‘ಭಾರತ ಬಿಟ್ಟು ತೊಲಗಿ’: ಆಲಿಯಾ ಭಟ್​ಗೆ ಛೀಮಾರಿ ಹಾಕಿದ ಫ್ಯಾನ್ಸ್, ನಟಿ ಮಾಡಿದ ತಪ್ಪೇನು?

ಸೋಮವಾರ (ಮೇ 20) ಅಮಿತಾಭ್ ಬಚ್ಚನ್, ಹೃತಿಕ್ ರೋಷನ್, ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮೊದಲಾದವರು ವೋಟ್ ಮಾಡಿದ್ದಾರೆ. ರಣಬೀರ್ ಕಪೂರ್ ಕೂಡ ಮತ ಚಲಾಯಿಸಿದ್ದಾರೆ. ಆದರೆ, ರಣಬೀರ್ ಪತ್ನಿ ಆಲಿಯಾ ವೋಟ್ ಮಾಡಿಲ್ಲ.

‘ಭಾರತ ಬಿಟ್ಟು ತೊಲಗಿ’: ಆಲಿಯಾ ಭಟ್​ಗೆ ಛೀಮಾರಿ ಹಾಕಿದ ಫ್ಯಾನ್ಸ್, ನಟಿ ಮಾಡಿದ ತಪ್ಪೇನು?
ಆಲಿಯಾ

Updated on: May 22, 2024 | 7:00 AM

ನಟಿ ಆಲಿಯಾ ಭಟ್ (Alia Bhatt) ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದು. ಇನ್​ಸ್ಟಾಗ್ರಾಮ್​ನಲ್ಲಿ ಅವರಿಗೆ ಬರೋಬ್ಬರಿ 8.45 ಕೋಟಿ ಹಿಂಬಾಲಕರು ಇದ್ದಾರೆ. ಇದು ಅವರ ಜನಪ್ರಿಯತೆಗೆ ಇರೋ ಸಾಕ್ಷಿ. ಈ ಮಧ್ಯೆ ಆಲಿಯಾ ಭಟ್ ಅವರ ನಾಗರಿಕತ್ವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಅಸಲಿಗೆ ಆಲಿಯಾ ಭಾರತೀಯ ಪ್ರಜೆ ಅಲ್ಲ. ಅವರು ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ. ಹೀಗಾಗಿ, ಅವರಿಗೆ ವೋಟ್ ಮಾಡೋ ಹಕ್ಕು ಇಲ್ಲ. ಆಲಿಯಾ ಭಾರತೀಯ ನಾಗರಿಕತ್ವ ಪಡೆದುಕೊಳ್ಳಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಆಲಿಯಾಗೆ ಭಾರತ ಬಿಟ್ಟು ಹೋಗಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ (ಮೇ 20) ಅಮಿತಾಭ್ ಬಚ್ಚನ್, ಹೃತಿಕ್ ರೋಷನ್, ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮೊದಲಾದವರು ವೋಟ್ ಮಾಡಿದ್ದಾರೆ. ರಣಬೀರ್ ಕಪೂರ್ ಕೂಡ ಮತ ಚಲಾಯಿಸಿದ್ದಾರೆ. ಆದರೆ, ರಣಬೀರ್ ಪತ್ನಿ ಆಲಿಯಾ ಆಗಮಿಸಿಲ್ಲ. ಇದಕ್ಕೆ ಕಾರಣ ಅವರು ಭಾರತೀಯ ನಾಗರಿಕತ್ವ ಹೊಂದಿರದೇ ಇರುವುದು. ಇದನ್ನು ಅನೇಕರು ಟೀಕಿಸುತ್ತಿದ್ದಾರೆ.

ಈ ಮೊದಲು ಅಕ್ಷಯ್ ಕುಮಾರ್ ಅವರು ಈ ವಿಚಾರಕ್ಕೆ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಅವರು ಭಾರತದ ನಾಗರಿಕತ್ವ ಬಿಟ್ಟು ಕೆನಡಾ ಪೌರತ್ವ ಪಡೆದಿದ್ದರು. ಆ ಬಳಿಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರು ಭಾರತೀಯ ಪೌರತ್ವ ಪಡೆದರು. ಈ ಬಾರಿ ಅವರು ವೋಟ್ ಕೂಡ ಮಾಡಿದ್ದಾರೆ. ಆಲಿಯಾ ಭಟ್ ಕೂಡ ಭಾರತೀಯ ಪೌರತ್ವ ಪಡೆಯ ಬೇಕು ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ರಣ್​ಬೀರ್ ಕಪೂರ್-ಆಲಿಯಾ ಭಟ್ ಹೊಸ ಬಂಗಲೆಯ ಬಜೆಟ್ ಎಷ್ಟು ಕೋಟಿ?

ಈ ಮಧ್ಯೆ ಆಲಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ನಿಗೂಡಾರ್ಥದ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆಲಿಯಾ ಭಟ್ ಅವರು ಈ ಮೊದಲು ಅವರ ಹಾಲಿವುಡ್ ಸಿನಿಮಾ ‘ಹಾರ್ಟ್ ಆಫ್ ಸ್ಟೋನ್’ ಚಿತ್ರದ ಪ್ರಚಾರಕ್ಕೆ ಇಂಗ್ಲೆಂಡ್ ತೆರಳಿದ್ದರು. ಈ ವೇಳೆ ಆಲಿಯಾಗೆ ಬ್ರಿಟನ್ ನಾಗರಿಕತ್ವದ ಬಗ್ಗೆ ಪ್ರಶ್ನೆ ಎದುರಾಗಿತ್ತು. ‘ನನ್ನ ತಾಯಿ ಬರ್ನಿಂಗ್​ಹ್ಯಾಮ್​ನವರು. ನಾನು ಭಾರತದಲ್ಲಿ ಹುಟ್ಟಿ ಬೆಳೆದೆ. ನನ್ನ ಅಜ್ಜಿ ತಮ್ಮ ಜೀವನವನ್ನು ಸಂಪೂರ್ಣವಾಗಿ ಇಂಗ್ಲೆಂಡ್​ನಲ್ಲಿ ಕಳೆದರು. ಅವರಿಗೆ ಇಂಗ್ಲೆಂಡ್ ಇಂಗ್ಲಿಂಷ್ ಆ್ಯಕ್ಸೆಂಟ್ ಬರುತ್ತಿತ್ತು’ ಎಂದಿದ್ದರು ಆಲಿಯಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us