AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣ್​​ಬೀರ್ ಕಪೂರ್ ಧರಿಸಿದ್ದ ಗಡಿಯಾರದ ಬೆಲೆ ಎಷ್ಟು ಲಕ್ಷ ಗೊತ್ತೆ?

ಶ್ರೀಮಂತ ನಟರಲ್ಲಿ ಒಬ್ಬರು ರಣ್​​ಬೀರ್ ಕಪೂರ್. ಕಪೂರ್ ಕುಟುಂಬದ ಕುಡಿ ಆಗಿರುವ ರಣ್​​ಬೀರ್ ಚಿನ್ನದ ಚಮಚ ಕಚ್ಚಿಕೊಂಡು ಹುಟ್ಟಿದವರು. ಅವರ ಮನೆ, ಗಾಡಿಗಳು ಬಿಡಿ, ಧರಿಸುವ ವಾಚುಗಳು ಸಹ ಲಕ್ಷ, ಕೋಟಿಗಳಲ್ಲಿ ಬೆಲೆ ಹೊಂದಿರುತ್ತವೆ. ಇತ್ತೀಚೆಗಷ್ಟೆ ಅಂಥಹುದೇ ಒಂದು ಅಪರೂಪದ ವಾಚನ್ನು ಧರಿಸಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.

ರಣ್​​ಬೀರ್ ಕಪೂರ್ ಧರಿಸಿದ್ದ ಗಡಿಯಾರದ ಬೆಲೆ ಎಷ್ಟು ಲಕ್ಷ ಗೊತ್ತೆ?
Ranbir Kapoor
ಮಂಜುನಾಥ ಸಿ.
|

Updated on: Oct 22, 2026 | 5:42 PM

Share

ಮುಖ್ಯಾಂಶಗಳು

  • ರಣ್​​ಬೀರ್ ಕಪೂರ್ ಧರಿಸಿದ್ದ ಅಪರೂಪದ ವಾಚ್
  • ರಣ್​​ಬೀರ್ ಕಪೂರ್ ಧರಿಸಿದ್ದ ವಾಚಿನ ಬೆಲೆ ಎಷ್ಟು?
  • ಬಹಳ ವಿಶೇಷವಾದ ವಾಚು ಇದಾಗಿದೆ.

ರಣ್​​ಬೀರ್ ಕಪೂರ್ ಬಾಲಿವುಡ್​​ನ ಸ್ಟಾರ್ ನಟ. ಬಾಲಿವುಡ್​​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ರಣ್​​ಬೀರ್ ಕಪೂರ್. ಮಾಸ್-ಕ್ಲಾಸ್ ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬಬಲ್ಲ ನಟ. ಒಳ್ಳೆಯ ನಟರಾಗಿರುವ ಜೊತೆಗೆ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು ರಣ್​​ಬೀರ್ ಕಪೂರ್. ಕಪೂರ್ ಕುಟುಂಬದ ಕುಡಿ ಆಗಿರುವ ರಣ್​​ಬೀರ್ ಚಿನ್ನದ ಚಮಚ ಕಚ್ಚಿಕೊಂಡು ಹುಟ್ಟಿದವರು. ಅವರ ಮನೆ, ಗಾಡಿಗಳು ಬಿಡಿ, ಧರಿಸುವ ವಾಚುಗಳು ಸಹ ಲಕ್ಷ, ಕೋಟಿಗಳಲ್ಲಿ ಬೆಲೆ ಹೊಂದಿರುತ್ತವೆ. ಇತ್ತೀಚೆಗಷ್ಟೆ ಅಂಥಹುದೇ ಒಂದು ಅಪರೂಪದ ವಾಚನ್ನು ಧರಿಸಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.

ಹೈದರಾಬಾದ್​​ನಲ್ಲಿ ಆಯೋಜನೆ ಮಾಡಲಾಗಿದ್ದ ‘ರಾಮಾಯಣ’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಣ್​​ಬೀರ್ ಕಪೂರ್ ನೀಲಿ ಬಣ್ಣದ ಉಡುಗೆ ತೊಟ್ಟು ಅದಕ್ಕೆ ಹೊಂದುವಂಥಹಾ ಕೈಗಡಿಯಾರ ಧರಿಸಿದ್ದರು. ಅವರ ಉಡುಗೆಯ ಜೊತೆಗೆ ಅವರು ತೊಟ್ಟಿದ್ದ ಕೈಗಡಿಯಾರವೂ ಸಹ ಸಖತ್ ಗಮನ ಸೆಳೆಯುತ್ತಿತ್ತು. ಅಂದಹಾಗೆ ಅದು ಸಾಮಾನ್ಯ ಕೈಗಡಿಯಾರವಲ್ಲ ಬದಲಿಗೆ ಲಿಮಿಟೆಡ್ ಎಡಿಷನ್ ಗಡಿಯಾರ. ಕೇವಲ 50 ವಾಚುಗಳನ್ನಷ್ಟೆ ತಯಾರಿಸಿ ಮಾರಾಟ ಮಾಡಲಾಗಿದ್ದು, ಅದರಲ್ಲಿ ಒಂದು ರಣ್​​ಬೀರ್ ಕಪೂರ್ ಅವರ ಬಳಿ ಇದೆ.

ರಣಬೀರ್ ಕಪೂರ್ ಅವರು ಧರಿಸಿದ್ದು ಜಾಕೋಬ್ ಅಂಡ್ ಕೋ. ಎಪಿಕ್ ಎಕ್ಸ್ ಶೆರ್-ಇ-ಪಂಜಾಬ್ ಎಡಿಷನ್ (Jacob & Co. Epic X Sher-e-Punjab Edition) ವಾಚ್. ಇದು ಸಿಖ್ ಧರ್ಮದಿಂದ ಪ್ರೇರಿತವಾದ ಚಿಹ್ನೆಗಳು ಮತ್ತು ಆಕರ್ಷಕ ನೀಲಿ ಪಟ್ಟಿ ಹೊಂದಿರುವ ಟೈಟಾನಿಯಂ ವಾಚು ಇದಾಗಿದ್ದು ಇದರ ಬೆಲೆ 35.88 ಲಕ್ಷ ರೂಪಾಯಿಗಳು. ವಿಶ್ವಾದ್ಯಂತ ಕೇವಲ 50 ವಾಚುಗಳನ್ನು ಮಾತ್ರವೇ ತಯಾರಿಸಲಾಗಿದೆ, ಹಾಗಾಗಿ ಇದು ಬಲು ಅಪರೂಪದ ವಾಚ್ ಆಗಿದೆ.

ಇದನ್ನೂ ಓದಿ:ಯಶ್ ಅವರನ್ನು ‘ಬಾಸ್’ ಎಂದ ರಣ್​​ಬೀರ್ ಕಪೂರ್: ವಿಡಿಯೋ ನೋಡಿ

ಟೈಟಾನಿಯಂದಿಂದ ತಯಾರಿಸಲಾಗಿರುವ ಈ ವಾಚಿನ ಪ್ರಮುಖ ವಿಶೇಷತೆಯೆಂದರೆ ಸಿಂಹ, ಖಂಡ ಮತ್ತು ಏಕ್ ಓಂಕಾರದ ಚಿಹ್ನೆಗಳು. ಗುರು ಗೋಬಿಂದ್ ಸಿಂಗ್ ಮತ್ತು ಖಾಲ್ಸಾದ ಸ್ಥಾಪನೆಗೆ ಗೌರವ ಸಲ್ಲಿಸುವ ಕಾರಣಕ್ಕೆ ಈ ವಾಚನ್ನು ವಿಶೇಷವಾಗಿ ತಯಾರಿಸಲಾಗಿದೆ. ಅಂದಹಾಗೆ ರಣ್​​ಬೀರ್ ಕಪೂರ್ ಅವರ ಬಳಿಕ ಹಲವಾರು ವಾಚುಗಳ ಸಂಗ್ರಹ ಇದೆ. ಅವರ ಸಂಗ್ರಹದಲ್ಲಿ ಕೋಟಿಗಳ ಮೌಲ್ಯದ ವಾಚುಗಳು ಸಹ ಇವೆ. ಬಾಲಿವುಡ್​​ನ ಹಲವು ನಟರು ವಾಚುಗಳ ಸಂಗ್ರಹದಲ್ಲಿ ಆಸಕ್ತಿ ಹೊಂದಿದ್ದಾರೆ. ದಕ್ಷಿಣದಲ್ಲಿ ಜೂ ಎನ್​​ಟಿಆರ್ ಮತ್ತು ರಾಮ್ ಚರಣ್ ಅವರುಗಳು ಸಹ ವಾಚುಗಳ ಸಂಗ್ರಹದ ಬಗ್ಗೆ ಆಸಕ್ತಿ ಹೊಂದಿದ್ದಾರೆ.

ರಣ್​​ಬೀರ್ ಕಪೂರ್ ಅವರ ‘ರಾಮಾಯಣ’ ವಿಷಯಕ್ಕೆ ಮರಳುವುದಾದರೆ ಸಿನಿಮಾ ನವೆಂಬರ್ 5ಕ್ಕೆ ರಿಲೀಸ್ ಆಗಲಿದೆ. ಸಿನಿಮಾನಲ್ಲಿ ರಣ್​​ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಯನ್ನು ರಣ್​​ಬೀರ್ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಓಕಳಿಪುರಂ ಅಂಡರ್‌ಪಾಸ್‌ನಲ್ಲಿ ಕೊಳಚೆ ನೀರು, ಗುಂಡಿಗಳ ಸಮಸ್ಯೆ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ
ಆಯುಧ ಪೂಜೆ ದಿನ ಗಾಳಿಯಲ್ಲಿ ಗುಂಡು ಹಾರಿಸಿದ ಕಾಂಗ್ರೆಸ್ ಮುಖಂಡ