Raghu Gowda: ರಘು ಗೌಡಗೆ ಸಿನಿಮಾ ಆಫರ್​; ‘ದ್ವಿಪಾತ್ರ’ದಲ್ಲಿ ಕನ್ನಡ ಬಿಗ್​ ಬಾಸ್​ ಸ್ಪರ್ಧಿ

ರಘು ಅವರ ಪಾತ್ರ ಏನು? ಅದಕ್ಕೂ ಉತ್ತರವಿದೆ. ಸೈಬರ್​ ಹ್ಯಾಕರ್​ ಆಗಿ ರಘು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೂಡ ಚಿತ್ರದಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆಯಲಿದೆ ಎಂಬುದು ನಿರ್ದೇಶಕ ಶ್ರೀವತ್ಸ​ ಅಭಿಪ್ರಾಯ.

Raghu Gowda: ರಘು ಗೌಡಗೆ ಸಿನಿಮಾ ಆಫರ್​; ‘ದ್ವಿಪಾತ್ರ’ದಲ್ಲಿ ಕನ್ನಡ ಬಿಗ್​ ಬಾಸ್​ ಸ್ಪರ್ಧಿ
ರಘು - ಬಿಗ್ ಬಾಸ್​ ಕನ್ನಡ ಸೀಸನ್​ 8

Updated on: May 10, 2021 | 4:19 PM

ಬಿಗ್​ ಬಾಸ್​ ವೇದಿಕೆ ಏರಿಬಂದ ಮೇಲೆ ಅದೃಷ್ಟ ಬದಲಾಗುತ್ತದೆ ಎಂಬುದು ಸಾಕಷ್ಟು ಬಾರಿ ಸಾಬೀತಾಗಿದೆ. ಈ ಮೊದಲ ಏಳು ಸೀಸನ್​ಗಳಲ್ಲಿ ಕಾಣಿಸಿಕೊಂಡ ಸಾಕಷ್ಟು ಮಂದಿಯ ಲಕ್​ ಬದಲಾಗಿದೆ. ಈ ಬಾರಿಯ ಬಿಗ್​ ಬಾಸ್​ ಅರ್ಧಕ್ಕೆ ನಿಂತಿದ್ದರಿಂದ ಮನೆಯಲ್ಲಿದ್ದ 11 ಸ್ಪರ್ಧಿಗಳು ತಮ್ಮ ಮನೆ ಸೇರಿದ್ದಾರೆ. ಬಿಗ್​ ಬಾಸ್​ ಮನೆಯಿಂದ ಹೊರ ಬಂದ ಬೆನ್ನಲ್ಲೇ ರಘು ಗೌಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.  

ಕೊರೊನಾ ವೈರಸ್​ ಕಾರಣಕ್ಕೆ ಬಿಗ್​ ಬಾಸ್​ ಸೀಸನ್​ 8 ಅರ್ಧಕ್ಕೆ ನಿಂತಿದೆ. 70 ದಿನಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ರಘು ಇದ್ದರು. ಆರಂಭದಲ್ಲಿ ಡಲ್​ ಆಗಿದ್ದ ಅವರು ನಂತರ ಫಾರ್ಮ್​ಗೆ ಬಂದಿದ್ದರು. ಎಲ್ಲರನ್ನೂ ರಂಜಿಸುವ ಕೆಲಸದಲ್ಲಿ ತೊಡಗಿದ್ದರು. ಈಗ ಅವರು ‘ದ್ವಿಪಾತ್ರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

‘ದ್ವಿಪಾತ್ರ’ವನ್ನು ಶ್ರೀವತ್ಸ ಆರ್. ನಿರ್ದೇಶನ ಮಾಡುತ್ತಿದ್ದಾರೆ. ಕ್ರೈಂ ಥ್ರಿಲ್ಲರ್​ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ಚಂದು ಗೌಡ ಹಾಗೂ ಸತ್ಯಾಶ್ರಯ ಲೀಡ್​ರೋಲ್​ ನಿರ್ವಹಿಸುತ್ತಿದ್ದಾರೆ. ರಘು ಕೂಡ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ರಘು ಗೌಡ ಬಿಗ್​ ಬಾಸ್​ಗೆ ಹೋಗುವುದಕ್ಕೂ ಮೊದಲು ತಮ್ಮ ಯೂಟ್ಯೂಬ್​ ಚಾನೆಲ್​ ಮೂಲಕ ಹಲವರ ಗಮನ ಸೆಳೆದಿದ್ದರು. ಶ್ರೀವತ್ಸ ಕೂಡ ಅವರ ಯೂಟ್ಯೂಬ್​ ವಿಡಿಯೋಗಳನ್ನು ನೋಡಿ ಇಂಪ್ರೆಸ್​ ಆಗಿದ್ದರು. ಹೀಗಾಗಿ ರಘು ಅವರನ್ನು ಚಿತ್ರತಂಡಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಬಿಗ್​ ಬಾಸ್​ ಹೋಗುವ ಮೊದಲೇ ರಘು ಅವರು ಎರಡು ದಿನಗಳ ಶೂಟ್​ನಲ್ಲಿ ಪಾಲ್ಗೊಂಡಿದ್ದರಂತೆ. ಇನ್ನೂ 3-4 ದಿನಗಳ ಶೂಟ್​ ಬಾಕಿ ಇದೆ. ಲಾಕ್​ಡೌನ್​ ಪೂರ್ಣಗೊಂಡ ಮೇಲೆ ಇದನ್ನು ಶೂಟ್​ ಮಾಡುವ ಆಲೋಚನೆ ನಿರ್ದೇಶಕರದ್ದು.

ದ್ವಿಪಾತ್ರದ ಪೋಸ್ಟರ್

ರಘು ಅವರ ಪಾತ್ರ ಏನು? ಅದಕ್ಕೂ ಉತ್ತರವಿದೆ. ಸೈಬರ್​ ಹ್ಯಾಕರ್​ ಆಗಿ ರಘು ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ಕೂಡ ಚಿತ್ರದಲ್ಲಿ ತುಂಬಾನೇ ಪ್ರಾಮುಖ್ಯತೆ ಪಡೆಯಲಿದೆ ಎಂಬುದು ನಿರ್ದೇಶಕ ಶ್ರೀವತ್ಸ​ ಅಭಿಪ್ರಾಯ.

ಚಂದು ಗೌಡ ಹಾಗೂ ಸತ್ಯಾಶ್ರಯ ಸಿನಿಮಾದಲ್ಲಿ ಲೀಡ್​ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಶಾಂತ್​ ನೀನಾಸಂ, ಸುಚೇಂದ್ರ ಪ್ರಸಾದ್​ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲೀಡ್​ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ಸತ್ಯಾಶ್ರಯ ಅವರೇ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ

Published On - 4:18 pm, Mon, 10 May 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us