AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Bigg Boss Elimination: ಸುದೀಪ್​ ಭೇಟಿ ಮಾಡದೇ ಬಿಗ್​ ಬಾಸ್​ ಮನೆಯಿಂದ ಹೊರಹೋದ ವಿಶ್ವನಾಥ್​

ಬಿಗ್​ ಬಾಸ್​ ಮನೆಯಲ್ಲಿ ಆರಂಭದಲ್ಲಿ ಉತ್ತಮವಾಗಿ ಆಡಿದ್ದ ಅವರು ನಂತರ ಕಳಪೆ ತೋರಿದ್ದರು, ಅಲ್ಲದೆ, ಕ್ಯಾಪ್ಟನ್ ಆದಾಗಂತೂ ಅವರ ಪ್ರದರ್ಶನ ತೃಪ್ತಿದಾಯಕವಾಗಿರಲಿಲ್ಲ.

Kannada Bigg Boss Elimination: ಸುದೀಪ್​ ಭೇಟಿ ಮಾಡದೇ ಬಿಗ್​ ಬಾಸ್​ ಮನೆಯಿಂದ ಹೊರಹೋದ ವಿಶ್ವನಾಥ್​
ವಿಶ್ವನಾಥ್​
ರಾಜೇಶ್ ದುಗ್ಗುಮನೆ
|

Updated on: Apr 18, 2021 | 10:20 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಸ್ಪರ್ಧಿಸುತ್ತಿದ ಅತಿ ಕಿರಿಯ ಸ್ಪರ್ಧಿ ಎಂಬ ಖ್ಯಾತಿ ವಿಶ್ವನಾಥ್​ ಅವರದ್ದಾಗಿತ್ತು. ಆರಂಭದಲ್ಲಿ ಎಡವಿದ್ದ ಅವರು ನಂತರ ತಿದ್ದಿಕೊಂಡು ಮುನ್ನಡೆದಿದ್ದರು. ಆದರೆ, ಈ ವಾರ ಅವರ ಪರ್ಫಾರ್ಮೆನ್ಸ್​ ಕೊಂಚ ತಗ್ಗಿತ್ತು. ಹೀಗಾಗಿ ಅವರು ಬಿಗ್​ ಬಾಸ್​ ಮನೆಯಿಂದ ಹೊರ ಹೋಗಿದ್ದಾರೆ. 

ವಿಶ್ವ ಕ್ಯಾಪ್ಟನ್​ ಆಗಿದ್ದ ಒಂದು ವಾರ ಹೊರತುಪಡಿಸಿ ಮತ್ತೆಲ್ಲ ವಾರದಲ್ಲೂ ವಿಶ್ವನಾಥ್​ ನಾಮಿನೇಟ್​ ಆಗಿದ್ದರು. ಆದರೂ ಏಳು ವಾರಗಳ ಕಾಲ ಎಲ್ಲರಿಗೂ ಪೈಪೋಟಿ ನೀಡಿದ ಅವರು ಈಗ ದೊಡ್ಮನೆಯಿಂದ ಹೊರಬಂದಿದ್ದಾರೆ. ಈ ವಾರ ಶಮಂತ್​ ಬ್ರೊ ಗೌಡ ಕೂಡ ಮನೆಯಿಂದ ಹೊರಗೆ ಹೋಗಬಹುದು ಎಂದು ಊಹಿಸಲಾಗಿತ್ತು.  ಅವರು ಕಳೆದವಾರ ಅದೃಷ್ಟದ ಮೂಲಕ ಸೇವ್​ ಆಗಿದ್ದರು. ಆದರೆ, ಈ ವಾರ ಅದೃಷ್ಟ ವಿಶ್ವ ಅವರಿಗೆ ಕೈಕೊಟ್ಟಿದೆ.

ಬಿಗ್​ ಬಾಸ್​ ಮನೆಯಲ್ಲಿ ಆರಂಭದಲ್ಲಿ ಉತ್ತಮವಾಗಿ ಆಡಿದ್ದ ಅವರು ನಂತರ ಕಳಪೆ ತೋರಿದ್ದರು, ಅಲ್ಲದೆ, ಕ್ಯಾಪ್ಟನ್ ಆದಾಗಲಂತೂ ಅವರ ಪ್ರದರ್ಶನ ತೃಪ್ತಿದಾಯಕವಾಗಿರಲಿಲ್ಲ. ಈ ಬಾರಿ ವೀಕ್ಷಕರು ವಿಶ್ವ ಅವರಿಗೆ ಕಡಿಮೆ ವೋಟ್​ ನೀಡಿದ್ದಾರೆ.

ಪ್ರತಿವಾರ ಎಲಿಮಿನೇಷ್​ನಗೆ ನಾಮಿನೇಟ್​ ಆದವರ ಪೈಕಿ ಸೇಫ್​ ಆದ ಕೆಲವರ ಹೆಸರನ್ನು ಸುದೀಪ್​ ಶನಿವಾರವೇ ಘೋಷಣೆ ಮಾಡುತ್ತಿದ್ದರು. ನಂತರ ಭಾನುವಾರ ಅಂತಿಮವಾಗಿ ಯಾರು ಮನೆಯಿಂದ ಹೊರ ಹೋಗುತ್ತಾರೆ ಎಂಬುದು ಘೋಷಣೆ ಆಗುತ್ತಿತ್ತು. ಆದರೆ, ಈ ಬಾರಿ ಬಿಗ್​ ಬಾಸ್​ ಬೇರೆಯದೇ ಮಾರ್ಗ ಅನುಸರಿಸಿದ್ದಾರೆ.  ಈ ವಾರ ಎಲ್ಲಾ ಸ್ಪರ್ಧಿಗಳನ್ನು ಲಿವಿಂಗ್​ ಏರಿಯಾದಲ್ಲಿ ಕೂರಿಸಲಾಗಿದೆ. ಕೊನೆಗೆ ಪರದೆ ಮೇಲೆ ಈ ವಾರ ನಾಮಿನೇಟ್​ ಆದವರ ವಿಡಿಯೋವನ್ನು ವಿಟಿಯನ್ನು ತೋರಿಸಲಾಗಿದೆ. ಅದರಲ್ಲಿ ವಿಶ್ವನಾಥ್‌ ಅವರ ಬಿಗ್ ಬಾಸ್ ಮನೆಯ ಜರ್ನಿಯ ವಿಡಿಯೋ ಪ್ರಸಾರಗಿದೆ. ಹಾಗಾಗಿ, ಅವರು ಎಲಿಮಿನೇಟ್ ಆದರು. ಅಲ್ಲಿಗೆ 48 ದಿನಗಳ ಬಿಗ್ ಬಾಸ್ ಮನೆಯ ಜರ್ನಿಯನ್ನು ಅವರು ಮುಕ್ತಾಯಗೊಳಿಸಿದರು.

ಧನುಶ್ರೀ, ನಿರ್ಮಲಾ ಚೆನ್ನಪ್ಪ, ಗೀತಾ ಭಾರತಿ ಭಟ್​, ಚಂದ್ರಕಲಾ ಮೋಹನ್​, ಶಂಕರ್​ ಅಶ್ವತ್ಥ್​ ಮತ್ತು ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ನೀಡಿದ್ದ ವೈಜಯಂತಿ ಅಡಿಗ ಬಳಿಕ 7ನೇ ಸ್ಪರ್ಧಿಯಾಗಿ ವಿಶ್ವನಾಥ್​ ಎಲಿಮಿನೇಟ್​ ಆಗಿದ್ದಾರೆ. ಇನ್ನುಳಿದ ಸದಸ್ಯರ ನಡುವೆ ಪೈಪೋಟಿ ಮುಂದುವರಿದಿದೆ.

ಇದನ್ನೂ ಓದಿ: ಫೇಶಿಯಲ್​ ತಂದ ಆಪತ್ತು; ಬಿಗ್​ ಬಾಸ್​ ಮಾಜಿ ಸ್ಪರ್ಧಿಯ ಮುಖ ಹೀಗಾಗೋಯ್ತಾ?