ಫೇಶಿಯಲ್​ ತಂದ ಆಪತ್ತು; ಬಿಗ್​ ಬಾಸ್​ ಮಾಜಿ ಸ್ಪರ್ಧಿಯ ಮುಖ ಹೀಗಾಗೋಯ್ತಾ?

ಕಾಲಿವುಡ್​ ನಟಿ ರೈಜಾ ವಿಲ್ಸನ್​ ಇತ್ತೀಚೆಗೆ ಫೇಶಿಯಲ್​ ಮಾಡಿಸಿಕೊಳ್ಳೋಕೆ ಆಸ್ಪತ್ರೆ ಒಂದಕ್ಕೆ ತೆರಳಿದ್ದರು. ಆಸ್ಪತ್ರೆಯವರು ಫೇಶಿಯಲ್​ ಮಾತ್ರ ನಿಲ್ಲಿಸಲಿಲ್ಲ. ಒತ್ತಾಯದಿಂದ ಚಿಕಿತ್ಸೆ ಕೊಟ್ಟಿದ್ದರು.

ಫೇಶಿಯಲ್​ ತಂದ ಆಪತ್ತು; ಬಿಗ್​ ಬಾಸ್​ ಮಾಜಿ ಸ್ಪರ್ಧಿಯ ಮುಖ ಹೀಗಾಗೋಯ್ತಾ?
ರೈಜಾ ವಿಲ್ಸನ್​

ಹೀರೋಯಿನ್​ಗಳು ಸೌಂದರ್ಯ ಕಾಪಾಡಿಕೊಳ್ಳಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಾರೆ. ಮುಖಕ್ಕೆ ಬಿಸಿಲು ತಾಗದಂತೆ ನೋಡಿಕೊಳ್ಳುವುದು ಮಾತ್ರವಲ್ಲ, ಆಗಾಗ ಪಾರ್ಲರ್​ಗೆ ಹೋಗಿ ಫೇಶಿಯಲ್​ ಕೂಡ ಮಾಡಿಸಿಕೊಳ್ಳುತ್ತಾರೆ. ಇದೇ ರೀತಿ ಫೇಶಿಯಲ್​ ಮಾಡಿಕೊಳ್ಳೋಕೆ ಹೋಗಿ ತಮಿಳು ನಟಿ ಹಾಗೂ ಮಾಜಿ ಬಿಗ್​ ಬಾಸ್​ ಸ್ಪರ್ಧಿಯ ಮುಖದ ಅಂದವೇ ಹೊರಟು ಹೋಗಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರ ಹಾಕಿದ್ದಾರೆ. ಕಾಲಿವುಡ್​ ನಟಿ ರೈಜಾ ವಿಲ್ಸನ್​ ಇತ್ತೀಚೆಗೆ ಫೇಶಿಯಲ್​ ಮಾಡಿಸಿಕೊಳ್ಳೋಕೆ ಆಸ್ಪತ್ರೆ ಒಂದಕ್ಕೆ ತೆರಳಿದ್ದರು. ಆಸ್ಪತ್ರೆಯವರು ಫೇಶಿಯಲ್ ಮಾತ್ರ ಮಾಡಿಲ್ಲ. ನಿಮ್ಮ ಸೌಂದರ್ಯ ವೃದ್ಧಿಸುತ್ತೇವೆ ಎಂದು ಚಿಕಿತ್ಸೆಗೆ ಮುಂದಾಗಿದ್ದಾರೆ. ರೈಜಾ ಎಷ್ಟೇ ಹೇಳಿದರೂ ಕೇಳದೆ ಚಿಕಿತ್ಸೆ ನೀಡಿದ್ದಾರೆ.

ಈ ಚಿಕಿತ್ಸೆ ಪಡೆದ ರೈಜಾ ಮನೆಗೆ ಬಂದಿದ್ದಾರೆ. ನಿಧಾನವಾಗಿ ಅವರ ಮುಖ ಊದಿಕೊಳ್ಳೋಕೆ ಆರಂಭವಾಗಿದೆ. ಬೆಳಗೆದ್ದು ನೋಡಿದರೆ ಅವರ ಕಣ್ಣಿನ ಕೆಳ ಭಾಗ ಸಂಪೂರ್ಣವಾಗಿ ಊದಿಕೊಂಡಿತ್ತು. ನಂತರ ಚಿಕಿತ್ಸೆ ನೀಡಿದ ವೈದ್ಯರಿಗೆ ಕರೆ ಮಾಡಿದರೆ ಅವರು ಕಾಲ್​ ಪಿಕ್​ ಮಾಡಲಿಲ್ಲ. ಆಸ್ಪತ್ರೆಗೆ ಕರೆ ಮಾಡಿದರೆ ವೈದ್ಯರು ಊರಿನಲ್ಲಿಲ್ಲ ಎನ್ನುವ ಉತ್ತರ ಬಂತು.

ಇನ್ನು, ಸಾಕಷ್ಟು ಜನರು ಈ ಆಸ್ಪತ್ರೆಯಿಂದ ಇದೇ ಮಾದರಿಯ ಸಮಸ್ಯೆ ಎದುರಿಸಿದ್ದಾರಂತೆ. ಈ ಬಗ್ಗೆ ರೈಜಾ ಇನ್​ ಬಾಕ್ಸ್​ಗೆ ಸಾಕಷ್ಟು ಜನರು ಮೆಸೇಜ್​ ಮಾಡಿ ಇದೇ ರೀತಿಯ ಸಮಸ್ಯೆ ಹೇಳಿಕೊಂಡಿದ್ದಾರೆ. ಸದ್ಯ, ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

ತಮಿಳು ಬಿಗ್​ ಬಾಸ್​ ಮೊದಲ ಸೀಸನ್​ಅನ್ನು ಕಮಲ್​ ಹಾಸನ್​ ನಡೆಸಿಕೊಟ್ಟಿದ್ದರು. ಈ ಸೀಸನ್​ನಲ್ಲಿ ರೈಜಾ ಸ್ಪರ್ಧಿಯಾಗಿ ಮನೆ ಸೇರಿದ್ದರು. ಈ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಕಿಡಿ ಹಚ್ತೀವಿ; ಶಪಥ ಮಾಡಿದ ಚಕ್ರವರ್ತಿ, ಸಂಬರಗಿ 

Bigg Boss Elimination: ಈ ವಾರದ ಎಲಿಮಿನೇಷನ್​ಗೆ ಹೊಸ ಮಾರ್ಗ ಅನುಸರಿಸಿದ ಬಿಗ್​ ಬಾಸ್​!

Published On - 8:44 pm, Sun, 18 April 21

Click on your DTH Provider to Add TV9 Kannada