‘88 ಲಕ್ಷ ರೂಪಾಯಿ ಸಾಲ ಇದೆ’; ಅಸಲಿ ವಿಷಯ ಹೇಳಿದ ಅವಿನಾಶ್

ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಅವಿನಾಶ್ ತಮ್ಮ ಮೇಲಿರುವ ಸಾಲದ ಮೊತ್ತವನ್ನು ಬಹಿರಂಗಪಡಿಸಿದ್ದಾರೆ. ತಮಗೆ ಬರೋಬ್ಬರಿ 88 ಲಕ್ಷ ರೂಪಾಯಿ ಸಾಲವಿದ್ದು, ಸಿನಿಮಾ ರಿಲೀಸ್ ಮಾಡಿ ಎಲ್ಲರ ಸಾಲ ತೀರಿಸುವುದಾಗಿ ಹೇಳಿದ್ದಾರೆ. 'ಸಾಲಗಾರ' ಎನ್ನಿಸಿಕೊಂಡರೂ 'ಮೋಸಗಾರ' ಎನ್ನಿಸಿಕೊಳ್ಳುವುದಿಲ್ಲ ಎಂದ ಅವರ ಮಾತುಗಳು ವೈರಲ್ ಆಗಿವೆ.

‘88 ಲಕ್ಷ ರೂಪಾಯಿ ಸಾಲ ಇದೆ’; ಅಸಲಿ ವಿಷಯ ಹೇಳಿದ ಅವಿನಾಶ್
ಅವಿನಾಶ್

Updated on: Sep 30, 2026 | 1:19 PM

ಮುಖ್ಯಾಂಶಗಳು

  • ಬಿಗ್ ಬಾಸ್‌ನಿಂದ ಹೊರಬಂದಿರೋ ಅವಿನಾಶ್
  • ಶಾಕಿಂಗ್ ವಿಷಯ ಬಿಚ್ಚಿಟ್ಟ ಅವಿನಾಶ್
  • ಸಾಲಗಾರ ಎನ್ನಿಸಿಕೊಂಡರೂ ಮೋಸಗಾರ ಅನ್ನಿಸಿಕೊಳ್ಳಲ್ಲ

ಬಿಗ್ ಬಾಸ್ ಮನೆಯಿಂದ ಮೂರನೇ ವಾರ ಎಲಿಮಿನೇಟ್ ಆಗಿ ಹೊರಬಂದಿರುವ ಸ್ಪರ್ಧಿ ಅವಿನಾಶ್ ಅವರು ತಮ್ಮ ವೈಯಕ್ತಿಕ ಜೀವನದ ಸಾಲದ ಕುರಿತು ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು ತಮ್ಮ ಮೇಲಿರುವ ಒಟ್ಟು ಸಾಲದ ಮೊತ್ತವನ್ನು ಬಹಿರಂಗಪಡಿಸಿದ್ದು, ಅದನ್ನು ಕೇಳಿ ಪ್ರೇಕ್ಷಕರು ಹಾಗೂ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

‘ನೀವೇನಾದರೂ ಬಿಗ್ ಬಾಸ್ ವಿನ್ನರ್ ಆಗಿ 50 ಲಕ್ಷ ರೂಪಾಯಿ ಹಣ ಗೆದ್ದಿದ್ದರೆ ಏನು ಮಾಡುತ್ತಿದ್ದೀರಿ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅವಿನಾಶ್, ‘ಆ ಹಣ ಬಂದಿದ್ದರೆ ಪೂರ್ತಿಯಾಗಿ ನನ್ನ ಸಾಲ ತೀರಿಸಲು ಬಳಸುತ್ತಿದ್ದೆ’ ಎಂದು ಹೇಳಿದ್ದಾರೆ. ಇದೇ ವೇಳೆ ತಮಗೆ ಬಿಗ್ ಬಾಸ್ ಗೆಲುವಿನ ಮೊತ್ತಕ್ಕಿಂತಲೂ ಹೆಚ್ಚಿನ ಸಾಲವಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ತಮ್ಮ ಸಾಲದ ಮೊತ್ತದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ‘ನನಗೆ ಬರೋಬ್ಬರಿ 88 ಲಕ್ಷ ರೂಪಾಯಿ ಸಾಲವಿದೆ. ನಾನು ಸಿನಿಮಾ ಮಾಡಿದ್ದೇನೆ. ಆ ಸಿನಿಮಾ ಈಗ ನನ್ನ ಕೈಯಲ್ಲಿದೆ. ಅದನ್ನು ಶೀಘ್ರದಲ್ಲೇ ರಿಲೀಸ್ ಮಾಡಿ, ಬಂದ ಹಣದಿಂದ ಎಲ್ಲರ ಸಾಲವನ್ನು ವಾಪಸ್ ತೀರಿಸುತ್ತೇನೆ’ ಎಂಬ ಭರವಸೆಯಲ್ಲಿ ಅವರಿದ್ದಾರೆ.

ಸಾಲ ತೀರಿಸುವ ಕುರಿತು ಮಾತನಾಡಿದ ಅವರು, ‘ನನಗೆ ಹಣ ಕೊಟ್ಟವರು ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ನಾನು ಸಾಲಗಾರ ಎಂಬ ಪಟ್ಟವನ್ನು ಬೇಕಾದರೆ ಅನುಭವಿಸಬಹುದು, ಆದರೆ ಮೋಸಗಾರ ಅಥವಾ ನಂಬಿಕೆ ದ್ರೋಹಿ ಎಂಬ ಪಟ್ಟವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಭಾವುಕರಾಗಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕದ್ದು ತಿಂತಾರೆ, ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ

ಅವಿನಾಶ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಧನ ಹೊಂದಿರುವ ನಿರ್ದೇಶಕ ಗುರು ಪ್ರಸಾದ್ ಅವರ ಶಿಷ್ಯ ವೃಂದದಲ್ಲಿ ಅವಿನಾಶ್ ಗುರುತಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟದ ಮೂಲಕ ಗಮನ ಸೆಳೆಯಲು ವಿಫಲರಾದರು. ಈ ಮೊದಲು ಮಂಜು, ಕಿರಣ್ ಶಾಸ್ತ್ರಿ ಮಾತುಗಳಿಂದ ಕಿರಿಕಿರಿಗೆ ಒಳಗಾಗಿ, ಬಿಗ್ ಬಾಸ್ ಮನೆಯಿಂದ ಹೊರ ಬರಲು ಅವರು ನಿರ್ಧರಿಸಿದ್ದರು. ಆ ಬಳಿಕ ಅವರು ನಿಲುವು ಬದಲಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us