Alia Bhatt: ಆಲಿಯಾ ಭಟ್​ ನೋಡಿ ಐಶ್ವರ್ಯಾ ರೈ ಎಂದು ಕೂಗಿದ ಪಾಪರಾಜಿಗಳು; ನಟಿಯ ಪ್ರತಿಕ್ರಿಯೆ ಹೇಗಿತ್ತು?

Met Gala 2023: ಮೆಟ್​ ಗಾಲಾ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಆಲಿಯಾ ಭಟ್​ ಅವರು ಬಿಳಿ ಬಣ್ಣದ ಗೌನ್​ ಧರಿಸಿ ಕಂಗೊಳಿಸಿದರು.

Alia Bhatt: ಆಲಿಯಾ ಭಟ್​ ನೋಡಿ ಐಶ್ವರ್ಯಾ ರೈ ಎಂದು ಕೂಗಿದ ಪಾಪರಾಜಿಗಳು; ನಟಿಯ ಪ್ರತಿಕ್ರಿಯೆ ಹೇಗಿತ್ತು?
ಆಲಿಯಾ ಭಟ್

Updated on: May 03, 2023 | 12:12 PM

ನಟಿ ಆಲಿಯಾ ಭಟ್​ (Alia Bhatt) ಅವರಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಇದೆ. ರಣಬೀರ್​ ಕಪೂರ್​ ಜೊತೆ ಮದುವೆ ಆದ ನಂತರವೂ ಅವರಿಗೆ ಹೊಸ ಹೊಸ ಅವಕಾಶಗಳು ಹರಿದುಬರುತ್ತಿವೆ. ಸಿನಿಮಾ ಮಾತ್ರವಲ್ಲದೇ ಪ್ರತಿಷ್ಠಿತ ಬ್ರ್ಯಾಂಡ್​ಗಳ ಜಾಹೀರಾತಿನಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಜಾಗತಿಕ ಮಟ್ಟದ ಕಾರ್ಯಕ್ರಮಗಳಿಗೂ ಅವರು ಅತಿಥಿಯಾಗಿ ತೆರಳುತ್ತಿದ್ದಾರೆ. ಇತ್ತೀಚೆಗೆ ಅವರು ಮೆಟ್​ ಗಾಲಾ (Met Gala 2023) ಕಾರ್ಯಕ್ರಮದ ರೆಡ್​ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ್ದಾರೆ. ಅವರ ಫೋಟೋ ಮತ್ತು ವಿಡಿಯೋಗಾಗಿ ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ಕೆಲವರಿಗೆ ಅವರ ಗುರುತು ಸಿಕ್ಕಿಲ್ಲ. ಆಲಿಯಾ ಭಟ್​ ಅವರನ್ನು ನೋಡಿ ಐಶ್ವರ್ಯಾ ರೈ (Aishwarya Rai Bachchan) ಎಂದುಕೊಂಡಿದ್ದಾರೆ. ಈ ಬಗ್ಗೆ ಹೆಚ್ಚೇನೂ ಪ್ರತಿಕ್ರಿಯೆ ನೀಡುವ ಬದಲು ಆಲಿಯಾ ಅವರು ನಗುನಗುತ್ತಾ ಮುಂದೆ ಸಾಗಿದ್ದಾರೆ.

ಐಶ್ವರ್ಯಾ ರೈ ಅವರು ಜಾಗತಿಕ ಮಟ್ಟದಲ್ಲಿ ಮಿಂಚಿದ ಸೆಲೆಬ್ರಿಟಿ. ಕಾನ್​ ಫಿಲ್ಮ್​ ಫೆಸ್ಟಿವಲ್​ ಸೇರಿದಂತೆ ಅನೇಕ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರಿಂದ ವಿದೇಶದಲ್ಲಿನ ಜನರಿಗೂ ಅವರು ಚಿರಪರಿಚಿತರು. ಹಾಗಾಗಿ ‘ಮೆಟ್​ ಗಾಲಾ’ದಲ್ಲಿ ಆಲಿಯಾ ಅವರನ್ನು ನೋಡಿ ಕೆಲವರು ಐಶ್ವರ್ಯಾ ರೈ ಎಂದು ಕೂಗಿದ್ದಾರೆ. ಆಗ ಆಲಿಯಾ ಸಿಟ್ಟು ಮಾಡಿಕೊಂಡಿಲ್ಲ. ಅಲ್ಲಿ ಸ್ಪಷ್ಟನೆ ನೀಡುವ ಗೋಜಿಗೂ ಅವರು ಕೈ ಹಾಕಿಲ್ಲ. ಸುಮ್ಮನೇ ನಗುನಗುತ್ತ ಪೋಸ್​ ನೀಡಿದ್ದಾರೆ.

ಇದನ್ನೂ ಓದಿ
ವಿಮಾನ ನಿಲ್ದಾಣದಲ್ಲಿ ಗಾಬರಿಯಿಂದ ಓಡಿ ಹೋದ ನಟಿ ಆಲಿಯಾ ಭಟ್​; ವೈರಲ್​ ವಿಡಿಯೋದ ಸತ್ಯಾಂಶ ಏನು?
ಮದುವೆ ಬಳಿಕ ಕೆಲಸಕ್ಕೆ ಹೊರಟ ಆಲಿಯಾ ಭಟ್​; ವಿಮಾನ ನಿಲ್ದಾಣದ ಎದುರು ಕಾಣಿಸಿಕೊಂಡ ಸುಂದರಿ
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
ಹೆಣ್ಣಿನ ಕಡೆಯವರು ಕೇಳಿದ್ದು 11 ಕೋಟಿ ರೂ; ರಣಬೀರ್ ಕೊಟ್ಟಿದ್ದು 1 ಲಕ್ಷ ಮಾತ್ರ: ಆಲಿಯಾ ಮದುವೆ ಇನ್​ಸೈಡ್​​ ವಿಷಯ

ನ್ಯೂಯಾರ್ಕ್​ ನಗರದಲ್ಲಿ ನಡೆದ ಮೆಟ್​ ಗಾಲಾ ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಎಲ್ಲರೂ ಭಿನ್ನ ವಿಭಿನ್ನವಾದ ಕಾಸ್ಟ್ಯೂಮ್​ ಧರಿಸಿ ಹೆಜ್ಜೆ ಹಾಕಿದರು. ಆಲಿಯಾ ಭಟ್​ ಅವರು ಬಿಳಿ ಬಣ್ಣದ ಗೌನ್​ ಧರಿಸಿ ಕಂಗೊಳಿಸಿದರು. ಅವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

Alia Bhatt: ಮೊದಲ ಬಾರಿಗೆ ಅಮೆರಿಕದ ಫ್ಯಾಷನ್ ಹಬ್ಬದಲ್ಲಿ ಮಿಂಚಿದ ಆಲಿಯಾ ಭಟ್; ಪ್ರೀತಿ ಕಂಡು ನಟಿ ಭಾವುಕ

ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವರ್ಷ ಅವರು ಹಸೆಮಣೆ ಏರಿದರು. ಕೆಲವೇ ತಿಂಗಳ ಹಿಂದೆ ಹೆಣ್ಣು ಮಗುವಿಗೆ ಆಲಿಯಾ ಭಟ್​ ಜನ್ಮ ನೀಡಿದರು. ಮದುವೆ ಬಳಿಕ ಕೆಲವು ನಟಿಯರು ಸಂಸಾರದ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ಇದರಿಂದ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತವೆ. ಆದರೆ ಆಲಿಯಾ ಭಟ್​ ವಿಚಾರದಲ್ಲಿ ಆ ರೀತಿ ಆಗಿಲ್ಲ. ಮದುವೆ, ಮಗು ಆದ ನಂತರವೂ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಪ್ರಸ್ತುತ ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us