Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು?

ಪ್ರಶಾಂತ್​ ಸಂಬರಗಿ ಈಗಾಗಲೇ ಮನೆಯವರ ದೃಷ್ಟಿಯಲ್ಲಿ ಕೆಟ್ಟವರಾಗಿದ್ದಾರೆ. ಅದಕ್ಕೆ ಕಾರಣ ಅವರ ನಡವಳಿಕೆ. ಒಂದೊಮ್ಮೆ ಹೊಸ ಸ್ಪರ್ಧಿ ಕೂಡ ಅದೇ ರೀತಿ ನಡೆದುಕೊಂಡರೆ ಮನೆಯಲ್ಲಿ ಮತ್ತೊಂದಷ್ಟು ಜಗಳಗಳು ನಡೆಯಬಹುದು.

Bigg Boss Kannada: ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ; ಯಾರದು?
ಚಕ್ರವರ್ತಿ ಚಂದ್ರಚೂಡ

Updated on: Apr 01, 2021 | 3:27 PM

ಬಿಗ್​ ಬಾಸ್​ ಮನೆಯಲ್ಲಿ ಇತ್ತೀಚೆಗಷ್ಟೇ ವೈಲ್ಡ್​ ಕಾರ್ಡ್​ ಎಂಟ್ರಿ ಬಗ್ಗೆ ಚರ್ಚೆ ಆಗಿತ್ತು. ಮನೆ ಒಳಗೆ ಬಂದವರನ್ನು ಪ್ರಶಾಂತ್​ ಸಂಬರಗಿ ತಮ್ಮೆಡೆ ಸೆಳೆದುಕೊಳ್ಳುತ್ತಾರೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಈ ವಿಚಾರ ಇಟ್ಟುಕೊಂಡು ಮನೆಯವರೆಲ್ಲ ಜೋಕ್​ ಮಾಡಿಕೊಂಡು ನಕ್ಕಿದ್ದರು. ಇದಾದ ಬೆನ್ನಲ್ಲೇ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದೆ. ಅಷ್ಟಕ್ಕೂ ಬಿಗ್​ ಬಾಸ್​ ಮನೆಗೆ ಪ್ರವೇಶಿಸಿದವರು ಯಾರು? ಅವರ ಹಿನ್ನೆಲೆ ಏನು ಎನ್ನುವ ಬಗ್ಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಗೆ ಬಂದ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಎಂಬ ಮಾಹಿತಿ ಕೇಳಿಬಂದಿದೆ. ಪತ್ರಿಕೋದ್ಯಮದಿಂದ ತಮ್ಮ ವೃತ್ತಿ ಆರಂಭಿಸಿದ ಅವರು ನಂತರ ಕಾಲಿಟ್ಟಿದ್ದು ಚಿತ್ರರಂಗಕ್ಕೆ. ಇವರು ಸಿನಿಮಾ ನಿರ್ದೇಶನಕ್ಕೆ ಇಳಿದರು. ಈಗ ನೇರವಾಗಿ ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದುಕೊಂಡಿದ್ದಾರೆ.

ಈಗಾಗಲೇ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ಮಾತು ಕೇಳಿ ಎಲ್ಲರಿಗೂ ಸಾಕಾಗಿದೆ. ಅವರು ನಡೆದುಕೊಳ್ಳುವ ರೀತಿ ಸಾಕಷ್ಟು ಜನರಿಗೆ ಇಷ್ಟವಾಗುತ್ತಿಲ್ಲ. ಮಾತಿನಲ್ಲಿ ಚಕ್ರವರ್ತಿ ಚಂದ್ರಚೂಡ್​ ಕೂಡ ನಿಪುಣರು. ಅವರ ಎದುರು ಪ್ರಶಾಂತ್​ ಜಿದ್ದಿಗೆ ಬಿದ್ದರೆ ಬಿಗ್​ ಬಾಸ್​ ಮನೆಯಲ್ಲಿ ಒಂದಷ್ಟು ಮಾತಿನ ಸಮರಗಳನ್ನು ನಿರೀಕ್ಷೆ ಮಾಡಬಹುದೇನೋ.

ಇಂದು ಬಿಗ್​ ಬಾಸ್​ ಮನೆಗೆ ಹೊಸ ಎಂಟ್ರಿ ಆಗಲಿದೆ ಎನ್ನುವ ಬಗ್ಗೆ ಬಿಗ್​ ಬಾಸ್​ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಆದರೆ, ಅವರು ಯಾರು ಎನ್ನುವ ವಿಚಾರದಲ್ಲಿ ವಾಹಿನಿ ರಹಸ್ಯ ಕಾಯ್ದುಕೊಂಡಿದೆ.

ಪ್ರಶಾಂತ್​ ಸಂಬರಗಿ ಈಗಾಗಲೇ ಮನೆಯವರ ದೃಷ್ಟಿಯಲ್ಲಿ ಕೆಟ್ಟವರಾಗಿದ್ದಾರೆ. ಅದಕ್ಕೆ ಕಾರಣ ಅವರ ನಡವಳಿಕೆ. ಒಂದೊಮ್ಮೆ ಚಕ್ರವರ್ತಿ ಚಂದ್ರಚೂಡ ಕೂಡ ಅದೇ ರೀತಿ ನಡೆದುಕೊಂಡರೆ ಮನೆಯಲ್ಲಿ ಮತ್ತೊಂದಷ್ಟು ಜಗಳಗಳು, ಮಾತಿನ ಚಕಮಕಿಗಳು ಏರ್ಪಡುವ ಎಲ್ಲಾ ಸಾಧ್ಯತೆಗಳಿವೆ.

ಇದನ್ನೂ ಓದಿ: ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

 

(Bigg Boss Wild Card Entry chakravarthy chandrachud is a New Member for BBK8)

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us