Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು

Bigg Boss Winner: ಬಿಗ್​ ಬಾಸ್​ ಮನೆಯೊಳಗೆ ಕೊನೆಯದಾಗಿ ಉಳಿದುಕೊಂಡ 11 ಜನರು ಫಿನಾಲೆ ಕನಸು ಕಾಣುತ್ತಿದ್ದರು. ಆದರೆ ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದರ ಸಣ್ಣ ಸುಳಿವು ಕೂಡ ಅವರಿಗೆ ಇಲ್ಲ.

Bigg Boss Kannada: ಬಿಗ್​ ಬಾಸ್​ ರದ್ದು; ವಿನ್ನರ್​ ಯಾರು ಎಂದು ತೀರ್ಮಾನ ಮಾಡಿದ ಪ್ರೇಕ್ಷಕರು
ಬಿಗ್ ಬಾಸ್ ಕನ್ನಡ ಸೀಸನ್ 8
Follow us
ಮದನ್​ ಕುಮಾರ್​
|

Updated on: May 09, 2021 | 8:15 AM

ಬಿಗ್​ ಬಾಸ್​ ಪ್ರೇಕ್ಷಕರು ಕನಸಿನಲ್ಲಿಯೂ ನಿರೀಕ್ಷಿಸಿರದ ಆ ದಿನ ಎದುರಾಗಿದೆ. ಇಂದು (ಮೇ 9) ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಅಂತ್ಯವಾಗುತ್ತಿದೆ. ಕೊರೊನಾ ವೈರಸ್​ ಎರಡನೇ ಅಲೆಯ ಕಾರಣದಿಂದ, ಲಾಕ್​ಡೌನ್​ ನಿಯಮಗಳ ಅನ್ವಯ ಬಿಗ್​ ಬಾಸ್​ ಶೋಗೆ ತೆರೆ ಎಳೆಯಲಾಗುತ್ತಿದೆ. ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ಈ ರೀತಿ ಆಗಿರುವುದು ಇದೇ ಮೊದಲು. ಹಾಗಾದರೆ ಈ ಬಾರಿಯ ವಿನ್ನರ್​ ಯಾರು? ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪ್ರೇಕ್ಷಕರು ಹಲವು ಬಗೆಯಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಸದ್ಯ 11 ಜನರು ಬಿಗ್​ ಬಾಸ್​ ಮನೆಯೊಳಗೆ ಇದ್ದಾರೆ. ಶಮಂತ್​ ಬ್ರೋ ಗೌಡ, ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ಅರವಿಂದ್​ ಕೆಪಿ, ಮಂಜು ಪಾವಗಡ, ದಿವ್ಯಾ ಸುರೇಶ್​, ಪ್ರಶಾಂತ್​ ಸಂಬರಗಿ, ರಘು ಗೌಡ, ವೈಷ್ಣವಿ ಗೌಡ, ಚಕ್ರವರ್ತಿ ಚಂದ್ರಚೂಡ್, ಪ್ರಿಯಾಂಕಾ ತಿಮ್ಮೇಶ್ ಫಿನಾಲೆಯ ಆಸೆಯನ್ನು ಮನಸ್ಸಲ್ಲಿ ಇಟ್ಟುಕೊಂಡು ಕಾಯುತ್ತಿದ್ದಾರೆ. ಆದರೆ ಹೊರ ಜಗತ್ತಿನಲ್ಲಿ ಏನಾಗಿದೆ ಎಂಬುದು ಅವರಿಗೆ ತಿಳಿದಿಲ್ಲ. ಅನಾರೋಗ್ಯದ ಕಾರಣದಿಂದ ದಿವ್ಯಾ ಉರುಡುಗ ಕೆಲವೇ ದಿನಗಳ ಹಿಂದೆ ಬಿಗ್​ ಬಾಸ್​ ಮನೆಯಿಂದ ಹೊರಬಂದಿದ್ದರು.

ಉಳಿದಿರುವ 11 ಜನರಲ್ಲಿ ಯಾರನ್ನು ವಿನ್ನರ್​ ಎಂದು ಪರಿಗಣಿಸಬೇಕು ಎಂಬ ಬಗ್ಗೆ ಪ್ರೇಕ್ಷಕರು ಭಾರಿ ಚರ್ಚೆ ಶುರು ಮಾಡಿಕೊಂಡಿದ್ದಾರೆ. ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ಮಧ್ಯಕ್ಕೆ ಬಂದು ಸೇರಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್​ ಮತ್ತು ಪ್ರಿಯಾಂಕಾ ತಿಮ್ಮೇಶ್​ ಅವರನ್ನು ವಿನ್ನರ್​ ಎಂದು ಪರಿಗಣಿಸುವುದು ನ್ಯಾಯ ಸಮ್ಮತವಲ್ಲ. ಅನೇಕರ ಅಭಿಪ್ರಾಯದ ಪ್ರಕಾರ ಮಂಜು ಪಾವಗಡ ಅಥವಾ ಅರವಿಂದ್​ ಕೆ.ಪಿ. ಈ ಬಾರಿಯ ವಿನ್ನರ್​ ಆಗಬೇಕಿತ್ತು. ಇವರಿಬ್ಬರ ಬಗ್ಗೆ ಪ್ರೇಕ್ಷಕರು ಹೆಚ್ಚು ಒಲವು ತೋರಿಸಿದ್ದಾರೆ.

ಬಿಗ್​ ಬಾಸ್​ ಅಂತ್ಯವಾಗಲಿದೆ ಎಂದು ಕಲರ್ಸ್​ ಕನ್ನಡ ವಾಹಿನಿ ಮಾಡಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗೆ ಅನೇಕರು ಕಮೆಂಟ್​ ಮಾಡಿದ್ದಾರೆ. ಅದರಲ್ಲಿ ಮಂಜು ಪಾವಗಡ, ಅರವಿಂದ್​ ಕೆಪಿ ಮತ್ತು ಪ್ರಶಾಂತ್​ ಸಂಬರಗಿ ಬಗ್ಗೆ ಹೆಚ್ಚು ಪ್ರಸ್ತಾಪ ಆಗಿದೆ. ಈ ಮೂವರು ಕೂಡ ವಿನ್ನರ್​ ಪಟ್ಟಕ್ಕೆ ಸೂಕ್ತವಾದವರು ಎಂದು ಅವರವರ ಅಭಿಮಾನಿಗಳು ಕಮೆಂಟ್​ಗಳ ಮೂಲಕ ವಾದ ಮಂಡಿಸುತ್ತಿದ್ದಾರೆ. ಶಮಂತ್, ವೈಷ್ಣವಿ ಕೂಡ ಫಿನಾಲೆಯಲ್ಲಿ ಪೈಪೋಟಿ ನೀಡಬಹುದಾದಂತಹ ಸ್ಪರ್ಧಿಗಳು ಎಂಬ ಕಮೆಂಟ್​ಗಳು ಬಂದಿವೆ.

ವೀಕ್ಷಕರ ವಾದ ಏನೇ ಇರಲಿ, ವಾಹಿನಿಯ ತೀರ್ಮಾನ ಅಂತಿಮವಾಗಿರಲಿದೆ. ಮಧ್ಯದಲ್ಲೇ ಶೋ ಅಂತ್ಯವಾಗುತ್ತಿರುವುದರಿಂದ ಈ ಬಾರಿ ಯಾರಿಗೂ ವಿನ್ನರ್​ ಪಟ್ಟ ಸಿಗುವುದಿಲ್ಲ ಎಂಬುದು ಖಚಿತ. ಕೊರೊನಾ ವೈರಸ್​ ಭೀಕರವಾಗಿರುವ ಈ ಸಂದರ್ಭದಲ್ಲಿ ಶೋ ನಿಲ್ಲಿಸುತ್ತಿರುವ ತೀರ್ಮಾನಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Bigg Boss Kannada: ಮನಸ್ಸು ಭಾರವಾಗಿದೆ, ಬಿಗ್​ ಬಾಸ್​ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್​ ಗುಂಡ್ಕಲ್​

Bigg Boss Kannada: ಮನಸ್ಸು ಭಾರವಾಗಿದೆ, ಬಿಗ್​ ಬಾಸ್​ ನಿಲ್ಲುತ್ತಿದೆ; ನೋವು ಹೊರಹಾಕಿದ ಪರಮೇಶ್ವರ್​ ಗುಂಡ್ಕಲ್​

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ