ರಣಬೀರ್ ಕಪೂರ್-ಆಲಿಯಾ ಭಟ್​ ಮನೆಗೆ ಬಂತು ಲಕ್ಷುರಿ ಲೆಕ್ಸಸ್ ಕಾರು

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಭಾರತಕ್ಕೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಇವರು ಕಾಣಿಸಿಕೊಂಡರು. ಈ ವೇಳೆ ಅವರನ್ನು ಪಿಕ್ ಮಾಡಲು ಎಂಪಿವಿ ವೆಹಿಕಲ್ ಇತ್ತು. ಎಂಪಿವಿ ಎಂದರೆ ಮಲ್ಟಿ ಪರ್ಪಸ್ ವೆಹಿಕಲ್. ಹಲವು ಫ್ಯೂಚರ್​ಗಳನ್ನು ಈ ಕಾರಿನಲ್ಲಿ ನೀಡಲಾಗಿದೆ.

ರಣಬೀರ್ ಕಪೂರ್-ಆಲಿಯಾ ಭಟ್​ ಮನೆಗೆ ಬಂತು ಲಕ್ಷುರಿ ಲೆಕ್ಸಸ್ ಕಾರು
ರಣಬೀರ್-ಆಲಿಯಾ

Updated on: Jun 04, 2024 | 9:08 AM

ಬಾಲಿವುಡ್ ಸೆಲೆಬ್ರಿಟಿ ಜೋಡಿ ರಣಬೀರ್ ಕಪೂರ್ (Ranbir Kapoor) ಹಾಗೂ ಆಲಿಯಾ ಭಟ್ ಕಾರುಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಅವರ ಬಳಿ ಹಲವು ದುಬಾರಿ ಕಾರುಗಳು ಇವೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್​ಗಾಗಿ ಈ ದಂಪತಿ ಇಟಲಿಗೆ ತೆರಳಿದ್ದರು. ಇತ್ತೀಚೆಗೆ ಇವರು ಭಾರತಕ್ಕೆ ಮರಳಿದ್ದಾರೆ. ಈ ವೇಳೆ ಅವರ ಹೊಸ ಕಾರಿನ ಬಗ್ಗೆ ಮಾಹಿತಿ ಸಿಕ್ಕಿದೆ. ಈ ದಂಪತಿ ಲಕ್ಷುರಿ ಲೆಕ್ಸಸ್ ಎಲ್​ಎಂ ಕಾರನ್ನು ಖರೀದಿ ಮಾಡಿದೆ. ಇದರ ಆನ್​ರೋಡ್ ಬೆಲೆ 2.5 ಕೋಟಿ ರೂಪಾಯಿ ಇದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಭಾರತಕ್ಕೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಇವರು ಕಾಣಿಸಿಕೊಂಡರು. ಈ ವೇಳೆ ಅವರನ್ನು ಪಿಕ್ ಮಾಡಲು ಎಂಪಿವಿ ವೆಹಿಕಲ್ ಇತ್ತು. ಎಂಪಿವಿ ಎಂದರೆ ಮಲ್ಟಿ ಪರ್ಪಸ್ ವೆಹಿಕಲ್. ಹಲವು ಫ್ಯೂಚರ್​ಗಳನ್ನು ಈ ಕಾರಿನಲ್ಲಿ ನೀಡಲಾಗಿದೆ. ಮಗುವಿನ ಜೊತೆಗಿನ ಓಡಾಟಕ್ಕೆ ದಂಪತಿ ಈ ಕಾರನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಲೆಕ್ಸಸ್ ಎಲ್​ಎಂ 7 ಸೀಟರ್ ಕಾರು. ಈ ಕಾರಿನಲ್ಲಿ ಸಾಕಷ್ಟು ಜಾಗ ಇದೆ. ಇದರಲ್ಲಿ ನಾಲ್ಕು ಸೀಟರ್​ನ ಮಾಡಿ ಬೂಟ್​ ಸ್ಪೇಸ್​ನ ಹಿರಿದಾಗಿಸೋ ಆಯ್ಕೆಯೂ ಇದೆ.  ರಣಬೀರ್ ಹಾಗೂ ಆಲಿಯಾ ಬಳಿ ಇನ್ನಷ್ಟು ದುಬಾರಿ ಕಾರುಗಳು ಇವೆ. ಬೆಂಟ್ಲಿ ಜಿಟಿ ವಿ8 (6 ಕೋಟಿ ರೂಪಾಯಿ), ಲ್ಯುಸಿಡ್ ಸಫಾಯರ್​ (5.2 ಕೋಟಿ ರೂಪಾಯಿ), ರೇಂಜ್ ರೋವರ್ ಸೇರಿ ಹಲವು ಕಾರುಗಳು ಇವರ ಬಳಿ ಇವೆ.

ಇದನ್ನೂ ಓದಿ: ರಣಬೀರ್ ಕಪೂರ್ ಒಡೆತನದ 8 ಕೋಟಿ ರೂ. ಕಾರಿನ ಹಿಂದೆ ಬಿದ್ದ ಫ್ಯಾನ್ಸ್; ಅಪ್ಸೆಟ್ ಆದ ನಟ ಮಾಡಿದ್ದೇನು?

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ‘ರಾಮಾಯಣ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಬೇಕಿತ್ತು. ಆದರೆ, ಆಲಿಯಾ ಈ ಆಫರ್​ನ ರಿಜೆಕ್ಟ್ ಮಾಡಿದ್ದರು. ರಣಬೀರ್ ಸದ್ಯ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ನಿತೇಶ್ ತಿವಾರಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ಆಲಿಯಾ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us