BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ

Bigg Boss Kannada: ‘ನನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ ಗೊತ್ತಿಲ್ಲ. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಹೆಂಡತಿಯೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಗೌಡ ಹೇಳಿದ್ದಾರೆ.

BBK8: ರಘು ಗೌಡ ಬಿಗ್​ ಬಾಸ್​ನಿಂದ ಹೊರ​ಬಂದಾಗ ಹೆಂಡತಿ ಮನೆಯೊಳಗೆ ಸೇರಿಸೋದು ಅನುಮಾನ
ರಘು ಗೌಡ - ಬಿಗ್​ ಬಾಸ್
Follow us
ಮದನ್​ ಕುಮಾರ್​
|

Updated on: May 10, 2021 | 8:48 AM

ಕೊರೊನಾ ವೈರಸ್​ ಕಾರಣದಿಂದ ಬಿಗ್​ ಬಾಸ್​ ಅರ್ಧಕ್ಕೆ ನಿಲ್ಲುತ್ತಿದೆ. ಹಾಗಾಗಿ ಎಲ್ಲ 11 ಸ್ಪರ್ಧಿಗಳು ಮನೆಯಿಂದ ಹೊರಬರುವುದು ಅನಿವಾರ್ಯ ಆಗಿದೆ. ಆದರೆ ಬಿಗ್​ ಬಾಸ್​ ಮನೆಯಿಂದ ಆಚೆಗೆ ಕಾಲಿಡುವುದಕ್ಕೂ ಮುನ್ನ ರಘು ಗೌಡ ತಲೆಯಲ್ಲಿ ಒಂದು ಅನುಮಾನ ಕಾಡಿದೆ. ಬಿಗ್​ ಬಾಸ್​ ಬಿಟ್ಟುಬಂದ ಬಳಿಕ ತಮ್ಮನ್ನು ಹೆಂಡತಿ ಮನೆಯೊಳಗೆ ಬಿಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬ ಸಂಶಯ ಅವರನ್ನು ಕಾಡುತ್ತಿದೆ. ಅದನ್ನು ಮೇ 9ರ ಸಂಚಿಕೆಯಲ್ಲಿ ಅವರು ಹೇಳಿಕೊಂಡಿದ್ದಾರೆ.

ರಘುಗೆ ಮದುವೆ ಆಗಿ ಮಗು ಕೂಡ ಇದೆ. ರಘು ಪತ್ನಿ ಹೆಸರು ವಿದ್ಯಾ. ಆದರೆ ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟು ಕೆಲವು ವಾರ ಕಳೆದ ಬಳಿಕ ರಘು ಗೌಡ ಸ್ವತಃ ತಮ್ಮ ಹೆಂಡತಿಯ ಹೆಸರನ್ನು ಮರೆತುಬಿಟ್ಟಿದ್ದರು! ಎಷ್ಟೋ ಬಾರಿ ಅವರು ವಿದ್ಯಾ ಎನ್ನುವ ಬದಲು ದಿವ್ಯಾ ಎಂದು ಹೇಳಿದ್ದರು. ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಸುರೇಶ್​ ಮತ್ತು ದಿವ್ಯಾ ಉರುಡುಗ ಹೆಸರುಗಳ್ನು ಆಗಾಗ ಕೇಳಿಸಿಕೊಂಡಿದ್ದೇ ಈ ಅಚಾತುರ್ಯಕ್ಕೆ ಕಾರಣ. ಇದರ ಬಗ್ಗೆ ಬಿಗ್​ ಬಾಸ್​ ಮನೆಯಲ್ಲಿ ಚರ್ಚೆ ಆಯಿತು.

ಈ ರೀತಿ ಹೆಂಡತಿಯ ಹೆಸರನ್ನು ತಪ್ಪಾಗಿ ಹೇಳಿದ್ದಕ್ಕಾಗಿ ‘ನಿನ್ನನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತಾರಾ?’ ಎಂದು ರಘುಗೆ ಪ್ರಶಾಂತ್​ ಸಂಬರಗಿ ಕೇಳಿದರು. ‘ಯಾರಿಗೆ ಗೊತ್ತು. ನನ್ನ ಕಾರ್ಡ್​, ಅಕೌಂಟ್​​ ಎಲ್ಲವನ್ನೂ ಅವಳೇ ಹ್ಯಾಂಡಲ್​ ಮಾಡ್ತಾ ಇದ್ದಾಳೆ. ಹೊರಗಡೆ ನಿಲ್ಲೋದಕ್ಕೂ ನನ್ನ ಹತ್ರ ಕಾಸಿಲ್ಲ’ ಎಂದು ರಘು ಹೇಳಿದ್ದಾರೆ. ‘ಹಂಗೇನಾದರೂ ಆದರೆ ನಮ್ಮ ಮನೆಗೆ ಬಾ’ ಎಂದು ಶುಭಾ ಪೂಂಜಾ ಮತ್ತು ಪ್ರಶಾಂತ್​ ಸಂಬರಗಿ ಕರೆದಿದ್ದಾರೆ.

‘ನಮ್ಮ ಮನೆಗೆ ಬಾ. ಆಫೀಸ್​ ಬಿಟ್ಟುಕೊಡುತ್ತೇನೆ. ಒಂದು ತಿಂಗಳಂತೂ ಖಂಡಿತ ಕೊಡುತ್ತೇನೆ. ನಿನ್ನನ್ನು ನಾನು ಒಂದು ತಿಂಗಳು ಸಹಿಸಿಕೊಳ್ಳಬಹುದು’ ಎಂದು ಪ್ರಶಾಂತ್​ ಸಂಬರಗಿ ತಮಾಷೆ ಮಾಡಿದ್ದಾರೆ. ಇಂಥ ನೂರಾರು ಫನ್ನಿ ಸಂಗತಿಗಳಿಗೆ ಸಾಕ್ಷಿಯಾದ ಬಿಗ್​ ಬಾಸ್​ಗೆ ತೆರೆಬಿದ್ದಿದೆ. ಕೊನೇ ಸಂಚಿಕೆಯ ಎಪಿಸೋಡ್​ಗಳು ಭಾನುವಾರವೇ (ಮೇ 9) ಚಿತ್ರೀಕರಣಗೊಂಡಿದ್ದು, ಅವುಗಳನ್ನು ಮೇ 11 ಮತ್ತು 12ರಂದು ಕಲರ್ಸ್​ ಕನ್ನಡ ವಾಹಿನಿ ಪ್ರಸಾರ ಮಾಡಲಿದೆ.

ಇದನ್ನೂ ಓದಿ:

ವೈಷ್ಣವಿ ಜತೆ ರಘು ಗೌಡ ಕ್ಲೋಸ್​ ಆಗಿರೋ ಬಗ್ಗೆ ಅವರ ಪತ್ನಿ ವಿದ್ಯಾಶ್ರೀ ಹೇಳಿದ್ದೇನು?

Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್​ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್