ಐಶ್ವರ್ಯಾ ರೈ ಮೊಬೈಲ್ ವಾಲ್​ಪೇಪರ್​ನಲ್ಲಿ ಅಮಿತಾಭ್ ಬಚ್ಚನ್? ವಿಡಿಯೋ ವೈರಲ್

ಇತ್ತೀಚೆಗೆ ಐಶ್ವರ್ಯಾ ರೈ ಅವರು ಈವೆಂಟ್ ಒಂದರಲ್ಲಿ ಭಾಗಿ ಆಗಲು ದುಬೈ ತೆರಳಿದ್ದರು. ಈಗ ಅವರು ಕಾರ್ಯಕ್ರಮ ಮುಗಿಸಿ ಮರಳಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ಕೈಯಲ್ಲಿ ಮೊಬೈಲ್ ಇತ್ತು. ಅವರ ಮೊಬೈಲ್​ನಲ್ಲಿರೋ ವಾಲ್​ಪೇಪರ್ ಸಾಕಷ್ಟು ಗಮನ ಸೆಳೆದಿದೆ.

ಐಶ್ವರ್ಯಾ ರೈ ಮೊಬೈಲ್ ವಾಲ್​ಪೇಪರ್​ನಲ್ಲಿ ಅಮಿತಾಭ್ ಬಚ್ಚನ್? ವಿಡಿಯೋ ವೈರಲ್
ಐಶ್ವರ್ಯಾ,ಆರಾಧ್ಯಾ-ಅಮಿತಾಭ್

Updated on: Nov 29, 2024 | 12:46 PM

ಐಶ್ವರ್ಯಾ ರೈ ಹಾಗೂ ಬಚ್ಚನ್ ಕುಟುಂಬದ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ವಿಚಾರ ಇತ್ತೀಚೆಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಬಗ್ಗೆ ಸಾಕಷ್ಟು ಸುದ್ದಿ ಆಗುತ್ತಿದೆ. ಹೀಗಿರುವಾಗಲೇ ಐಶ್ವರ್ಯಾ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಐಶ್ವರ್ಯಾ ರೈ ಅವರ ಮೊಬೈಲ್ ವಾಲ್​ಪೇಪರ್ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಐಶ್ವರ್ಯಾ ರೈ ಅವರು ಈವೆಂಟ್ ಒಂದರಲ್ಲಿ ಭಾಗಿ ಆಗಲು ದುಬೈ ತೆರಳಿದ್ದರು. ಈಗ ಅವರು ಕಾರ್ಯಕ್ರಮ ಮುಗಿಸಿ ಮರಳಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯಾ ಕೈಯಲ್ಲಿ ಮೊಬೈಲ್ ಇತ್ತು. ಅವರ ಮೊಬೈಲ್​ನಲ್ಲಿರೋ ವಾಲ್​ಪೇಪರ್ ಸಾಕಷ್ಟು ಗಮನ ಸೆಳೆದಿದೆ.

ಐಶ್ವರ್ಯಾ ಅವರು ನಡೆದು ಬರುವಾಗ ಅವರ ಮೊಬೈಲ್ ಬ್ಲಿಂಕ್ ಆಗಿದೆ. ಇದರಲ್ಲಿ ಆರಾಧ್ಯಾ ಅವರು ಯಾರದ್ದೋ ಜೊತೆ ಇರುವ ಫೋಟೋ ಕಾಣಿಸಿದೆ. ಅನೇಕರು ಆರಾಧ್ಯ ಹಾಗೂ ತಾತ ಅಮಿತಾಭ್ ಬಚ್ಚನ್ ಒಟ್ಟಿಗೆ ಇರುವ ಫೋಟೋ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು, ಇದು ಐಶ್ವರ್ಯಾ ಅವರ ತಂದೆ ಕೃಷ್ಣರಾಜ್​ ರೈ ಜೊತೆ ಆರಾಧ್ಯಾ ಇರುವ ಫೋಟೋ ಎಂದು ಹೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಮಧ್ಯೆ ಯಾವುದೂ ಸರಿ ಇಲ್ಲ ಎನ್ನುವ ವಿಚಾರ ಚರ್ಚೆ ಆಗುತ್ತಿದೆ. ಆದರೆ, ಇದನ್ನು ದಂಪತಿ ಒಪ್ಪಿಕೊಂಡಿಲ್ಲ. ಅಮಿತಾಭ್ ಬಚ್ಚನ್ ಅವರು ಈ ಬಗ್ಗೆ ಓಪನ್ ಆಗಿ ಲೆಟರ್ ಬರೆದು ಈ ವಿಚಾರವನ್ನು ಅಲ್ಲಗಳೆದಿದ್ದಾರೆ. ಅಭಿಷೇಕ್ ಅವರು ಆರಾಧ್ಯಾಳನ್ನು ನೋಡಿಕೊಳ್ಳುತ್ತಿರುವ ಐಶ್ವರ್ಯಾಗೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಕೊನೆಗೂ ಐಶ್ವರ್ಯಾ ರೈಗೆ ಓಪನ್ ಆಗಿ ಧನ್ಯವಾದ ಹೇಳಿದ ಅಭಿಷೇಕ್; ಕಾರಣವೇನು?

ಐಶ್ವರ್ಯಾ ರೈ ಅವರು ಸದ್ಯ ಅಭಿಷೇಕ್ ಅವರಿಂದ ದೂರವೇ ಇದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಆರಾಧ್ಯಾ ಬಚ್ಚನ್ ಬರ್ತ್​ಡೇ ಆಚರಿಸಿಕೊಂಡಳು. ಆದರೆ, ಅಭಿಷೇಕ್ ಬಚ್ಚನ್ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us