ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?

ಮನೆಯಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್​ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ಇದ್ದರು. ಹೆಣ್ಣುಮಕ್ಕಳು ಪತ್ರವನ್ನು ಅಡಗಿಸಿಡಬೇಕು. ಈ ರೀತಿ ಅಡಗಿಸಿಟ್ಟ ಪತ್ರವನ್ನು ವಾರ್ಡನ್​ ಹುಡುಕಿ ತೆಗೆಯಬೇಕು.

ಮಂಜುಗೆ ನೇರವಾಗಿಯೇ ದ್ರೋಹ ಬಗೆದ ದಿವ್ಯಾ ಸುರೇಶ್​; ಈ ತಪ್ಪನ್ನು ಅವರು ಕ್ಷಮಿಸ್ತಾರಾ?
ಮಂಜು-ದಿವ್ಯಾ ಸುರೇಶ್​
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Apr 19, 2021 | 8:27 AM

ಬಿಗ್​ ಬಾಸ್​ ಮನೆಯಲ್ಲಿ ಭಾವನೆಗಳಿಗೆ ಪ್ರಾಮುಖ್ಯತೆ ನೀಡಲೇಬಾರದು. ಈ ಅಭಿಪ್ರಾಯ ಅಲ್ಲಿ ಪದೇಪದೇ ಕೇಳಿಬರುತ್ತಲೇ ಇರುತ್ತದೆ. ಹಾಗಾಗಿ ಮನೆ ಸೇರಿರುವ ಪ್ರತಿ ಸ್ಪರ್ಧಿ ಕೂಡ ಬಹಳ ಎಚ್ಚರಿಕೆಯಿಂದ ಆಡುತ್ತಾರೆ. ಇಂದು ಫ್ರೆಂಡ್​ ಆಗಿದ್ದವರು ನಾಳೆ ಬದಲಾಗಬಹುದು. ಇದಕ್ಕೆ ದಿವ್ಯಾ ಸುರೇಶ್​ ಉತ್ತಮ ಉದಾಹರಣೆ. ಮಂಜು ಪಾವಗಡ ಮಾಡಿದ ಸಹಾಯವನ್ನು ದಿವ್ಯಾ ಮರೆತುಬಿಟ್ಟಿದ್ದಾರೆ! ಪ್ರತಿ ವಾರ ಕ್ಯಾಪ್ಟನ್​ ಆಗೋಕೆ ಟಾಸ್ಕ್​ ಒಂದನ್ನು ನೀಡಲಾಗುತ್ತದೆ. ಈ ಟಾಸ್ಕ್​ನಲ್ಲಿ ಗೆದ್ದವರು ಕ್ಯಾಪ್ಟನ್​ ಆಗುತ್ತಾರೆ. ಏಳನೇ ವಾರದ ಟಾಸ್ಕ್​ನಲ್ಲಿ ಬಾಯ್ಸ್​ ಹಾಸ್ಟೆಲ್​​, ಗರ್ಲ್ಸ್​ ಹಾಸ್ಟೆಲ್​ ಎಂದು ಬೇರ್ಪಡಿಸಲಾಗಿತ್ತು. ಈ ವೇಳೆ ಹುಡುಗರು ಹುಡುಗಿಯರಿಗೆ ಪತ್ರ ಬರೆಯಬೇಕು. ಹಾಸ್ಟೆಲ್​ ವಾರ್ಡನ್​ಗೆ ಆ ಪತ್ರಗಳು ಸಿಗದಂತೆ ಹೆಣ್ಣುಮಕ್ಕಳು ಕಾಪಾಡಿಕೊಳ್ಳಬೇಕು.

ಮನೆಯಲ್ಲಿ ಹೆಣ್ಣುಮಕ್ಕಳ ಹಾಸ್ಟೆಲ್​ ವಾರ್ಡನ್​ ಆಗಿ ನಿಧಿ ಸುಬ್ಬಯ್ಯ ಇದ್ದರು. ಹೆಣ್ಣುಮಕ್ಕಳು ಪತ್ರವನ್ನು ಅಡಗಿಸಿಡಬೇಕು. ಈ ರೀತಿ ಅಡಗಿಸಿಟ್ಟ ಪತ್ರವನ್ನು ವಾರ್ಡನ್​ ಹುಡುಕಿ ತೆಗೆಯಬೇಕು. ಅಚ್ಚರಿ ಎಂದರೆ, ದಿವ್ಯಾ ಸುರೇಶ್​ ಜತೆ ನಿಧಿ ಒಪ್ಪಂದ ಒಂದನ್ನು ಮಾಡಿಕೊಂಡಿದ್ದರಂತೆ. ವೀಕೆಂಡ್​ನಲ್ಲಿ ಈ ವಿಚಾರ ಬಯಲಾಗಿದೆ.

ಯಾರ್ಯಾರು ಪತ್ರವನ್ನು ಎಲ್ಲಿಟ್ಟಿದ್ದಾರೆ ಎಂಬುದನ್ನು ನೀನು ಹೇಳಿದರೆ ನಿನ್ನ ಪತ್ರವನ್ನು ತೆಗೆದುಕೊಳ್ಳುವುದಿಲ್ಲ ಡೀಲ್​ ಅನ್ನು ದಿವ್ಯಾ ಸುರೇಶ್​ ಮುಂದಿಟ್ಟಿದ್ದರು ನಿಧಿ. ಇದಕ್ಕೆ ದಿವ್ಯಾ ಸುರೇಶ್​ ಒಪ್ಪಿಗೆ ಸೂಚಿಸಿದ್ದರು. ಈ ಒಪ್ಪಂದದಿಂದ ದಿವ್ಯಾ ಬಳಿಯೇ ಹೆಚ್ಚು ಪತ್ರಗಳು ಉಳಿದುಕೊಂಡಿದ್ದವು. ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಕೂಡ ಆಯ್ಕೆ ಆಗಿದ್ದರು.

ಈ ವಿಚಾರ ಹೊರ ಬರುತ್ತಿದ್ದಂತೆ ಮನೆಯವರಿಗೆ ಶಾಕ್​ ಆಗಿದೆ. ಆಗ, ದಿವ್ಯಾ ನಾನು ಈ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮೊದಲು ಮಂಜು ಬಳಿ ಈ ಬಗ್ಗೆ ಚರ್ಚೆ ಮಾಡಿದ್ದೆ ಎಂದು ಹೇಳಿದ್ದಾರೆ. ಈ ಮೂಲಕ ಮಂಜು ಅವರನ್ನೂ ಸಿಕ್ಕಿಸಿದ್ದಾರೆ. ಮಂಜು ಸಹಾಯ ಮಾಡಿದ್ದನ್ನು ಎಲ್ಲರ ಎದುರು ಹೇಳಿದ್ದು ಎಷ್ಟು ಸರಿ ಎಂದು ಮನೆಯವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada: ಮಂಜು ಪಾವಗಡ ಅಲ್ಲ, ಬಿಗ್​ ಬಾಸ್​ ಗೆಲ್ಲೋದು ಇವರು!

ದಿವ್ಯಾ ಸುರೇಶ್​ಗೆ ಮಗಳು ಎಂದಿದ್ದು ಫೇಕ್​! ಚಕ್ರವರ್ತಿ ಚಂದ್ರಚೂಡ್​ ಅಸಲಿ ಮುಖ ಬಯಲು

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ