AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಗಾನ್’ ಸಿನಿಮಾಗೆ 25 ವರ್ಷಗಳ ಸಂಭ್ರಮ; ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ

ಆಮಿರ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಲಗಾನ್’ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ. ಈ ಸಿನಿಮಾ ರಿಲೀಸ್ ಆಗಿ 25 ವರ್ಷಗಳು ಕಳೆದಿದ್ದು, ಆ ಪ್ರಯುಕ್ತ ಮರುಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಜೂನ್ 12, 13 ಮತ್ತು 14ರಂದು ಚಿತ್ರಮಂದಿರಗಳಲ್ಲಿ ‘ಲಗಾನ್’ ಸಿನಿಮಾ ಪ್ರದರ್ಶನ ಆಗಲಿದೆ.

‘ಲಗಾನ್’ ಸಿನಿಮಾಗೆ 25 ವರ್ಷಗಳ ಸಂಭ್ರಮ; ಚಿತ್ರಮಂದಿರಗಳಲ್ಲಿ ಮತ್ತೆ ಬಿಡುಗಡೆ
Lagaan Movie PosterImage Credit source: Aamir Khan Productions
ಮದನ್​ ಕುಮಾರ್​
|

Updated on: Jun 03, 2026 | 9:22 PM

Share

ಭಾರತೀಯ ಚಿತ್ರರಂಗದಲ್ಲಿ ಕ್ರಿಕೆಟ್ ಹಿನ್ನೆಲೆಯ ಸಿನಿಮಾಗಳು ಟ್ರೆಂಡ್ ಆಗುವುದಕ್ಕೂ ದಶಕಗಳ ಮೊದಲೇ, ಕೇವಲ ಒಂದು ಸಾಮಾನ್ಯ ಕ್ರಿಕೆಟ್ ಪಂದ್ಯವನ್ನು ಇಟ್ಟುಕೊಂಡು ಇಡೀ ದೇಶವೇ ರೋಮಾಂಚನಗೊಳ್ಳುವಂತೆ ಮಾಡಿದ ಸಿನಿಮಾ ‘ಲಗಾನ್’ (Lagaan). ಆ ಸಿನಿಮಾ ಬಿಡುಗಡೆಯಾಗಿ ಈಗ 25 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದೆ. ನಿರ್ದೇಶಕ ಅಶುತೋಷ್ ಗೋವಾರಿಕರ್ ಮತ್ತು ನಟ ಆಮಿರ್ ಖಾನ್ ಕಾಂಬಿನೇಷನ್‌ನ ಈ ಸಿನಿಮಾ ಮರು-ಬಿಡುಗಡೆ (Lagaan Re-release) ಆಗುತ್ತಿದೆ ಎಂಬ ವಿಷಯವನ್ನು ಚಿತ್ರತಂಡ ತಿಳಿಸಿದೆ.

ಇದರ ಅಂಗವಾಗಿ ‘ಆಮಿರ್ ಖಾನ್ ಪ್ರೊಡಕ್ಷನ್ಸ್’ ಸಂಸ್ಥೆಯು ಇತ್ತೀಚೆಗೆ ‘ಲಗಾನ್’ ಚಿತ್ರದ ವಿಶೇಷ ರೀ-ರಿಲೀಸ್ ಟ್ರೇಲರ್ ಹಂಚಿಕೊಂಡಿದ್ದು, ಸಿನಿಪ್ರೇಮಿಗಳಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಬುಧವಾರದಂದು (ಜೂನ್ 3) ಟ್ರೇಲರ್ ಮೂಲಕ ಮರುಬಿಡುಗಡೆಯ ದಿನಾಂಕವನ್ನು ಪ್ರಕಟಸಲಾಗಿದೆ. ‘ಪ್ರತಿಯೊಬ್ಬರ ಹೃದಯ ಮುಟ್ಟಿದ ಲಗಾನ್ ಚಿತ್ರದ 25ನೇ ವರ್ಷದ ಸಂಭ್ರಮಕ್ಕಾಗಿ ಈ ಐತಿಹಾಸಿಕ ಕಥೆ ಮತ್ತೊಮ್ಮೆ ದೊಡ್ಡ ಪರದೆಗೆ ಮರಳುತ್ತಿದೆ. ಜೂನ್ 12, 13 ಮತ್ತು 14ರಂದು ಚಿತ್ರಮಂದಿರಗಳಲ್ಲಿ ಈ ಮ್ಯಾಜಿಕ್ ಅನುಭವಿಸಿ’ ಎಂದು ಪೋಸ್ಟ್ ಮಾಡಲಾಗಿದೆ.

ಹೊಸ ಟ್ರೇಲರ್ ನೋಡಿದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್‌ಗಳ ಮಳೆ ಸುರಿದಿದ್ದಾರೆ. ಮತ್ತೆ ತೆರೆಮೇಲೆ ಹಳ್ಳಿ ಜನರ ಮತ್ತು ಬ್ರಿಟಿಷರ ನಡುವಿನ ರೋಚಕ ಕ್ರಿಕೆಟ್ ಪಂದ್ಯವನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಎ.ಆರ್. ರೆಹಮಾನ್ ಸಂಗೀತದಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ಹಾಡುಗಳನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ಎಂಜಾಯ್ ಮಾಡಲು ಅನೇಕರು ಕಾದಿದ್ದಾರೆ.

‘ಲಗಾನ್’ ಚಿತ್ರದ ರೀ-ರಿಲೀಸ್ ಟ್ರೇಲರ್:

2001ರಲ್ಲಿ ತೆರೆಕಂಡಿದ್ದ ‘ಲಗಾನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿಹಿಡಿದಿತ್ತು. ‘ಅತ್ಯುತ್ತಮ ವಿದೇಶಿ ಭಾಷಾ ಚಿತ್ರ’ ವಿಭಾಗದಲ್ಲಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ಕೆಲವೇ ಕೆಲವು ಭಾರತೀಯ ಸಿನಿಮಾಗಳಲ್ಲಿ ‘ಲಗಾನ್’ ಕೂಡ ಒಂದಾಗಿದೆ. 49ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಈ ಸಿನಿಮಾ ‘ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ’ ಸೇರಿದಂತೆ ಬರೋಬ್ಬರಿ 8 ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ಇದನ್ನೂ ಓದಿ: ‘ಲಗಾನ್’ ಶೂಟಿಂಗ್ ವೇಳೆ ಪ್ರತಿ ದಿನ ಗಾಯತ್ರಿ ಮಂತ್ರ ಕೇಳುತ್ತಿದ್ದ ಆಮಿರ್ ಖಾನ್

ಬ್ರಿಟಿಷ್ ಆಳ್ವಿಕೆಯ 1893ರ ಕಾಲಘಟ್ಟದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಭೀಕರ ಬರಗಾಲ ಮತ್ತು ಬ್ರಿಟಿಷರ ಅತಿಯಾದ ತೆರಿಗೆಯಿಂದ ಕಂಗಾಲಾದ ಭಾರತದ ಹಳ್ಳಿಯೊಂದರ ಜನರಿಗೆ, ಕ್ರೂರ ಬ್ರಿಟಿಷ್ ಅಧಿಕಾರಿಯೊಬ್ಬ ಕ್ರಿಕೆಟ್ ಪಂದ್ಯದ ಸವಾಲು ಹಾಕುತ್ತಾನೆ. ಕ್ರಿಕೆಟ್ ಆಟದ ಬಗ್ಗೆ ಗಂಧ-ಗಾಳಿಯೇ ಗೊತ್ತಿಲ್ಲದ ಹಳ್ಳಿಗರು, ತಮ್ಮ ಸ್ವಾವಲಂಬನೆ ಮತ್ತು ತೆರಿಗೆ ವಿನಾಯಿತಿಗಾಗಿ ಆಟವನ್ನು ಕಲಿತು ಬ್ರಿಟಿಷರ ವಿರುದ್ಧ ಹೇಗೆ ಐತಿಹಾಸಿಕ ಜಯ ಸಾಧಿಸುತ್ತಾರೆ ಎಂಬುದೇ ಈ ಚಿತ್ರದ ಮುಖ್ಯ ಕಥಾಹಂದರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ