
ರೋಚಕ ಫಿಫಾ ವಿಶ್ವಕಪ್ (Fifa World Cup 2022) ಮುಕ್ತಾಯವಾಗಿದೆ. ಫ್ರಾನ್ಸ್ ವರ್ಸಸ್ ಅರ್ಜೆಂಟೀನಾ ಪಂದ್ಯವನ್ನು ಇಡೀ ಜಗತ್ತಿನಾದ್ಯಂತ ಇರುವ ಪುಟ್ಬಾಲ್ ಪ್ರಿಯರು ನೋಡಿ ಸವಿದಿದ್ದಾರೆ. ಅಂತಿಮವಾಗಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ. ಈ ವಿಜಯಕ್ಕಾಗಿ ಅವರಿಗೆ ಜಗತ್ತಿನಾದ್ಯಂತ ಅಭಿನಂದನೆಗಳು ಮಹಾಪೂರ ಹರಿದುಬರುತ್ತಿದೆ. ಈ ಸಂದರ್ಭದಲ್ಲಿ ಲಿಯೋನೆಲ್ ಮೆಸ್ಸಿ (Lionel Messi) ಅವರ ಜೀವನಾಧಾರಿತ ಸಿನಿಮಾ ಬಗ್ಗೆಯೂ ಅಭಿಮಾನಿಗಳು ಚರ್ಚೆ ಮಾಡಲು ಆರಂಭಿಸಿದ್ದಾರೆ. ಒಂದು ವೇಳೆ ಮೆಸ್ಸಿ ಜೀವನದ ಕುರಿತು ಸಿನಿಮಾ ತಯಾರಾದರೆ ಅದರಲ್ಲಿ ಅಕ್ಷಯ್ ಕುಮಾರ್ (Akshay Kumar) ಅವರು ಮುಖ್ಯ ಪಾತ್ರ ಮಾಡಬೇಕು ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಂತೆ ಅನೇಕ ಮೀಮ್ಸ್ ಹರಿದಾಡುತ್ತಿವೆ.
ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬಯೋಪಿಕ್ ಮಾಡುವುದರಲ್ಲಿ ಅವರಿಗೆ ವಿಶೇಷ ಆಸಕ್ತಿ. ‘ಪ್ಯಾಡ್ ಮ್ಯಾನ್’, ‘ಸಾಮ್ರಾಟ್ ಪೃಥ್ವಿರಾಜ್’, ‘ಏರ್ಲಿಫ್ಟ್’, ‘ಗೋಲ್ಡ್’ ಮುಂತಾದ ಸಿನಿಮಾಗಳಲ್ಲಿ ಅವರು ರಿಯಲ್ ಲೈಫ್ ವ್ಯಕ್ತಿಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಾರದ್ದೇ ಬಯೋಪಿಕ್ ಬಗ್ಗೆ ಚರ್ಚೆ ಆದರೂ ಅಲ್ಲಿ ಅಕ್ಷಯ್ ಕುಮಾರ್ ಹೆಸರು ಕೇಳಿಬರುತ್ತದೆ.
ಇದನ್ನೂ ಓದಿ: Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್ ಆದ ಅಕ್ಷಯ್ ಕುಮಾರ್; ಇಲ್ಲಿದೆ ಕಾರಣ
ಅಕ್ಷಯ್ ಕುಮಾರ್ ಅವರು ಪದೇ ಪದೇ ಬಯೋಪಿಕ್ ಬಗ್ಗೆ ಆಸಕ್ತಿ ತೋರಿಸುತ್ತಾರೆ ಎಂಬ ಕಾರಣಕ್ಕೆ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾರಾದರೂ ರಾತ್ರೋ ರಾತ್ರಿ ಫೇಮಸ್ ಆದರೂ ಸಾಕು, ಅವರ ಬಯೋಪಿಕ್ನಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಾರೆ ಎಂಬ ಮೀಮ್ಸ್ ಹರಿದಾಡಲು ಶುರುವಾಗುತ್ತವೆ. ಅಂಥದ್ದರಲ್ಲಿ ಲಿಯೋನಲ್ ಮೆಸ್ಸಿ ಬಯೋಪಿಕ್ ವಿಚಾರ ಬಂದಾಗ ನೆಟ್ಟಿಗರು ಸುಮ್ಮನಿರುತ್ತಾರಾ? ಖಂಡಿತಾ ಇಲ್ಲ.
ಇದನ್ನೂ ಓದಿ: Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್ ಕುಮಾರ್
ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆಯೇ ಒಂದಷ್ಟು ಮಂದಿ ಲಿಯೋನಲ್ ಮೆಸ್ಸಿಯ ಬಯೋಪಿಕ್ ಬಗ್ಗೆ ಚರ್ಚೆ ಆರಂಭಿದ್ದಾರೆ. ಆ ಬಯೋಪಿಕ್ನಲ್ಲಿ ಮೆಸ್ಸಿ ಪಾತ್ರವನ್ನು ಅಕ್ಷಯ್ ಕುಮಾರ್ ಮಾಡ್ತಾರೆ ಎಂದು ಮೀಮ್ಸ್ ಹರಿಬಿಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ತಮಾಷೆ ಮಾಡಲಾಗುತ್ತಿದೆ. ಇನ್ನೂ ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ‘ಈ ಸುದ್ದಿ ಖಚಿತ’ ಎಂದೆಲ್ಲ ವದಂತಿ ಹಬ್ಬಿಸುತ್ತಿದ್ದಾರೆ.
ಅಕ್ಷಯ್ ಕುಮಾರ್ ಅವರು ಅರ್ಜೆಂಟೀನಾ ಜೆರ್ಸಿ ಧರಿಸಿ, ಫುಟ್ಬಾಲ್ ಹಿಡಿದಿರುವ ಫೋಟೋಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಲಾಗುತ್ತಿದೆ. ‘ಮೆಸ್ಸಿ ಬಯೋಪಿಕ್ಗೆ ಅಕ್ಷಯ್ ಕುಮಾರ್ ತಯಾರಾಗುತ್ತಿರುವುದು’ ಎಂದು ಇದಕ್ಕೆ ನೆಟ್ಟಿಗರು ಕ್ಯಾಪ್ಷನ್ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.