Asin: ಡಿವೋರ್ಸ್​ ವದಂತಿಗೆ ತೆರೆ ಎಳೆದ ನಟಿ ಆಸಿನ್​; ನಿಟ್ಟುಸಿರು ಬಿಟ್ಟ ಅಭಿಮಾನಿಗಳು

Asin Divorce: ತಮ್ಮ ಸಂಸಾರದಲ್ಲಿ ಯಾವುದೇ ಕಿರಿಕ್​ ಇಲ್ಲ ಎಂದು ಆಸಿನ್​ ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ತಮ್ಮ ಸ್ಪಷ್ಟನೆ ನೀಡಿದ್ದಾರೆ.

Asin: ಡಿವೋರ್ಸ್​ ವದಂತಿಗೆ ತೆರೆ ಎಳೆದ ನಟಿ ಆಸಿನ್​; ನಿಟ್ಟುಸಿರು ಬಿಟ್ಟ ಅಭಿಮಾನಿಗಳು
ರಾಹುಲ್​ ಶರ್ಮಾ, ಆಸಿನ್​

Updated on: Jun 28, 2023 | 7:23 PM

ಒಂದು ಕಾಲದ ಬ್ಯುಸಿ ನಟಿ ಆಸಿನ್​ (Asin) ಅವರು ಈಗ ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಅವರ ಬಗ್ಗೆ ಡಿವೋರ್ಸ್​​ಗೆ (Divorce) ಸಂಬಂಧಿಸಿದಂತೆ ಗಾಸಿಪ್​ಗಳು ಹುಟ್ಟಿಕೊಂಡಿವೆ. ಅವುಗಳಿಗೆ ಸ್ವತಃ ಆಸಿನ್​ ಅವರು ತೆರೆ ಎಳೆದಿದ್ದಾರೆ. ಈ ನಟಿಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಅದರಿಂದ ಅಭಿಮಾನಿಗಳಿಗೆ ಕೊಂಚ ಬೇಸರ ಆಗಿತ್ತು. ಆದರೆ ಈಗ ಆಸಿನ್​ ಅವರು ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲ ಅಂತೆ-ಕಂತೆಗಳಿಗೆ (Gossip) ಪೂರ್ಣ ವಿರಾಮ ಇಟ್ಟಿದ್ದಾರೆ. ತಮ್ಮ ಸಂಸಾರ ಚೆನ್ನಾಗಿಯೇ ಇದೆ ಎಂದು ಆಸಿನ್​ ಹೇಳಿದ್ದಾರೆ. ಈಗ ಅವರು ವಿದೇಶ ಪ್ರವಾಸದಲ್ಲಿ ಸಮಯ ಕಳೆಯುತ್ತಿದ್ದಾರೆ.

ಕಾಲಿವುಡ್​ನಲ್ಲಿ ಫೇಮಸ್​ ಆಗಿದ್ದ ಆಸಿನ್ ಅವರು ಮೈಕ್ರೋಮ್ಯಾಕ್ಸ್ ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು 2016ರಲ್ಲಿ ಮದುವೆಯಾದರು. ಆ ಬಳಿಕ ಅವರು ಚಿತ್ರರಂಗಕ್ಕೆ ವಿದಾಯ ಹೇಳಿದರು. ಕೆಲವು ದಿನಗಳಿಂದ ಈಚೆಗೆ ಅವರು ಸಂಸಾರದ ಬಗ್ಗೆ ಗುಮಾನಿ ಶುರುವಾಗಿತ್ತು. ಪತಿಗೆ ಸಂಬಂಧಿಸಿದ ಎಲ್ಲ ಫೋಟೋಗಳನ್ನು ಅವರು ಡಿಲೀಟ್​ ಮಾಡಿದ್ದೇ ಇಂಥ ಅನುಮಾನ ಹುಟ್ಟಲು ಕಾರಣ ಆಗಿತ್ತು. ಆದರೆ ತಮ್ಮ ಸಂಸಾರದಲ್ಲಿ ಯಾವುದೇ ಕಿರಿಕ್​ ಇಲ್ಲ ಎಂದು ಆಸಿನ್​ ಹೇಳಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅವರು ತಮ್ಮ ಸ್ಪಷ್ಟನೆ ನೀಡಿದ್ದಾರೆ.

ಭಾರತದಲ್ಲಿ ಪ್ರೇಮ ವಿವಾಹವಾದವರಲ್ಲೇ ಜಾಸ್ತಿ ವಿಚ್ಛೇದನ: ಸುಪ್ರೀಂಕೋರ್ಟ್

‘ನಮ್ಮ ಬೇಸಿಗೆ ರಜೆಯ ನಡುವಿನಲ್ಲಿ, ನಾವಿಬ್ಬರು ಅಕ್ಕ-ಪಕ್ಕ ಕುಳಿತು ಬೆಳಗ್ಗಿನ ಉಪಹಾರ ಸವಿಯುತ್ತಿರುವಾಗ ಒಂದು ಕಾಲ್ಪನಿಕ ಮತ್ತು ಆಧಾರರಹಿತವಾದ ಸುದ್ದಿ ನೋಡಿದೆವು. ಮದುವೆಗಾಗಿ ನಾವು ಕುಟುಂಬದವರ ಜೊತೆ ಪ್ಲ್ಯಾನಿಂಗ್​ ಮಾಡುತ್ತಿದ್ದಾಗ ನಮ್ಮ ಬ್ರೇಕಪ್​ ಬಗ್ಗೆ ಸುದ್ದಿ ಕೇಳಿಬಂದಿತ್ತು. ಆ ದಿನಗಳು ಈಗ ನನಗೆ ನೆನಪಾಗುತ್ತಿದೆ. ಇಂಥ ಸುದ್ದಿ ಓದಿ ನಿರಾಸೆ ಆಯಿತು. ಇಲ್ಲದಿದ್ದರೆ ಈ ರಜೆ ಅದ್ಭುತವಾಗಿ ಇರುತ್ತಿತ್ತು. ನಿಮ್ಮ ದಿನ ಚೆನ್ನಾಗಿರಲಿ’ ಎಂದು ಆಸಿನ್​ ಬರೆದುಕೊಂಡಿದ್ದಾರೆ. ಗಾಸಿಪ್​ ಹಬ್ಬಿಸುವವರಿಗೆ ಆ ಮೂಲಕ ಅವರು ಚಾಟಿ ಬೀಸಿದ್ದಾರೆ.

ಡಿವೋರ್ಸ್​ ಚಿಂತೆ ಬಿಟ್ಟು ಬಿಂದಾಸ್​ ಆಗಿ ಫೋಟೋಶೂಟ್​ ಮಾಡಿಸಿದ ಚಿರಂಜೀವಿ ಮನೆಮಗಳು ನಿಹಾರಿಕಾ

2001ರಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಆಸಿನ್​ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳು, ತೆಲುಗು ಮಾತ್ರವಲ್ಲದೇ ಹಿಂದಿ ಚಿತ್ರರಂಗದಲ್ಲೂ ಅವರಿಗೆ ಬೇಡಿಕೆ ಇತ್ತು. ಸೂರ್ಯ, ಸಲ್ಮಾನ್​ ಖಾನ್​, ಆಮಿರ್​ ಖಾನ್​, ಅಕ್ಷಯ್​ ಕುಮಾರ್​ ಮುಂತಾದ ಸ್ಟಾರ್​ ನಟರ ಜೊತೆ ಅಭಿನಯಿಸಿ ಅವರು ಫೇಮಸ್​ ಆಗಿದ್ದರು. ಆದರೆ 2015ರ ಬಳಿಕ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ. ಅವರು ಕಮ್​ಬ್ಯಾಕ್​ ಮಾಡಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us