‘ಭೋಲಾ’ ಚಿತ್ರದ ಟ್ರೇಲರ್ ರಿಲೀಸ್​; ‘ಕೈದಿ’ ಚಿತ್ರಕ್ಕಿಂತ ಭಿನ್ನವಾಗಿದೆಯೇ ಅಜಯ್ ದೇವಗನ್ ಸಿನಿಮಾ?

ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಾಕಷ್ಟು ಅದ್ದೂರಿಯಾಗಿ ಈ ಟ್ರೇಲರ್ ಮೂಡಿಬಂದಿದೆ. ಅಜಯ್ ದೇವಗನ್ ಅವರು ಆ್ಯಕ್ಷನ್ ಮೆರೆದಿದ್ದಾರೆ.

‘ಭೋಲಾ’ ಚಿತ್ರದ ಟ್ರೇಲರ್ ರಿಲೀಸ್​; ‘ಕೈದಿ’ ಚಿತ್ರಕ್ಕಿಂತ ಭಿನ್ನವಾಗಿದೆಯೇ ಅಜಯ್ ದೇವಗನ್ ಸಿನಿಮಾ?
ಅಜಯ್ ದೇವಗನ್​-ಕಾರ್ತಿ

Updated on: Mar 07, 2023 | 8:12 AM

‘ಪಠಾಣ್​ ಚಿತ್ರ (Pathaan Movie) ಗೆದ್ದಿರೋದು ಬಾಲಿವುಡ್ ಮಂದಿಗೆ ಹೊಸ ಹುಮ್ಮಸ್ಸು ಸಿಕ್ಕಿದಂತಾಗಿದೆ. ಈ ಚಿತ್ರದ ಗಳಿಕೆಯಿಂದ ಮುಂಬರುವ ಸಿನಿಮಾಗಳು ಗೆಲ್ಲಬಹುದು ಎನ್ನುವ ನಿರೀಕ್ಷೆ ಬಾಲಿವುಡ್ ಮಂದಿಯದ್ದು. ಈಗ ಅಜಯ್ ದೇವಗನ್ ನಿರ್ದೇಶಿಸಿ, ನಟಿಸಿರುವ ‘ಭೋಲಾ’ ಚಿತ್ರ (Bhola Movie) ರಿಲೀಸ್​ಗೆ ರೆಡಿ ಇದೆ. ತಮಿಳಿನ ‘ಕೈದಿ’ ಚಿತ್ರದ ರಿಮೇಕ್ ಇದಾಗಿದ್ದು, ಟ್ರೇಲರ್ ರಿಲೀಸ್ ಆಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಯ್ ದೇವಗನ್ ಅವರು ‘ಭೋಲಾ’ ಸಿನಿಮಾ ಗೆಲ್ಲಲಿದೆ ಎನ್ನುವ ಭರವಸೆ ನೀಡಿದ್ದಾರೆ.

‘ಪಠಾಣ್​ ಸಿನಿಮಾ ಒಳ್ಳೆಯ ಬಿಸ್ನೆಸ್ ಮಾಡಿದೆ. ಹೀಗಾಗಿ, ಮುಂದೆ ರಿಲೀಸ್ ಆಗುವ ಚಿತ್ರಗಳು ಒಳ್ಳೆಯ ಕಮಾಯಿ ಮಾಡುತ್ತವೆ. ‘ಭೋಲಾ’ ಸಿನಿಮಾ ಕೂಡ ಬರುತ್ತಿದೆ. ಅದು ಒಳ್ಳೆಯ ಬಿಸ್ನೆಸ್ ಮಾಡುತ್ತದೆ’ ಎಂದು ಅಜಯ್ ದೇವಗನ್ ಹೇಳಿದ್ದಾರೆ.

ಟ್ರೇಲರ್ ಹೇಗಿದೆ?

ಅಜಯ್ ದೇವಗನ್ ನಟನೆಯ ‘ಭೋಲಾ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಸಾಕಷ್ಟು ಅದ್ದೂರಿಯಾಗಿ ಈ ಟ್ರೇಲರ್ ಮೂಡಿಬಂದಿದೆ. ಅಜಯ್ ದೇವಗನ್ ಅವರು ಆ್ಯಕ್ಷನ್ ಮೆರೆದಿದ್ದಾರೆ. ಬಹುತೇಕ ದೃಶ್ಯಗಳು ಮೂಲ ಚಿತ್ರವನ್ನೇ ನೆನಪಿಸುತ್ತದೆ.  ‘ಕೈದಿ’ ಹಾಗೂ ‘ವಿಕ್ರಮ್​’ ಚಿತ್ರದ ನಡುವೆ ಕನೆಕ್ಷನ್ ಕೊಡಲಾಗಿತ್ತು. ‘ಕೈದಿ’ ಚಿತ್ರದಲ್ಲಿ ಕಥಾ ನಾಯಕನ ಹಿನ್ನೆಲೆ ಏನು ಎಂಬುದು ರಿವೀಲ್ ಆಗಿರಲಿಲ್ಲ. ಇದೆಲ್ಲವನ್ನೂ ‘ಭೋಲಾ’ ಚಿತ್ರದಲ್ಲಿ ಹೇಗೆ ಹ್ಯಾಂಡಲ್ ಮಾಡಲಾಗಿದೆ ಎಂಬುದನ್ನು ಕಾದು ನೋಡಬೇಕಿದೆ.

YouTube video player

ನಿರ್ದೇಶನಕ್ಕೆ ಮರಳಿದ ಅಜಯ್ ದೇವಗನ್

ಅಜಯ್ ದೇವಗನ್ ಅವರು ನಟನೆ ಜೊತೆಗೆ ನಿರ್ದೇಶನದಲ್ಲೂ ತೊಡಗಿಕೊಂಡಿದ್ದಾರೆ. ಅವರ ನಿರ್ದೇಶನದ ‘ರನ್​ವೇ 34’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಈ ಸಿನಿಮಾ ಬಳಿಕ ಅಜಯ್ ದೇವಗನ್ ಅವರು ‘ಭೋಲಾ’ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಈ ಚಿತ್ರದ ಟ್ರೇಲರ್ ನಿರೀಕ್ಷೆ ಸೃಷ್ಟಿ ಮಾಡಿದೆ.

ರಿಮೇಕ್ ಚಿತ್ರಕ್ಕೆ ಕಾಡಿದೆ ಭಯ

ಇತ್ತೀಚೆಗೆ ಬಾಲಿವುಡ್​​ನಲ್ಲಿ ರಿಲೀಸ್ ಆದ ‘ಸೆಲ್ಫೀ’ ಹಾಗೂ ‘ಶೆಹಜಾದ’ ಚಿತ್ರಗಳು ಫ್ಲಾಪ್ ಆದವು. ಈ ಚಿತ್ರಗಳು ದಕ್ಷಿಣ ಭಾರತ ಸಿನಿಮಾಗಳ ರಿಮೇಕ್ ಆಗಿತ್ತು. ಹೀಗಾಗಿ, ಒಟಿಟಿ ಕಾಲದಲ್ಲಿ ರಿಮೇಕ್ ಚಿತ್ರಗಳು ಗೆಲ್ಲುವುದಿಲ್ಲ ಎನ್ನುವ ಅಭಿಪ್ರಾಯ ಇದೆ. ಇದನ್ನು ‘ಭೋಲಾ’ ಸುಳ್ಳು ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:10 am, Tue, 7 March 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us