ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರಗಿ ಅತಿ ಹೆಚ್ಚಾಗಿ ಬಳಸಿದ ಪದ ಎಂದರೆ ಅದು ‘ಗುಂಪುಗಾರಿಕೆ’. ಮನೆಯಲ್ಲಿ ಎಲ್ಲರೂ ಒಂದಾಗಿ ಇರುವ ಬದಲು ತಮಗೆ ಬೇಕಾದವರ ಜೊತೆ ಗುಂಪು ಕಟ್ಟಿಕೊಂಡು ಇರಲಾಗುತ್ತಿದೆ ಎಂದು ಅವರು ಆರಂಭದಿಂದಲೇ ಧ್ವನಿ ಎತ್ತಿದ್ದರು. ಈಗ ಕೊರೊನಾ ವೈರಸ್ನಿಂದಾದ ಲಾಕ್ಡೌನ್ ಕಾರಣಕ್ಕೆ ಬಿಗ್ ಬಾಸ್ ಶೋ ಮುಗಿದಿದೆ. ಅರ್ಧದಲ್ಲೇ ಎಲ್ಲ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಅಚ್ಚರಿ ಎಂದರೆ ಶೋ ಮುಗಿಸಿ ಹೊರಬಂದ ಬಳಿಕವೂ ಗುಂಪುಗಾರಿಕೆ ಮುಂದುವರಿಯುತ್ತಿದೆ. ಸ್ಪರ್ಧಿಗಳೆಲ್ಲ ಸೇರಿಕೊಂಡು ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಆದರೆ ಆ ಗ್ರೂಪ್ಗಳಲ್ಲಿ ಕೆಲವರನ್ನು ಸೇರಿಸಿಕೊಂಡಿಲ್ಲ ಎಂಬ ವಿಚಾರ ಈಗ ತಿಳಿದು ಬಂದಿದೆ.
ಬಿಗ್ ಬಾಸ್ ಮುಗಿದ ಬಳಿಕ ಪ್ರತಿದಿನ ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಸ್ಪರ್ಧಿಗಳು ಲೈವ್ ಬಂದು ಜನರ ಜೊತೆ ಮಾತನಾಡುತ್ತಿದ್ದಾರೆ. ಶನಿವಾರ (ಮೇ 15) ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ಅವರು ಇನ್ಸ್ಟಾಗ್ರಾಮ್ನಲ್ಲಿ ಲೈವ್ ಬಂದಿದ್ದರು. ಆಗ ಈ ಗುಂಪುಗಾರಿಕೆಯ ವಿಚಾರವನ್ನು ಬಯಲು ಮಾಡಿದ್ದಾರೆ.
ಈ ಬಗ್ಗೆ ಮಾತು ಆರಂಭಿಸಿದ್ದು ಪ್ರಶಾಂತ್ ಸಂಬರಗಿ. ‘ನಮ್ಮನ್ನು ಇಲ್ಲಿ ಒಂದು ಗ್ಯಾಂಗ್ ಮಾಡಿ ಹಾಕಿದ್ದಾರೆ’ ಎಂದು ಅವರು ಹೇಳಿದ್ದಕ್ಕೆ ‘ಯಾವ ಗ್ಯಾಂಗ್’ ಎಂದು ಚಂದ್ರಚೂಡ್ ಪ್ರಶ್ನಿಸಿದರು. ‘ಬಿಗ್ ಬಾಸ್ ಮನೆಯಿಂದ ಆಚೆ ಬಂದ ಬಳಿಕ ವಾಟ್ಸ್ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಲಾಗಿದೆ. ಅದರಲ್ಲಿ ನಾನು-ನೀನು ಇಲ್ಲ. ಇದೇ ಗುಂಪುಗಾರಿಕೆ’ ಎಂದರು ಪ್ರಶಾಂತ್. ‘ನಾನೂ ಆ ಗ್ರೂಪ್ನಲ್ಲಿ ಇಲ್ಲ. ನಾನು ಯಾವಾಗಲೂ ಸಿಂಗಲ್’ ಎಂದು ಪ್ರಿಯಾಂಕಾ ಹೇಳಿದರು.
‘ಮಜಾ ಏನೆಂದರೆ ನಮ್ಮ ಜೊತೆಗಿದ್ದ ಬಿಗ್ ಬಾಸ್ ಸ್ಪರ್ಧಿಗಳ ಎರಡು ವಾಟ್ಸ್ಆ್ಯಪ್ ಗ್ರೂಪ್ ಆಗಿದೆ. ಎರಡೂ ಗ್ರೂಪ್ನಲ್ಲಿ ನಮ್ಮನ್ನು ಸೇರಿಸಬಾರದು ಎಂದು ಚರ್ಚೆ ಆಗುತ್ತಿದೆಯಂತೆ. ಯಾರಿಗೆ ಯಾರ ಜೊತೆ ಮಾತನಾಡಬೇಕು ಎಂಬುದು ಅವರ ಆಯ್ಕೆ. ನಾನೇನಾದರೂ ಹೊರಬಂದು ಫೋನ್ ಮಾಡಿ ಮಾತನಾಡಿದ್ದರೆ ಅದು ಪ್ರಿಯಾಂಕಾ ಜೊತೆ ಮಾತ್ರ’ ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದರು. ಈ ಗುಂಪುಗಾರಿಕೆ ಬಗ್ಗೆ ಇನ್ನುಳಿದ ಸದಸ್ಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ:
ಬಿಗ್ ಬಾಸ್ ಮನೆಯಲ್ಲಿ ತುಪ್ಪದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ ಪ್ರಶಾಂತ್ಗೆ ಗೆಳೆಯರು ಕೊಟ್ರು ಅಚ್ಚರಿಯ ಗಿಫ್ಟ್
‘ನಾನು ಕಿತ್ತೂರು ರಾಣಿ ಚೆನ್ನಮ್ಮ ಕುಟುಂಬದವನು’; ಕೊನೆಯ ದಿನ ಅಚ್ಚರಿಯ ವಿಚಾರ ಬಿಚ್ಚಿಟ್ಟ ಪ್ರಶಾಂತ್ ಸಂಬರಗಿ