Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್​ ಖಾನ್​; ಕುಸಿದು ಬಿದ್ದ ಪತ್ನಿ ರಾಖಿ ಸಾವಂತ್​

Adil Khan | Rakhi Sawant: ಕೆಲವೇ ದಿನಗಳ ಹಿಂದೆ ರಾಖಿ ಸಾವಂತ್​ ಅವರ ತಾಯಿ ನಿಧನರಾದರು. ಅಂದಿನಿಂದ ಇಂದಿನತನಕ ಅವರು ಹಲವು ಬಗೆಯಲ್ಲಿ ಆಘಾತ ಎದುರಿಸುತ್ತಿದ್ದಾರೆ.

Rakhi Sawant: 14 ದಿನ ನ್ಯಾಯಾಂಗ ಬಂಧನಕ್ಕೆ ಆದಿಲ್​ ಖಾನ್​; ಕುಸಿದು ಬಿದ್ದ ಪತ್ನಿ ರಾಖಿ ಸಾವಂತ್​
ಆದಿಲ್ ಖಾನ್, ರಾಖಿ ಸಾವಂತ್

Updated on: Feb 08, 2023 | 9:51 PM

ನಟಿ ರಾಖಿ ಸಾವಂತ್​ (Rakhi Sawant) ಅವರ ಸಂಸಾರದ ಗಲಾಟೆ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇಷ್ಟು ದಿನ ಕೇವಲ ಅವರಿಬ್ಬರ ನಡುವೆ ನಡೆಯುತ್ತಿದ್ದ ಕಿರಿಕ್​ ಈಗ ಕೋರ್ಟ್​ ತನಕ ಬಂದಿದೆ. ರಾಖಿ ಸಾವಂತ್​ ಪತಿ ಆದಿಲ್​ ಖಾನ್​ (Adil Khan) ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಂಡನ ವಿರುದ್ಧ ರಾಖಿ ಸಾವಂತ್​ ಅವರು ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ವಿವಾಹೇತರ ಸಂಬಂಧ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಹಲವು ರೀತಿಯ ಆರೋಪಗಳನ್ನು ರಾಖಿ ಸಾವಂತ್ ಹೊರಿಸಿದ್ದಾರೆ. ಈ ಎಲ್ಲ ಘಟನೆಗಳನ್ನು ವಿವರಿಸುತ್ತಿರುವಾಗ ಅವರು ಮಾಧ್ಯಮಗಳ ಕ್ಯಾಮೆರಾ ಎದುರಿನಲ್ಲೇ ಕುಸಿದು ಬಿದ್ದಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ.

ಕೆಲವೇ ದಿನಗಳ ಹಿಂದೆ ರಾಖಿ ಸಾವಂತ್​ ಅವರ ತಾಯಿ ನಿಧನರಾದರು. ಅಂದಿನಿಂದ ಇಂದಿನತನಕ ಅವರು ಹಲವು ಬಗೆಯಲ್ಲಿ ಆಘಾತ ಎದುರಿಸುತ್ತಿದ್ದಾರೆ. ಗಂಡ ಆದಿಲ್​ ಖಾನ್​ ನೀಡಿದ ಕಿರುಕುಳಗಳು ಒಂದೆರಡಲ್ಲ ಎಂದು ಅವರು ಹೇಳಿದ್ದಾರೆ. ‘ಮೈಸೂರು ಮತ್ತು ಬೆಂಗಳೂರಿನಲ್ಲಿ ಆತನ ಕ್ರಿಮಿನಲ್​ ರೆಕಾರ್ಡ್​ ಇದೆ. ಮದುವೆಗೂ ಮುನ್ನ ಅದು ತಿಳಿದಿದ್ದರೆ ಈಗ ಇಂಥ ದಿನ ಬರುತ್ತಿರಲಿಲ್ಲ’ ಎಂದು ಅವರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ
Rakhi Sawant Detained: ಕಾಂಟ್ರವರ್ಸಿ ನಟಿ ರಾಖಿ ಸಾವಂತ್​ ಅರೆಸ್ಟ್​; ಶೆರ್ಲಿನ್​ ಚೋಪ್ರಾ ಹಾಕಿದ್ದ ಕೇಸ್​ನಲ್ಲಿ ಹೆಚ್ಚಿತು ಸಂಕಷ್ಟ
Rakhi Sawant Marriage: ರಾಖಿ ಸಾವಂತ್​ ಜೊತೆ ಮದುವೆ ಆಗಿದ್ದು ನಿಜ ಎಂದು ಒಪ್ಪಿಕೊಂಡ ಆದಿಲ್ ಖಾನ್​
Rakhi Sawant: ಫಾತಿಮಾ ಅಂತ ಹೆಸರು ಬದಲಿಸಿಕೊಂಡ ರಾಖಿ ಸಾವಂತ್​; ಆದಿಲ್​​ ಜತೆಗಿನ ಶಾದಿ ರಹಸ್ಯ ಬಹಿರಂಗ
Rakhi Sawant: ಮತ್ತೊಂದು ವಿವಾಹ ಆದ ರಾಖಿ ಸಾವಂತ್; ಆದಿಲ್ ಜತೆಗಿನ ಮದುವೆ ಫೋಟೋ ವೈರಲ್

ಇದನ್ನೂ ಓದಿ: Rakhi Sawant: ರಾಖಿ ಸಾವಂತ್​ ಪತಿ ಆದಿಲ್ ಖಾನ್​ ಬಂಧನ; ‘ಸಾಯೋ ತನಕ ಕ್ಷಮಿಸಲ್ಲ’ ಎಂದು ತುತ್ತು ತಿನ್ನಿಸಿದ ನಟಿ

ಕಳೆದ ವರ್ಷ ರಾಖಿ ಸಾವಂತ್​ ಅವರು ಮರಾಠಿ ಬಿಗ್​ ಬಾಸ್​ ಶೋಗೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರ ಪತಿ ಆದಿಲ್​ ಖಾನ್​ ಬೇರೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧ ಬೆಳೆಸಿಕೊಂಡರು ಎಂಬ ಆರೋಪ ಇದೆ. ‘ಆಕೆಯ ಜೊತೆಗಿನ ಸಂಬಂಧದ ಕಾರಣದಿಂದಾಗಿ ನಾನು ಮದುವೆ ಬಗ್ಗೆ ಮೌನವಾಗಿರುವಂತೆ ಆದಿಲ್​ ಖಾನ್​ ಒತ್ತಾಯಿಸಿದ. ಅಲ್ಲಿಯವರೆಗೆ ನಾನು ಸೈಲೆಂಟ್​ ಆಗಿದ್ದೆ. ಮೊದಲಿಗೆ ನನ್ನ ಜೊತೆ ಮದುವೆ ಆಗಿದ್ದನ್ನೇ ಆತ ಒಪ್ಪಿಕೊಳ್ಳಲಿಲ್ಲ. ನಂತರ ಮಾಧ್ಯಮದ ಭಯದಿಂದ ಒಪ್ಪಿಕೊಂಡ’ ಎಂದು ರಾಖಿ ಸಾವಂತ್​ ಇತ್ತೀಚೆಗೆ ಹೇಳಿದ್ದರು.

‘ಇದು ನಾಟಕ ಅಲ್ಲ. ಆದಿಲ್​ ಖಾನ್​ ನನ್ನ ಜೀವನ ಹಾಳು ಮಾಡಿದ್ದಾನೆ. ನನಗೆ ಹೊಡೆದಿದ್ದಾನೆ. ನನ್ನ ಹಣ ಕದ್ದಿದ್ದಾನೆ. ಆತ ಖುರಾನ್​ ಮೇಲೆ ಪ್ರಮಾಣ ಮಾಡಿದ್ದರೂ ಕೂಡ ನಂತರ ನನಗೆ ಮೋಸ ಮಾಡಿದ’ ಎಂದು ರಾಖಿ ಸಾವಂತ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us