AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ ಹಾಡಿನ ಬಗ್ಗೆ ‘ಆದಿಪುರುಷ್’ ಗೀತ ಸಾಹಿತಿ ಟೀಕೆ

ಸಿನಿಮಾದ ಹಾಡುಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಕೆಲ ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದರೆ ಕೆಲವು ಹಾಡುಗಳಿಗೆ ಟೀಕೆಯೂ ವ್ಯಕ್ತವಾಗಿದೆ. ಇದೀಗ ಈ ಹಿಂದೆ ರಾಮಾಯಣ ಕತೆ ಆಧರಿಸಿಯೇ ನಿರ್ಮಾಣವಾಗಿದ್ದ ‘ಆದಿಪುರುಷ್’ ಸಿನಿಮಾಕ್ಕೆ ಸಾಹಿತ್ಯ ಒದಗಿಸಿದ್ದ ಮನೋಜ್ ಮುಂತಶಿರ್ ‘ರಾಮಾಯಣ’ ಸಿನಿಮಾದ ಹಾಡುಗಳನ್ನು ಟೀಕೆ ಮಾಡಿದ್ದು, ರೆಹಮಾನ್ ಸಂಗೀತದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

‘ರಾಮಾಯಣ’ ಹಾಡಿನ ಬಗ್ಗೆ ‘ಆದಿಪುರುಷ್’ ಗೀತ ಸಾಹಿತಿ ಟೀಕೆ
Ramayana Adipurush
ಮಂಜುನಾಥ ಸಿ.
|

Updated on: Oct 29, 2026 | 1:15 PM

Share

ಮುಖ್ಯಾಂಶಗಳು

  • ‘ರಾಮಾಯಣ’ ಹಾಡಿನ ಬಗ್ಗೆ ಗೀತ ಸಾಹಿತಿಯಿಂದ ಟೀಕೆ
  • ‘ಆದಿಪುರುಷ್’ ಗೀತ ಸಾಹಿತಿ ಮನೋಜ್ ಮುಂತಶಿರ್
  • ಕವ್ವಾಲಿ ಅಥವಾ ನರ್ಸರಿ ರೈಮ್ ಎಂದು ಟೀಕಿಸಿದ ಮನೋಜ್

ರಣ್​​ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ನಟನೆ ಮಾಡಿರುವ ‘ರಾಮಾಯಣ’ ಸಿನಿಮಾ ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಟೀಸರ್, ಟ್ರೈಲರ್ ಹಾಗೂ ಕೆಲ ಹಾಡುಗಳು ಈಗಾಗಲೇ ಯೂಟ್ಯೂಬಿನಲ್ಲಿ ಹಾಗೂ ಇತರೆ ಕೆಲ ವೇದಿಕೆಗಳಲ್ಲಿ ಬಿಡುಗಡೆ ಆಗಿವೆ. ಸಿನಿಮಾದ ಹಾಡುಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಕೆಲ ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದ್ದರೆ ಕೆಲವು ಹಾಡುಗಳಿಗೆ ಟೀಕೆಯೂ ವ್ಯಕ್ತವಾಗಿದೆ. ಇದೀಗ ಈ ಹಿಂದೆ ರಾಮಾಯಣ ಕತೆ ಆಧರಿಸಿಯೇ ನಿರ್ಮಾಣವಾಗಿದ್ದ ‘ಆದಿಪುರುಷ್’ ಸಿನಿಮಾಕ್ಕೆ ಸಾಹಿತ್ಯ ಒದಗಿಸಿದ್ದ ಮನೋಜ್ ಮುಂತಶಿರ್ ‘ರಾಮಾಯಣ’ ಸಿನಿಮಾದ ಹಾಡುಗಳನ್ನು ಟೀಕೆ ಮಾಡಿದ್ದು, ರೆಹಮಾನ್ ಸಂಗೀತದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

‘ರಾಮಾಯಣ’ ಸಿನಿಮಾದ ‘ಮಂಗಲ್ ರಂಗ್’ ಹಾಡಿನ ಬಗ್ಗೆ ಚರ್ಚೆ ನಡೆಯುವ ಸಮಯದಲ್ಲಿ ‘ಆದಿಪುರುಷ್’ ಚಿತ್ರದ ಹಾಡೊಂದನ್ನು ಗೀತರಚನೆಕಾರ ಮನೋಜ್ ಮುಂತಶಿರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಿಂದ ಅವರು ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದು, ಇದರ ಬೆನ್ನಲ್ಲೆ ಮನೋಜ್ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಆದಿಪುರುಷ್’ ಹಾಡುಗಳನ್ನು ಸಮರ್ಥಿಸಿಕೊಳ್ಳುತ್ತಾ, ‘ಯಾವಾಗಲಾದರೂ ಅಯೋಧ್ಯೆಗೆ ಹೋಗಿ, ಅಲ್ಲಿ ಪ್ರತಿ ಬೀದಿಯಲ್ಲೂ ಆದಿಪುರುಷ್ ಹಾಡುಗಳೇ ಮೊಳಗುವುದನ್ನು ಕೇಳಿಸಿಕೊಳ್ಳಿ’ ಎಂದಿದ್ದಾರೆ.

ಮುಂದುವರಿದು ಮಾತನಾಡಿರುವ ಅವರು, ‘ನಾನು ರಾಮನಿಗೆ ಯಾವುದೇ ನರ್ಸರಿ ರೈಮ್ಸ್ ಅಥವಾ ಕವ್ವಾಲಿಗಳನ್ನು ಬರೆದಿಲ್ಲ’ ಎಂದು ಕಟುವಾಗಿ ನುಡಿದಿದ್ದಾರೆ. ಆ ಮೂಲಕ ‘ರಾಮಾಯಣ’ ಸಿನಿಮಾದ ಹಾಡಿನಲ್ಲಿ ಕವ್ವಾಲಿ ಶೈಲಿ ಇದೆ ಎಂದು ಟೀಕೆ ಮಾಡಿದ್ದಾರೆ. ‘ಆದಿಪುರುಷ್’ ಬಿಡುಗಡೆ ಬಳಿಕ ತಮಗೆ ಎದುರಾದ ಟೀಕೆಗಳ ಕುರಿತು ರಾಮಭಕ್ತರಲ್ಲಿ ಅನೇಕ ಬಾರಿ ಕ್ಷಮೆಯಾಚಿಸಿದ್ದೇನೆ ಮತ್ತು ತಮಗೆ ಕ್ಷಮೆ ಸಿಕ್ಕಿದೆ ಎಂದು ನಂಬಿರುವುದಾಗಿ ಹೇಳಿರುವ ಮನೋಜ್, ಆದರೆ ತಮ್ಮ ಹಾಡುಗಳನ್ನು ಮತ್ತೆ ಮತ್ತೆ ಪ್ರಶ್ನಿಸುವುದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:‘ರಾಮಾಯಣ’ ಸಿನಿಮಾಗೆ ಮೆಚ್ಚುಗೆ; ‘ಲಾರ್ಡ್ ಆಫ್ ದಿ ರಿಂಗ್ಸ್’ ಚಿತ್ರಕ್ಕೆ ಹೋಲಿಸಿದ ಪ್ರೇಕ್ಷಕರು

‘ಆದಿಪುರುಷ್’ ಮತ್ತು ‘ರಾಮಾಯಣ’ ಸಿನಿಮಾಗಳನ್ನು ಹೋಲಿಕೆ ಮಾಡುತ್ತಿರುವ ಸುದ್ದಿವಾಹಿನಿಯನ್ನೂ ಅವರು ಟೀಕಿಸಿದ್ದು, ‘ಆದಿಪುರುಷ್​​’ಗೆ ನಾನು ಹಾಡು ಬರೆದ ಮಾದರಿಯನ್ನೇ ‘ರಾಮಾಯಣ’ಕ್ಕೂ ಬಳಸಿ ಎಂದು ನಾನು ಬಯಸುತ್ತೇನೆ’ ಎಂದು ವ್ಯಂಗ್ಯ ಮಾಡಿದ್ದರು. ನಕಲು ಮಾಡುವ ಮೂಲಕ ಆದರೂ ‘ಆದಿಪುರುಷ್’ ಹಾಡುಗಳ ಗುಣಮಟ್ಟವನ್ನು ತಲುಪುವಂತೆ ಅವರು ಪರೋಕ್ಷವಾಗಿ ಸವಾಲು ಹಾಕಿದ್ದಾರೆ.

‘ರಾಮಾಯಣ’ ಸಿನಿಮಾದ ಹಾಡುಗಳಿಗೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಹಿನ್ನೆಲೆ ಸಂಗೀತವನ್ನು ಹಾನ್ಸ್ ಜೀಮರ್ ನೀಡಿದ್ದಾರೆ. ‘ರಾಮಾಯಣ’ ಸಿನಿಮಾದ ಕೆಲ ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಅದರ ಜೊತೆಗೆ ಕೆಲ ಹಾಡುಗಳಿಗೆ ಟೀಕೆಯೂ ವ್ಯಕ್ತವಾಗಿದೆ. ವಿಶೇಷವಾಗಿ ‘ರಾವಣ ತಾಂಡವ’ ಸಂಗೀತಕ್ಕೆ ಹಾಗೂ ‘ಮಂಗಲ್ ರಂಗ್’ ಹಾಡಿನ ಬಗ್ಗೆಯೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More