Rakhi Sawant: ಪತ್ನಿಯ ಬೆತ್ತಲೆ ಫೋಟೋ ಮಾರಾಟ ಮಾಡಿದ ಆದಿಲ್​ ಖಾನ್​? ರಾಖಿ ಸಾವಂತ್​ ಶಾಕಿಂಗ್​ ಆರೋಪ

Rakhi Sawant Husband Adil Khan: ‘ನ್ಯಾಯಾಧೀಶರ ಬಳಿ ನ್ಯಾಯ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಆದಿಲ್​ ಖಾನ್​ ನನಗೆ ಹಿಂಸೆ ನೀಡಿದ್ದಾನೆ ಮತ್ತು ಮೋಸ ಮಾಡಿದ್ದಾನೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

Rakhi Sawant: ಪತ್ನಿಯ ಬೆತ್ತಲೆ ಫೋಟೋ ಮಾರಾಟ ಮಾಡಿದ ಆದಿಲ್​ ಖಾನ್​? ರಾಖಿ ಸಾವಂತ್​ ಶಾಕಿಂಗ್​ ಆರೋಪ
ಆದಿಲ್ ಖಾನ್, ರಾಖಿ ಸಾವಂತ್

Updated on: Feb 10, 2023 | 5:47 PM

ನಟಿ ರಾಖಿ ಸಾವಂತ್​ (Rakhi Sawant) ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಪತಿ ಆದಿಲ್​ ಖಾನ್​ ವಿರುದ್ಧ ಅವರು ಸಿಡಿದೆದ್ದಿದ್ದಾರೆ. ತಮಗೆ ಪತಿಯಿಂದ ದೌರ್ಜನ್ಯ ಆಗಿದೆ ಎಂದು ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಆದಿಲ್​ ಖಾನ್​ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಈ ನಡುವೆ ರಾಖಿ ಸಾವಂತ್​ ಇನ್ನಷ್ಟು ಶಾಕಿಂಗ್​ ಆರೋಪಗಳನ್ನು ಹೊರಿಸಿದ್ದಾರೆ. ‘ನನ್ನ ಬೆತ್ತಲೆ ಫೋಟೋಗಳನ್ನು ಆದಿಲ್​ ಖಾನ್ (Adil Khan)​ ಮಾರಾಟ ಮಾಡಿದ್ದಾನೆ’ ಎಂದು ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಆದಿಲ್​ ವಿರುದ್ಧ ಇರುವ ಕೇಸ್​ ಬಲವಾಗುತ್ತಿದೆ. ಸದ್ಯ ಅವರಿಗೆ ಜಾಮೀನು ಸಿಗುವುದು ಅನುಮಾನವಾಗಿದೆ.

ಕಳೆದ ವರ್ಷ ಆದಿಲ್​ ಖಾನ್​ ಮತ್ತು ರಾಖಿ ಸಾವಂತ್​ ಮದುವೆ ನೆರವೇರಿತು. ಆದರೆ ಹಲವು ತಿಂಗಳ ಕಾಲ ಮದುವೆ ವಿಚಾರವನ್ನು ಈ ಜೋಡಿ ಮುಚ್ಚಿಟ್ಟಿತ್ತು. ಆರಂಭದಲ್ಲಿ ನಿಜ ಒಪ್ಪಿಕೊಳ್ಳಲು ಆದಿಲ್ ಖಾನ್​ ಹಿಂದೇಟು ಹಾಕಿದ್ದರು. ಬಳಿಕ ಅವರು ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟರು. ಇನ್ನೇನು ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಸಂತೋಷವಾಗಿ ಸಂಸಾರ ನಡೆಸುತ್ತಾರೆ ಎಂದುಕೊಳ್ಳುವಾಗಲೇ ಭಿನ್ನಾಭಿಪ್ರಾಯ ಮೂಡಿತು. ಈಗ ಇವರ ಸಂಸಾರದ ಗಲಾಟೆ ಕೋರ್ಟ್​ ಮೆಟ್ಟಿಲೇರಿದೆ.

ಇದನ್ನೂ ಓದಿ: Rakhi Sawant: ಬೀದಿಗೆ ಬಂತು ಆದಿಲ್​ ಖಾನ್​-ರಾಖಿ ಸಾವಂತ್​ ಮದುವೆ ಗಲಾಟೆ; ಪತಿ ಮೇಲೆ ಅನೈತಿಕ ಸಂಬಂಧದ ಆರೋಪ

ಇದನ್ನೂ ಓದಿ
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

‘ಆದಿಲ್​ ಖಾನ್​ ನನ್ನ ಬೆತ್ತಲೆ ಫೋಟೋಗಳನ್ನು ಮಾರಾಟ ಮಾಡಿದ್ದಾನೆ. ಅದಕ್ಕೆ ಸಂಬಂಧಿಸಿದಂತೆ ಸೈಬರ್​ ಕ್ರೈಂ ವಿಭಾಗದಲ್ಲಿ ಕೇಸ್​ ದಾಖಲಾಗಿದೆ. ತನು ಚಂಡೇಲ್​ ಜೊತೆ ಆತ ಮೂರನೇ ಮದುವೆ ಮಾಡಿಕೊಳ್ಳಲು ಬಯಸಿದ್ದಾನೆ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ. ಇಷ್ಟೆಲ್ಲ ಆರೋಪಗಳಿಗೆ ಆದಿಲ್​ ಖಾನ್​ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್​ ಖಾನ್​; ಕುಸಿದು ಬಿದ್ದ ಪತ್ನಿ ರಾಖಿ ಸಾವಂತ್​

‘ನನ್ನ ವಾದ ಏನು ಎಂಬುದನ್ನು ತಿಳಿಸಲು ನಾನು ಕೋರ್ಟ್​ಗೆ ಬಂದಿದ್ದೇನೆ. ಆದಿಲ್​ಗೆ ಜಾಮೀನು ಸಿಗಬಾರದು. ನನ್ನ ವೈದ್ಯಕೀಯ ಪರೀಕ್ಷೆ ಮುಗಿದಿದೆ. ಓಶಿವರ ಪೊಲೀಸರಿಗೆ ನಾನು ಎಲ್ಲ ಸಾಕ್ಷಿ ಒದಗಿಸಿದ್ದೇನೆ. ನ್ಯಾಯಾಧೀಶರ ಬಳಿ ನ್ಯಾಯ ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಆದಿಲ್​ ನನಗೆ ಹಿಂಸೆ ನೀಡಿದ್ದಾನೆ ಮತ್ತು ಮೋಸ ಮಾಡಿದ್ದಾನೆ. ನನ್ನ ಬ್ಯಾಂಕ್​ ದಾಖಲೆಗಳನ್ನು ಕೂಡ ನಾನು ಒದಗಿಸಿದ್ದೇನೆ. ನನ್ನಿಂದ ಒಟಿಪಿ ಪಡೆದು ಆತ ನನ್ನ ಹಣ ತೆಗೆದುಕೊಂಡಿದ್ದಾನೆ. ನನ್ನ ನಂಬಿಕೆಗೆ ದ್ರೋಹ ಎಸಗಿದ್ದಾನೆ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಇಷ್ಟೆಲ್ಲ ಕಿರಿಕ್​ ಆಗಿದ್ದರೂ ಕೂಡ ಆದಿಲ್​ ಖಾನ್​ ಜೊತೆ ಇರುವ ಹಳೇ ರೊಮ್ಯಾಂಟಿಕ್​ ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ರಾಖಿ ಸಾವಂತ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅವರ ಈ ವಿಚಿತ್ರ ವರ್ತನೆ ಕಂಡು ನೆಟ್ಟಿಗರು ಟ್ರೋಲ್​ ಮಾಡುತ್ತಿದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:47 pm, Fri, 10 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us