ವಿವೇಕ್ ಅಗ್ನಿಹೋತ್ರಿಗೆ ಆಲಿಯಾ ಭಟ್​ನ ಕಂಡರೆ ಸಖತ್ ಇಷ್ಟ; ಕಾರಣ ತಿಳಿಸಿದ ನಿರ್ದೇಶಕ

‘ಆಲಿಯಾ ಅವರ ಬಗ್ಗೆ ನಕಾರಾತ್ಮಕ ವಿಚಾರ ಸ್ವೀಕರಿಸಲು ನನಗೆ ಇಷ್ಟವಾಗುವುದಿಲ್ಲ. ಕಲಾವಿದ ಎಷ್ಟು ಪ್ರಬುದ್ಧನಾಗಿರಬೇಕು ಎಂಬುದಕ್ಕೆ ಆಲಿಯಾ ಉತ್ತಮ ಉದಾಹರಣೆ’ ಎಂದು ವಿವೇಕ್ ಅಗ್ನಿಹೋತ್ರಿ ಮನಸಾರೆ ಹೊಗಳಿದ್ದಾರೆ.

ವಿವೇಕ್ ಅಗ್ನಿಹೋತ್ರಿಗೆ ಆಲಿಯಾ ಭಟ್​ನ ಕಂಡರೆ ಸಖತ್ ಇಷ್ಟ; ಕಾರಣ ತಿಳಿಸಿದ ನಿರ್ದೇಶಕ
ಆಲಿಯಾ-ವಿವೇಕ್

Updated on: Sep 30, 2023 | 9:42 AM

‘ದಿ ಕಾಶ್ಮೀರ್ ಫೈಲ್ಸ್’ (The Kashmir Files Movie) ಹಿಟ್ ಆದ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಖ್ಯಾತಿ ಹೆಚ್ಚಿದೆ. ಅವರು ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಹಲವು ಬಾಲಿವುಡ್ ಸ್ಟಾರ್​ಗಳನ್ನು ಕಂಡರೆ ಅವರಿಗೆ ಆಗೋದಿಲ್ಲ. ಇದಕ್ಕೆ ಕಾರಣ ಹಲವು. ಕಮರ್ಷಿಯಲ್ ಸಿನಿಮಾಗಳನ್ನು, ಮಾಸ್ ಆ್ಯಕ್ಷನ್ ಚಿತ್ರಗಳನ್ನು ಅವರು ಅಷ್ಟಾಗಿ ಇಷ್ಟಪಡುವುದಿಲ್ಲ. ಅನೇಕ ಖ್ಯಾತ ನಾಮರನ್ನು ಅವರು ದ್ವೇಷಿಸುತ್ತಾರೆ. ಆದರೆ, ಆಲಿಯಾ ಭಟ್ ಅವರನ್ನು ಕಂಡರೆ ವಿವೇಕ್ ಅಗ್ನಿಹೋತ್ರಿಗೆ ಸಖತ್ ಇಷ್ಟ! ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

‘ಆಲಿಯಾ ನನ್ನ ಕುಟುಂಬದ ಭಾಗ ಎಂಬುದು ನನ್ನ ಭಾವನೆ. ನಾನು ಯಾವಾಗಲೂ ಅವರ ಕೆಲಸವನ್ನು ಮೆಚ್ಚುತ್ತೇನೆ. ಓರ್ವ ನಟಿಯಾಗಿ ಅವರಲ್ಲಿರುವ ಪ್ರಬುದ್ಧತೆ ನನಗೆ ಇಷ್ಟ. ಅವರು ಸೃಜನಾತ್ಮಕ ವ್ಯಕ್ತಿ. ಅವರ ಬೆಳವಣಿಗೆ ಮತ್ತು ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳುವ ರೀತಿ ನಿಜವಾಗಿಯೂ ಇಷ್ಟವಾಗುತ್ತದೆ.  ಅವರ ಬಗ್ಗೆ ನಕಾರಾತ್ಮಕ ವಿಚಾರ ಸ್ವೀಕರಿಸಲು ನನಗೆ ಇಷ್ಟವಾಗುವುದಿಲ್ಲ. ಕಲಾವಿದ ಎಷ್ಟು ಪ್ರಬುದ್ಧನಾಗಿರಬೇಕು ಎಂಬುದಕ್ಕೆ ಆಲಿಯಾ ಉತ್ತಮ ಉದಾಹರಣೆ’ ಎಂದು ವಿವೇಕ್ ಅಗ್ನಿಹೋತ್ರಿ ಮನಸಾರೆ ಹೊಗಳಿದ್ದಾರೆ.

ಆಲಿಯಾ ಭಟ್ ಅವರು ಸ್ಟಾರ್ ಕಿಡ್ ಆದರೂ ನಟನೆ ಮೂಲಕ ಅವರು ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಈ ಕಾರಣದಿಂದ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಹಲವು ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಿ ಅವರು ಗಮನ ಸೆಳೆದಿದ್ದಾರೆ. ಅಲ್ಲು ಅರ್ಜುನ್ ನಟನೆಯೂ ವಿವೇಕ್ ಅಗ್ನಿಹೋತ್ರಿಗೆ ಇಷ್ಟ. ಈ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಮೊದಲ ದಿನದ ಗಳಿಕೆ 1 ಕೋಟಿ ರೂ.

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಿದೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸಾಧಾರಣ ಗಳಿಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರ ಗೆಲುವು ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:45 am, Sat, 30 September 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us