Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್ ಖಾನ್; ಕುಸಿದು ಬಿದ್ದ ಪತ್ನಿ ರಾಖಿ ಸಾವಂತ್
Adil Khan | Rakhi Sawant: ಕೆಲವೇ ದಿನಗಳ ಹಿಂದೆ ರಾಖಿ ಸಾವಂತ್ ಅವರ ತಾಯಿ ನಿಧನರಾದರು. ಅಂದಿನಿಂದ ಇಂದಿನತನಕ ಅವರು ಹಲವು ಬಗೆಯಲ್ಲಿ ಆಘಾತ ಎದುರಿಸುತ್ತಿದ್ದಾರೆ.
ನಟಿ ರಾಖಿ ಸಾವಂತ್ (Rakhi Sawant) ಅವರ ಸಂಸಾರದ ಗಲಾಟೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಷ್ಟು ದಿನ ಕೇವಲ ಅವರಿಬ್ಬರ ನಡುವೆ ನಡೆಯುತ್ತಿದ್ದ ಕಿರಿಕ್ ಈಗ ಕೋರ್ಟ್ ತನಕ ಬಂದಿದೆ. ರಾಖಿ ಸಾವಂತ್ ಪತಿ ಆದಿಲ್ ಖಾನ್ (Adil Khan) ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಂಡನ ವಿರುದ್ಧ ರಾಖಿ ಸಾವಂತ್ ಅವರು ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಆರೋಪಗಳನ್ನು ರಾಖಿ ಸಾವಂತ್ ಹೊರಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ವಿವರಿಸುತ್ತಿರುವಾಗ ಅವರು ಮಾಧ್ಯಮಗಳ ಕ್ಯಾಮೆರಾ ಎದುರಿನಲ್ಲೇ ಕುಸಿದು ಬಿದ್ದಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.
ಕೆಲವೇ ದಿನಗಳ ಹಿಂದೆ ರಾಖಿ ಸಾವಂತ್ ಅವರ ತಾಯಿ ನಿಧನರಾದರು. ಅಂದಿನಿಂದ ಇಂದಿನತನಕ ಅವರು ಹಲವು ಬಗೆಯಲ್ಲಿ ಆಘಾತ ಎದುರಿಸುತ್ತಿದ್ದಾರೆ. ಗಂಡ ಆದಿಲ್ ಖಾನ್ ನೀಡಿದ ಕಿರುಕುಳಗಳು ಒಂದೆರಡಲ್ಲ ಎಂದು ಅವರು ಹೇಳಿದ್ದಾರೆ. ‘ಮೈಸೂರು ಮತ್ತು ಬೆಂಗಳೂರಿನಲ್ಲಿ ಆತನ ಕ್ರಿಮಿನಲ್ ರೆಕಾರ್ಡ್ ಇದೆ. ಮದುವೆಗೂ ಮುನ್ನ ಅದು ತಿಳಿದಿದ್ದರೆ ಈಗ ಇಂಥ ದಿನ ಬರುತ್ತಿರಲಿಲ್ಲ’ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Rakhi Sawant: ರಾಖಿ ಸಾವಂತ್ ಪತಿ ಆದಿಲ್ ಖಾನ್ ಬಂಧನ; ‘ಸಾಯೋ ತನಕ ಕ್ಷಮಿಸಲ್ಲ’ ಎಂದು ತುತ್ತು ತಿನ್ನಿಸಿದ ನಟಿ
ಕಳೆದ ವರ್ಷ ರಾಖಿ ಸಾವಂತ್ ಅವರು ಮರಾಠಿ ಬಿಗ್ ಬಾಸ್ ಶೋಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರ ಪತಿ ಆದಿಲ್ ಖಾನ್ ಬೇರೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡರು ಎಂಬ ಆರೋಪ ಇದೆ. ‘ಆಕೆಯ ಜೊತೆಗಿನ ಸಂಬಂಧದ ಕಾರಣದಿಂದಾಗಿ ನಾನು ಮದುವೆ ಬಗ್ಗೆ ಮೌನವಾಗಿರುವಂತೆ ಆದಿಲ್ ಖಾನ್ ಒತ್ತಾಯಿಸಿದ. ಅಲ್ಲಿಯವರೆಗೆ ನಾನು ಸೈಲೆಂಟ್ ಆಗಿದ್ದೆ. ಮೊದಲಿಗೆ ನನ್ನ ಜೊತೆ ಮದುವೆ ಆಗಿದ್ದನ್ನೇ ಆತ ಒಪ್ಪಿಕೊಳ್ಳಲಿಲ್ಲ. ನಂತರ ಮಾಧ್ಯಮದ ಭಯದಿಂದ ಒಪ್ಪಿಕೊಂಡ’ ಎಂದು ರಾಖಿ ಸಾವಂತ್ ಇತ್ತೀಚೆಗೆ ಹೇಳಿದ್ದರು.
View this post on Instagram
‘ಇದು ನಾಟಕ ಅಲ್ಲ. ಆದಿಲ್ ಖಾನ್ ನನ್ನ ಜೀವನ ಹಾಳು ಮಾಡಿದ್ದಾನೆ. ನನಗೆ ಹೊಡೆದಿದ್ದಾನೆ. ನನ್ನ ಹಣ ಕದ್ದಿದ್ದಾನೆ. ಆತ ಖುರಾನ್ ಮೇಲೆ ಪ್ರಮಾಣ ಮಾಡಿದ್ದರೂ ಕೂಡ ನಂತರ ನನಗೆ ಮೋಸ ಮಾಡಿದ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.