Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್​ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು

BBK8: ರಾಜ್ಯದಲ್ಲಿ ಹೆಚ್ಚಿರುವ ಕೊರೊನಾ ಹಾವಳಿಯ ತೀವ್ರತೆಯನ್ನು ಸ್ಪರ್ಧಿಗಳಿಗೆ ತೋರಿಸಲಾಗಿದೆ. ಲಾಕ್​ಡೌನ್​ ಆಗಿರುವ ವಿಚಾರವನ್ನೂ ತಿಳಿಸಲಾಗಿದೆ. ಅದನ್ನು ಕಂಡು ಎಲ್ಲರಿಗೂ ದೊಡ್ಡ ಶಾಕ್​ ಆಗಿದೆ.

Bigg Boss Kannada: ಕೊರೊನಾ ವಿಷಯ ಗೊತ್ತಾಗಿ ಕಣ್ಣೀರು ಹಾಕುತ್ತ ಬಿಗ್​ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು
ಬಿಗ್​ ಬಾಸ್​ ಕನ್ನಡ ಸೀಸನ್​ 8
Follow us
ಮದನ್​ ಕುಮಾರ್​
|

Updated on:May 10, 2021 | 8:08 AM

ಯಾರೂ ಊಹಿಸಿರದ ರೀತಿಯಲ್ಲಿ ‘ಬಿಗ್​ ಬಾಸ್ ಕನ್ನಡ​ ಸೀಸನ್​ 8’ ಕಾರ್ಯಕ್ರಮ ಅಂತ್ಯವಾಗಿದೆ. ಕೊರೊನಾ ವೈರಸ್​ ಹರಡುತ್ತಿರುವ ಈ ಕಠಿಣ ಸಂದರ್ಭದಲ್ಲಿ ಅನಿವಾರ್ಯವಾಗಿ ಈ ರಿಯಾಲಿಟಿ ಮುಕ್ತಾಯ ಆಗಿದೆ. 70 ದಿನಗಳ ಕಾಲ ದೊಡ್ಮನೆಯೊಳಗೆ ಹಾಯಾಗಿ ಕಾಲ ಕಳೆಯುತ್ತಿದ್ದ ಸ್ಪರ್ಧಿಗಳಿಗೆ ಈಗ ಒಮ್ಮೆಲೇ ಶಾಕ್​ ಎದುರಾಗಿದೆ. ಇಡೀ ಜಗತ್ತು ಕೊರೊನಾದಿಂದ ಕಷ್ಟ ಅನುಭವಿಸುತ್ತಿದ್ದರೂ ಕೂಡ ಅದು ಬಿಗ್​ ಬಾಸ್​ ಸ್ಪರ್ಧಿಗಳಿಗೆ ತಿಳಿದಿರಲಿಲ್ಲ. ಆದರೆ ಈಗ ಎಲ್ಲವೂ ಗೊತ್ತಾಗಿದೆ.

10ನೇ ವಾರದವರೆಗೆ ಬಿಗ್​ ಬಾಸ್​ ಮನೆಯಲ್ಲಿ 11 ಜನರು ತಮ್ಮ ಆಟ ಮುಂದುವರಿಸಿಕೊಂಡು ಬಂದಿದ್ದರು. 10ನೇ ವಾರದ ಎಲಿಮಿನೇಷನ್​ಗೆ ಅವರೆಲ್ಲರೂ ಕುತೂಹಲದಿಂದ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿರುವ ಟಿವಿಯಲ್ಲಿ ಬ್ರೇಕಿಂಗ್​ ನ್ಯೂಸ್​ ಪ್ರಸಾರ ಮಾಡಲಾಗಿದೆ. ರಾಜ್ಯದಲ್ಲಿ ಹೆಚ್ಚಿರುವ ಕೊರೊನಾ ಹಾವಳಿಯ ತೀವ್ರತೆಯನ್ನು ಸ್ಪರ್ಧಿಗಳಿಗೆ ತೋರಿಸಲಾಗಿದೆ. ಲಾಕ್​ಡೌನ್​ ಆಗಿರುವ ವಿಚಾರವನ್ನೂ ತಿಳಿಸಲಾಗಿದೆ. ಅದನ್ನು ಕಂಡು ಎಲ್ಲರಿಗೂ ದೊಡ್ಡ ಶಾಕ್​ ಆಗಿದೆ.

ಈಗ ನಿಮ್ಮೆಲ್ಲರನ್ನೂ ಹೊರಗಡೆ ಕರೆಸುವ ಸಮಯ ಎಂದು ಬಿಗ್​ ಬಾಸ್​ ಘೋಷಣೆ ಮಾಡುತ್ತಿದ್ದಂತೆಯೇ ಎಲ್ಲರೂ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇಷ್ಟು ದಿನ ತಾನು ಗಟ್ಟಿ ಎಂದು ತೋರಿಸಿಕೊಳ್ಳುತ್ತಿದ್ದ ಪ್ರಶಾಂತ್​ ಸಂಬರಗಿ ಕೂಡ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾರೆ. ಪ್ರಿಯಾಂಕಾ ತಿಮ್ಮೇಶ್​, ಶುಭಾ ಪೂಂಜಾ ಕೂಡ ಜೋರಾಗಿ ಅತ್ತಿದ್ದಾರೆ. ಇನ್ನೇನು ತಾವು ಮನೆಯಿಂದ ಹೊರಡುವುದು ಖಚಿತ ಎಂದಿ ಗೊತ್ತಾದ ಬಳಿಕ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡಿದ್ದಾರೆ.

ಇನ್ನೂ ಈ ಎಪಿಸೋಡ್​ ಪ್ರಸಾರ ಆಗಿಲ್ಲ. ಮೇ 9ರಂದು ಕೊನೇ ಸಂಚಿಕೆ ಪ್ರಸಾರ ಆಗಬಹುದು ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರು. ಆದರೆ ಈಗಾಗಲೇ ಚಿತ್ರೀಕರಣಗೊಂಡಿರುವ ಈ ದೃಶ್ಯಗಳ ಎಪಿಸೋಡ್​ ಅನ್ನು ಮೇ 11 ಮತ್ತು 12ರಂದು ಪ್ರಸಾರ ಮಾಡುವುದಾಗಿ ಕಲರ್ಸ್​ ಕನ್ನಡ ವಾಹಿನಿ ಒಂದು ಪ್ರೋಮೋದಲ್ಲಿ ತಿಳಿಸಿದೆ. ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಅವರು ಪ್ರೋಮೋ ಹಂಚಿಕೊಂಡಿದ್ದು, ಅದರಲ್ಲಿ ಈ ಎಲ್ಲ ವಿಚಾರಗಳ ಝಲಕ್ ತೋರಿಸಲಾಗಿದೆ.

ಇದನ್ನೂ ಓದಿ:

Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು

Bigg Boss Kannada: ಬಿಗ್​ ಬಾಸ್​ ರದ್ದಾಗಿದ್ದು ಯಾಕೆ? ಟ್ರೋಲ್​ ಮಂದಿ ಹುಡುಕಿದ 2 ಫನ್ನಿ ಕಾರಣ ಇಲ್ಲಿದೆ

Published On - 8:08 am, Mon, 10 May 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್