Rashmika Mandanna: ಮುಂಬೈ ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ದೇವರಕೊಂಡ​ ; ಮುಖ ಮುಚ್ಚಿಕೊಂಡ ನಟ ​

Rashmika Mandanna-Vijay Deverakonda: ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಬಿಡುವು ಮಾಡಿಕೊಂಡು ಮೀಟ್​ ಆಗುತ್ತಿದ್ದಾರೆ.

Rashmika Mandanna: ಮುಂಬೈ ಜಿಮ್​ನಲ್ಲಿ ಒಟ್ಟಾಗಿ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ-ದೇವರಕೊಂಡ​ ; ಮುಖ ಮುಚ್ಚಿಕೊಂಡ ನಟ ​
ವಿಜಯ್​ ದೇವರಕೊಂಡ -ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಇಬ್ಬರೂ ಮುಂಬೈನಲ್ಲಿದ್ದಾರೆ. ಸಮಯ ಸಿಕ್ಕಾಗೆಲ್ಲ ಇಬ್ಬರೂ ಮೀಟ್​ ಆಗುತ್ತಿದ್ದಾರೆ. ಈಗ ವಿಜಯ್​ ಹಾಗೂ ರಶ್ಮಿಕಾ ಒಟ್ಟಾಗಿ ಜಿಮ್​ಗೆ ತೆರಳಿ ವೌರ್ಕ್​ಔಟ್​ ಮಾಡಿದ್ದಾರೆ. ಜಿಮ್​ನಿಂದ ಹೊರ ಬರುವಾಗ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಫೋಟೋಗಳು ವೈರಲ್​ ಆಗಿವೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಒಟ್ಟಿಗೆ ಜಿಮ್​ನಿಂದ ಹೊರ ಬಂದಿದ್ದಾರೆ. ಅಚ್ಚರಿ ಎಂದರೆ, ವಿಜಯ್​ ದೇವರಕೊಂಡ ಮುಖಕ್ಕೆ ಮಾಸ್ಕ್​ ಹಾಕಿದ್ದು ಮಾತ್ರವಲ್ಲ ಸಂಪೂರ್ಣವಾಗಿ ಮುಖವನ್ನು ಕ್ಯಾಪ್​ನಿಂದ ಮುಚ್ಚಿಕೊಂಡಿದ್ದಾರೆ. ರಶ್ಮಿಕಾ ಮನಸ್ಪೂರ್ತಿಯಾಗಿ ನಗುತ್ತಿದ್ದಾರೆ. ಜಿಮ್​ ಹೊರಗೆ ಮಾಧ್ಯಮಗಳು ಕ್ಯಾಮರಾ ಕಂಡಿದ್ದೇ ಇಬ್ಬರೂ ಕಾರನ್ನು ಏರಿ ತೆರಳಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ಇಬ್ಬರೂ ತಮ್ಮ ತಮ್ಮ ಸಿನಿಮಾ ಕೆಲಸಗಳಿಗಾಗಿ ಮುಂಬೈಗೆ ತೆರಳಿದ್ದಾರೆ. ಈ ವೇಳೆ ಇಬ್ಬರೂ ಬಿಡುವು ಮಾಡಿಕೊಂಡು ಮೀಟ್​ ಆಗುತ್ತಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಒಟ್ಟಾಗಿ ಊಟ ಸವಿದಿದ್ದರು. ಸದ್ಯ, ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಜಯ್​, ಲೈಗರ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅನನ್ಯಾ ಪಾಂಡೆ ಚಿತ್ರದ ನಾಯಕಿ. ಪುರಿ ಜಗನ್ನಾಥ್​ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸೆಪ್ಟೆಂಬರ್​ 9ರಂದು ಸಿನಿಮಾ ತೆರೆಗೆ ಬರುತ್ತಿದೆ. ರಶ್ಮಿಕಾ ಕೈಯಲ್ಲಿ ಸಾಲು ಸಾಲು ಚಿತ್ರಗಳಿವೆ. ಹಿಂದಿಯಲ್ಲಿ ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಮಿಷನ್​ ಮಜ್ನು ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ಪುಷ್ಪ ಚಿತ್ರದ ಶೂಟಿಂಗ್​ನಲ್ಲೂ ಅವರು ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: Rashmika Mandanna: ಮೆಕ್​ಡೊನಾಲ್ಡ್ ಇಂಡಿಯಾ ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕವಾದ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾಗೆ ಬಾಲಿವುಡ್​ನಲ್ಲಿ ಬೆಂಬಲವಾಗಿ ನಿಂತ ಸಿದ್ಧಾರ್ಥ್ ಮಲ್ಹೋತ್ರ! ಅನುಭವ ಹಂಚಿಕೊಂಡ ಕಿರಿಕ್​ ಬೆಡಗಿ

Published On - 7:02 pm, Sun, 18 April 21

Click on your DTH Provider to Add TV9 Kannada