AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯಾಮಿ ಗೌತಮ್ ನನ್ನ ಲೇಡಿ ಲಕ್’; ರಾತ್ರೋರಾತ್ರಿ ಸ್ಟಾರ್ ಆಗಲು 20 ವರ್ಷ ಬೇಕಾಯಿತು ಎಂದ ಆದಿತ್ಯ ಧರ್‘

ಪ್ರಶಸ್ತಿ ಸಮಾರಂಭದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ನಟಿ ಯಾಮಿ ಗೌತಮ್ ಪರಸ್ಪರ ಹಾಡಿ ಹೊಗಳಿದ್ದಾರೆ. ಯಾಮಿ ನನ್ನ ಬದುಕಿನ ಅದೃಷ್ಟದ ದೇವತೆ ಎಂದಿರುವ ಆದಿತ್ಯ, ತಾವು ರಾತ್ರೋರಾತ್ರಿ ಸ್ಟಾರ್ ಆಗಲು 20 ವರ್ಷಗಳ ಕಠಿಣ ಶ್ರಮವಿದೆ ಎಂದು ತಮ್ಮ ಸಿನಿಮಾ ಪಯಣವನ್ನು ಸ್ಮರಿಸಿಕೊಂಡಿದ್ದಾರೆ.

‘ಯಾಮಿ ಗೌತಮ್ ನನ್ನ ಲೇಡಿ ಲಕ್’; ರಾತ್ರೋರಾತ್ರಿ ಸ್ಟಾರ್ ಆಗಲು 20 ವರ್ಷ ಬೇಕಾಯಿತು ಎಂದ ಆದಿತ್ಯ ಧರ್‘
ಯಾಮಿ-ಆದಿತ್ಯ
ರಾಜೇಶ್ ದುಗ್ಗುಮನೆ
|

Updated on: Nov 20, 2026 | 3:35 PM

Share

ಮುಖ್ಯಾಂಶಗಳು

  • ಯಾಮಿ ಪ್ರತಿಭೆ ಇನ್ನೂ ಅರ್ಧದಷ್ಟೂ ಹೊರಬಂದಿಲ್ಲ ಎಂದ ಪತಿ
  • ನಿದ್ದೆಯಿಲ್ಲದೆ 70 ಗಂಟೆ ಕೆಲಸ ಮಾಡುವ ಛಲಗಾರ ಆದಿತ್ಯ ಧರ್
  • ಮನೆಯೊಳಗೆ ದಂಪತಿ, ಸಿನಿಮಾ ಸೆಟ್‌ನಲ್ಲಿ ಪಕ್ಕಾ ವೃತ್ತಿಪರರು

ಬಾಲಿವುಡ್‌ನ ಜನಪ್ರಿಯ ಜೋಡಿ ಆದಿತ್ಯ ಧರ್ ಮತ್ತು ಯಾಮಿ ಗೌತಮ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಪ್ರಶಸ್ತಿ ಸಮಾರಂಭ ಒಂದರಲ್ಲಿ ಇವರಿಬ್ಬರು ಗೌರವಕ್ಕೆ ಪಾತ್ರರಾದರು. ಈ ವೇಳೆ ವೇದಿಕೆಯ ಮೇಲೆ ಪರಸ್ಪರರ ವೃತ್ತಿಜೀವನ ಮತ್ತು ಬದುಕಿನ ಪಯಣದ ಕುರಿತು ಮನಬಿಚ್ಚಿ ಮಾತನಾಡಿದರು. ಯಾಮಿ ನನ್ನ ಬದುಕಿನ ಅದೃಷ್ಟದ ದೇವತೆ ಎಂದು ಆದಿತ್ಯ ಹೊಗಳಿದರೆ, ಪತಿಯ ಪ್ರಾಮಾಣಿಕತೆ ಮತ್ತು ಶ್ರಮವನ್ನು ಯಾಮಿ ಕೊಂಡಾಡಿದರು.

ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ನಿರ್ದೇಶಕ ಆದಿತ್ಯ ಧರ್, ನಾನು ರಾತ್ರೋರಾತ್ರಿ ಸ್ಟಾರ್ ಆಗಲು ಬರೋಬ್ಬರಿ 20 ವರ್ಷಗಳು ಬೇಕಾಯಿತು ಎಂದರು. 2006ರಲ್ಲಿ ಕನಸುಗಳನ್ನು ಹೊತ್ತು ಮುಂಬೈಗೆ ಬಂದ ಇವರು, ಆರಂಭದಲ್ಲಿ ಸಹಾಯಕ ನಿರ್ದೇಶಕ ಹಾಗೂ ಗೀತರಚನೆಕಾರರಾಗಿ ದುಡಿದಿದ್ದರು. 2019ರ ‘ಉರಿ’ ಸಿನಿಮಾ ಇವರಿಗೆ ರಾಷ್ಟ್ರಪ್ರಶಸ್ತಿ ತಂದುಕೊಟ್ಟರೆ, ‘ಧುರಂಧರ್’ ಚಿತ್ರವು ಇವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಯಾಮಿ ನನ್ನ ಜೀವನಕ್ಕೆ ಕಾಲಿಟ್ಟ ಕ್ಷಣದಿಂದಲೇ ನನ್ನ ಅದೃಷ್ಟ ಬದಲಾಯಿತು ಎಂದು ಅವರು ಭಾವುಕರಾದರು.

ಯಾಮಿ ಗೌತಮ್ ಅವರ ನಟನಾ ಸಾಮರ್ಥ್ಯದ ಬಗ್ಗೆ ಆದಿತ್ಯ ಮೆಚ್ಚುಗೆಯ ಮಾತುಗಳನ್ನಾಡಿದರು. ‘ಯಾಮಿ ಬಳಿ ಚಿನ್ನದಂತಹ ಹೃದಯವಿದೆ. ಆಕೆಯ ನಿಜವಾದ ಪ್ರತಿಭೆಯಲ್ಲಿ ಶೇ. 50 ರಷ್ಟನ್ನು ಕೂಡ ಪ್ರೇಕ್ಷಕರು ಇನ್ನೂ ನೋಡಿಲ್ಲ. ‘ಆರ್ಟಿಕಲ್ 370’ ಮತ್ತು ‘ಹಕ್’ ಸಿನಿಮಾಗಳಲ್ಲಿ ಯಾಮಿ ಅದ್ಭುತವಾಗಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಕೆಯಿಂದ ಇನ್ನಷ್ಟು ಅತ್ಯುತ್ತಮ ಸಿನಿಮಾಗಳು ಬರಲಿವೆ’ ಎಂದು ಆದಿತ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪತಿ ಆದಿತ್ಯ ಅವರ ವ್ಯಕ್ತಿತ್ವವನ್ನು ಯಾಮಿ ಗೌತಮ್ ಮುಕ್ತಕಂಠದಿಂದ ಶ್ಲಾಘಿಸಿದರು. ‘ಚಿತ್ರರಂಗದ ಕಹಿ ಅನುಭವಗಳು ಮನುಷ್ಯನನ್ನು ಬದಲಾಯಿಸುತ್ತವೆ. ಆದರೆ ಎಷ್ಟೇ ಕಷ್ಟಗಳು ಬಂದರೂ ಆದಿತ್ಯ ತಮ್ಮ ಒಳ್ಳೆಯತನವನ್ನು ಕಳೆದುಕೊಂಡಿಲ್ಲ. ಸಿನಿಮಾ ಸೆಟ್‌ನಲ್ಲಿ ನಿದ್ದೆಯಿಲ್ಲದೆ ಸತತ 70 ಗಂಟೆಗಳ ಕಾಲ ಕೆಲಸ ಮಾಡುವ ಅವರ ಬದ್ಧತೆ ನಿಜಕ್ಕೂ ಅದ್ಭುತ’ ಎಂದು ಯಾಮಿ ನೆನಪಿಸಿಕೊಂಡರು.

ಇದನ್ನೂ ಓದಿ: ‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಹೊಸ ಸಿನಿಮಾದಲ್ಲಿ ಯಶ್, ರಣವೀರ್ ಸಿಂಗ್ ನಟನೆ?

ವೈಯಕ್ತಿಕ ಬದುಕು ಮತ್ತು ವೃತ್ತಿಯನ್ನು ಹೇಗೆ ನಿಭಾಯಿಸುತ್ತೀರಿ ಎಂಬ ಪ್ರಶ್ನೆಗೆ ಆದಿತ್ಯ ಸ್ಪಷ್ಟ ಉತ್ತರ ನೀಡಿದರು. ‘ಮನೆಯಲ್ಲಿ ನಾವು ಗಂಡ-ಹೆಂಡತಿಯಾಗಿದ್ದರೂ, ಕೆಲಸದ ವಿಚಾರದಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳುತ್ತೇವೆ. ಯಾವುದೇ ಹೊಸ ಸಿನಿಮಾದ ಆಫರ್ ನೀಡುವಾಗಲೂ ಮನೆಯಲ್ಲಿ ಚರ್ಚಿಸದೆ, ಅಧಿಕೃತ ಮಾರ್ಗದ ಮೂಲಕವೇ ಸಂಪರ್ಕಿಸುತ್ತೇನೆ’ ಎಂದು ಅವರು ತಿಳಿಸಿದರು. 2021ರಲ್ಲಿ ವಿವಾಹವಾದ ಈ ದಂಪತಿಗೆ 2024ರಲ್ಲಿ ‘ವೇದವಿದ್’ ಎಂಬ ಮಗ ಜನಿಸಿದ್ದಾನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ಚಿನ್ನದ ಬೆಲೆ ದಿಢೀರ್​​ ಕುಸಿತ ಕಂಡಿದ್ದೇಕೆ? ಇಲ್ಲಿದೆ ತಜ್ಞರ ವಿವರಣೆ
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ದೆಹಲಿಗೆ ತೆರಳಿದ ಹರಿಪ್ರಸಾದ್​​: KPCC ಕಾರ್ಯಾಧ್ಯಕ್ಷರ ನೇಮಕ ಬಗ್ಗೆ ಚರ್ಚೆ?
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಹಿರಿಯೂರು ಟಿಕೆಟ್ ಫೈಟ್: ಅಮಿತ್ ಶಾ ಭೇಟಿ ಬೆನ್ನಲ್ಲೇ ಕುಮಾರಸ್ವಾಮಿ ಹೇಳಿಕೆ
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಬಡವರಿಗೆ ವಿತರಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಔಷಧಿಗಳು ನದಿಯಲ್ಲಿ ಪತ್ತೆ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ಗೋಣಿಚೀಲ ಹೊದ್ದು ತಹಶೀಲ್ದಾರ್ ಕಚೇರಿ ಗೇಟ್ ಬಳಿಯೇ ಮಲಗಿದ ರೈತ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ರಂಭಾಪುರಿ ಪೀಠದ  ಬಗ್ಗೆಯೂ ‘ಬಸವ ಮಂಟಪ’ ಪುಸ್ತಕದಲ್ಲಿ ವಿವಾದಾತ್ಮಕ ಉಲ್ಲೇಖ!
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಟಿವಿ9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಅದ್ದೂರಿ ಚಾಲನೆ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
ಕ್ಯಾಪ್ಟನ್ ಆದ ಮೊದಲ ಹೆಜ್ಜೆಯಲ್ಲೇ ಎಡವಿದ ಗಾನವಿ: ವಿಡಿಯೋ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
‘ಬಸವ ಮಂಟಪ’ ಕೃತಿ ವಿವಾದ: ಲೇಖಕ ರವಿ ಹಂಜ್ ಕ್ಷಮೆಯಾಚನೆ
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!
ಸಿಎಂ ಸಂಧಾನದ ನಂತರವೂ 4ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಧರಣಿ!