ಬಿಗ್ ಬಾಸ್ ಸೋಮವಾರವೂ ಮುಂದುವರಿಯಲಿದೆ; ಭಾನುವಾರದ ಎಪಿಸೋಡ್ನಲ್ಲಿತ್ತು ಟ್ವಿಸ್ಟ್
ಕೊರೊನಾ ವೈರಸ್ ಕಾಟ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದೆ. ಮೇ 10ರಿಂದ 14 ದಿನಗಳ ಕಾಲ ಕರ್ನಾಟಕ ಬಂದ್ ಆಗುತ್ತಿದೆ.
ಸಾಮಾನ್ಯವಾಗಿ ಬಿಗ್ ಬಾಸ್ ಆರಂಭವಾಗುವುದು ಹಾಗೂ ಕೊನೆಯಾಗುವುದು ಭಾನುವಾರವೇ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಈ ಬಾರಿ ಬಿಗ್ ಬಾಸ್ ಅರ್ಧಕ್ಕೆ ನಿಲ್ಲುತ್ತಿದ್ದರೂ ಭಾನುವಾರವೇ ಕೊನೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಭಾನುವಾರದ ಎಪಿಸೋಡ್ನಲ್ಲಿ ಟ್ವಿಸ್ಟ್ ಒಂದನ್ನು ನೀಡಲಾಗಿದೆ. ಬಿಗ್ ಬಾಸ್ ಸೋಮವಾರವೂ ಮುಂದುವರಿಯಲಿದೆ. ಹಾಗಂತ ಶೂಟಿಂಗ್ ಮುಂದುವರಿಯುತ್ತಿಲ್ಲ. ಭಾನುವಾರ (ಮೇ 9) ಶೂಟ್ ಮಾಡಲಾದ ಎಪಿಸೋಡ್ ಮೇ 10, 11 ಮತ್ತು 12ರಂದು ಪ್ರಸಾರವಾಗಲಿದೆ.
ಕೊರೊನಾ ವೈರಸ್ ಕಾಟ ಹೆಚ್ಚುತ್ತಿದೆ. ಹೀಗಾಗಿ ಸರ್ಕಾರ 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದೆ. ಮೇ 10ರಿಂದ 14 ದಿನಗಳ ಕಾಲ ಕರ್ನಾಟಕ ಬಂದ್ ಆಗುತ್ತಿದೆ. ಈ ಅವಧಿಯಲ್ಲಿ ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣ ನಿಲ್ಲಲಿದೆ. ಇದರಿಂದ ಬಿಗ್ ಬಾಸ್ ಶೂಟಿಂಗ್ ಭಾನುವಾರವೇ ಪೂರ್ಣಗೊಂಡಿದೆ.
ಹೌದು, ಭಾನುವಾರ ಶೂಟಿಂಗ್ ನಡೆಸಿ ಬಿಗ್ ಬಾಸ್ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಆದರೆ, ಟಿವಿಯಲ್ಲಿ ಪ್ರಸಾರ ಮಾಡುವಾಗ ಕೊಂಚ ವಿಳಂಬ ಮಾಡಲಾಗಿದೆ. ಭಾನುವಾರ ಕೆಲವೇ ಕೆಲವು ವಿಚಾರಗಳನ್ನು ತೋರಿಸಲಾಗಿದೆ. ಮಂಗಳವಾರ ಮತ್ತು ಬುಧವಾರದ ಎಪಿಸೋಡ್ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಮನೆಯಿಂದ ಹೊರ ಹೋಗುವುದನ್ನು ತೋರಿಸಲಾಗುತ್ತದೆ.
ಭಾನುವಾರ ಸೀಸನ್ ಪೂರ್ಣಗೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಹೀಗಾಗಿ ಎಲ್ಲರೂ ಟಿವಿ ಮುಂದೆ ಕುಳಿತಿದ್ದರು. ಆದರೆ, ಅರ್ಧಕ್ಕೆ ಎಪಿಸೋಡ್ ಪೂರ್ಣಗೊಂಡಿದೆ. ಬುಧವಾರ ಅಂತಿಮವಾಗಿ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳು ಹೊರ ಹೋಗುವುದನ್ನು ತೋರಿಸಲಾಗುವುದು. ಇದಕ್ಕೂ ಮೊದಲು ಸ್ಪರ್ಧಿಗಳಿಗೆ ವಿಡಿಯೋ ಮೂಲಕ ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ವಿಡಿಯೋ ಮೂಲಕ ತಿಳಿಸಲಾಗುತ್ತದೆ.
2021ರ ಆರಂಭದಲ್ಲಿ ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಯಂತ್ರಣದಲ್ಲಿತ್ತು. ಈ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭಿಸಿತ್ತು. ಫೆಬ್ರವರಿ 28ರಂದು ಸೀಸನ್ 8 ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿತ್ತು. ಆದರೆ, ಮಾರ್ಚ್ ನಂತರದಲ್ಲಿ ಕೊರೊನಾ ಕೇಸ್ ಮಿತಿಮೀರುತ್ತಿದೆ. ಹೀಗಾಗಿ, ಸರ್ಕಾರ ಕಠಿಣ ಲಾಕ್ಡೌನ್ ಘೋಷಣೆ ಮಾಡಿದೆ. ಇದರಿಂದ ಬಿಗ್ ಬಾಸ್ ಸೀಸನ್ 8ಅನ್ನು ವಾಹಿನಿ ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ: Bigg Boss Kannada: ಬಿಗ್ ಬಾಸ್ ರದ್ದು; ವಿನ್ನರ್ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು
Published On - 10:47 pm, Sun, 9 May 21