ಸುದೀಪ್​ ಇಲ್ಲ ಎಂದ ಮಾತ್ರಕ್ಕೆ ಬೇರೆ ಯಾವುದೇ ಸ್ಟಾರ್​ ಕಲಾವಿದರಿಗೂ ಕಲರ್ಸ್​ ಕನ್ನಡ ವಾಹಿನಿ ಮಣೆ ಹಾಕಿಲ್ಲ.

ಅಂದಹಾಗೆ, ಈ ವಾರ ವಿಶ್ವನಾಥ್​ ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಅವರು ಈ ವಾರ ಅಷ್ಟಾಗಿ ಪರ್ಫಾರ್ಮೆನ್ಸ್​ ನೀಡಿಲ್ಲ. ಹೀಗಾಗಿ, ಅವರಿಗೆ ಕಡಿಮೆ ವೋಟ್​ಗಳು ಬಿದ್ದಿವೆ.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಇಲ್ಲದೇ ಬಿಗ್ ಬಾಸ್ ವೀಕೆಂಡ್ ಶೋ ನಡೆಸಿಕೊಡುವ ಸ್ಟಾರ್ ಯಾರು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ