
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Ranbir Kapoor) ಜೀವನದಲ್ಲಿ ಸಂತಸ ಮನೆ ಮಾಡಿದೆ. ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಈ ದಂಪತಿಗೆ ಹೆಣ್ಣು ಮಗು ಜನಿಸಿದೆ. ನವೆಂಬರ್ 6ರಂದು ಆಲಿಯಾ ಭಟ್ (Alia Bhatt) ಅವರು ಮುದ್ದಾದ ಮಗುವಿಗೆ ಜನ್ಮ ನೀಡಿದರು. ಈಗ ಆಸ್ಪತ್ರೆಯಿಂದ ಮಗುವನ್ನು (Alia Bhat Baby) ಮನೆಗೆ ಕರೆದುಕೊಂಡು ಬರಲಾಗಿದೆ. ಕಪೂರ್ ಕುಟುಂಬಕ್ಕೆ ಇದು ಸಂತಸದ ಸುದ್ದಿ. ಆದರೆ ಬೇರೊಂದು ಕಾರಣಕ್ಕಾಗಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದರ ಬಗ್ಗೆ ಸುದ್ದಿ ಹಂಚಿಕೊಂಡ ನ್ಯೂಸ್ ಏಜೆನ್ಸಿ ಕುರಿತು ನೆಟ್ಟಿಗರು ಹಾಸ್ಯ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಏನು? ಇಲ್ಲಿದೆ ಉತ್ತರ..
‘ಆಸ್ಪತ್ರೆಯಿಂದ ಮಗುವನ್ನು ಮನೆಗೆ ಕರೆದುಕೊಂಡು ಹೊರಟ ಆಲಿಯಾ ಭಟ್-ರಣಬೀರ್ ಕಪೂರ್’ ಎಂಬ ಕ್ಯಾಪ್ಷನ್ನೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಂಚಿಕೊಳ್ಳಲಾಗಿದೆ. ಇದನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಓಹ್ ಇದು ಶಾಕಿಂಗ್ ಸುದ್ದಿ.. ಮಗುವನ್ನು ನೇರವಾಗಿ ಕರಣ್ ಜೋಹರ್ ಅವರ ಆಫೀಸ್ಗೆ ಕರೆದುಕೊಂಡು ಹೋಗ್ತಾರೆ ಅಂತ ನಾವು ಅಂದುಕೊಂಡಿದ್ವಿ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
‘ನಾವೆಲ್ಲರೂ ಮಕ್ಕಳನ್ನು ಆಸ್ಪತ್ರೆಯಿಂದ ನೇರವಾಗಿ ಶಾಲೆಗೆ ಕರೆದುಕೊಂಡು ಹೋಗುತ್ತೇವೆ’ ಎಂದು ನೆಟ್ಟಿಗರೊಬ್ಬರು ಲೇವಡಿ ಮಾಡಿದ್ದಾರೆ. ‘ನ್ಯೂಸ್ ಏಜೆನ್ಸಿ ಈ ರೀತಿ ಕ್ಯಾಪ್ಷನ್ ನೀಡಿದ್ದು ಸರಿಯಿದೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಮಗುವನ್ನು ಆಸ್ಪತ್ರೆಯಿಂದ ನೇರವಾಗಿ ಕರಣ್ ಜೋಹರ್ ಅವರ ಮುಂದಿನ ಸಿನಿಮಾ ಸೆಟ್ಗೆ ಕರೆದುಕೊಂಡು ಹೋಗ್ತಾರೆ ಅಂತ ಅನೇಕರು ಭಾವಿಸಿದ್ದರು’ ಎಂದು ಕೂಡ ಕಾಲೆಳೆಯಲಾಗಿದೆ.
ಆಲಿಯಾ ಭಟ್ ಅವರಿಗೆ ಟ್ರೋಲ್ ಕಾಟ ಹೊಸದೇನೂ ಅಲ್ಲ. ವೃತ್ತಿಜೀವನದ ಆರಂಭದ ದಿನಗಳಿಂದಲೂ ಒಂದಿಲ್ಲೊಂದು ಕಾರಣಕ್ಕಾಗಿ ಅವರನ್ನು ಟ್ರೋಲ್ ಮಾಡುತ್ತಾ ಬರಲಾಗಿದೆ. ಈಗ ಅವರು ಮಗುವಿನ ಮುಖ ತೋರಿಸದೇ ಇರಲು ನಿರ್ಧರಿಸಿದ್ದಾರೆ. ಹಾಗಾಗಿ ಮಗುವಿನ ಯಾವುದೇ ಫೋಟೋ ಬಹಿರಂಗ ಆಗಿಲ್ಲ. ನಟಿ ಅನುಷ್ಕಾ ಶರ್ಮಾ ಕೂಡ ತಮ್ಮ ಮಗಳ ವಿಚಾರದಲ್ಲಿ ಇದೇ ನಿಯಮ ಪಾಲಿಸುತ್ತಿದ್ದಾರೆ.
ಮಗು ಜನಿಸಿ ಇನ್ನೂ ವಾರವೂ ಕಳೆದಿಲ್ಲ. ಅಷ್ಟರಲ್ಲಾಗಲೇ ರಣಬೀರ್ ಕಪೂರ್ ಅವರು ಶೂಟಿಂಗ್ ಸೆಟ್ಗೆ ಮರಳಿದ್ದಾರೆ. ಈ ವಿಚಾರಕ್ಕೂ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಹೆಂಡತಿ ಮತ್ತು ಮಗುವಿನ ಜೊತೆ ಇದ್ದು ಆರೈಕೆ ಮಾಡೋದು ಬಿಟ್ಟು ಕೆಲಸಕ್ಕೆ ಬಂದಿದ್ದು ಸರಿಯಲ್ಲ ಅಂತ ಅನೇಕರು ಟೀಕೆ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ಮೀಮ್ಸ್ ಹರಿದಾಡುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:46 pm, Fri, 11 November 22