ಈ ಫೋಟೋದಲ್ಲಿರುವ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?

ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಅವರು ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡರು. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬಂದಿದೆ. ಅದೇ ರೀತಿ ಆಲಿಯಾ ಭಟ್ ಕೂಡ ತಂದೆಗೆ ವಿಶ್ ಮಾಡಿದ್ದಾರೆ. ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಅವರು ವಿಶ್ ತಿಳಿಸಿದ್ದಾರೆ.

ಈ ಫೋಟೋದಲ್ಲಿರುವ ಸ್ಟಾರ್ ನಟಿ ಯಾರೆಂದು ಗುರುತಿಸುತ್ತೀರಾ?
ಸ್ಟಾರ್ ನಟಿಯ ಬಾಲ್ಯದ ಫೋಟೋ

Updated on: Sep 21, 2023 | 7:30 AM

ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಹೊಸ ಹೊಸ ಫೋಟೋ ವೈರಲ್ ಆಗುತ್ತವೆ. ಬಾಲ್ಯದ ಫೋಟೋಗಳನ್ನು ಸೆಲೆಬ್ರಿಟಿಗಳೇ ಹಂಚಿಕೊಳ್ಳುತ್ತಾರೆ. ಈಗ ಸ್ಟಾರ್ ನಟಿಯ ಬಾಲ್ಯದ ಫೋಟೋ ಒಂದು ವೈರಲ್ ಆಗಿದೆ. ಇವರು ಸ್ಟಾರ್ ನಟನ ಮಗಳು. ಬಾಲಿವುಡ್​ನಲ್ಲಿ ಇವರಿಗೆ ಸಖತ್ ಬೇಡಿಕೆ ಇದೆ. ಸ್ಟಾರ್ ಹೀರೋ ಜೊತೆ ಇವರ ಮದುವೆ ಕೂಡ ನಡೆದಿದೆ. ಅಷ್ಟಕ್ಕೂ ಯಾರು ಈ ನಟಿ? ಆಲಿಯಾ ಭಟ್ (Alia Bhatt) . ಅವರು ಹಂಚಿಕೊಂಡ ಬಾಲ್ಯದ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಅವರು ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡರು. ಅವರಿಗೆ ಎಲ್ಲ ಕಡೆಗಳಿಂದ ವಿಶ್ ಬಂದಿದೆ. ಅದೇ ರೀತಿ ಆಲಿಯಾ ಭಟ್ ಕೂಡ ತಂದೆಗೆ ವಿಶ್ ಮಾಡಿದ್ದಾರೆ. ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಅವರು ವಿಶ್ ತಿಳಿಸಿದ್ದಾರೆ. ‘ಹ್ಯಾಪಿ ಬರ್ತ್​ಡೇ ಅಪ್ಪ’ ಎಂದು ಅವರು ಬರೆದುಕೊಂಡಿದ್ದಾರೆ.

ಮಹೇಶ್ ಭಟ್ ಅವರು ಬಾಲಿವುಡ್​ನಲ್ಲಿ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಅವರ ಮಗಳು ಆಲಿಯಾ. ಮಹೇಶ್ ಭಟ್ ಮಗಳು ಎನ್ನುವ ಕಾರಣಕ್ಕೆ ಆಲಿಯಾರನ್ನು ಕರಣ್ ಜೋಹರ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದರು. ಆ ಬಳಿಕ ಅವರು ತಮ್ಮದೇ ಛಾಪು ಮೂಡಿಸಿದರು.

ಆಲಿಯಾ ಭಟ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ. ಆ ಬಳಿಕ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ‘ರಾಜಿ’ ಮೊದಲಾದ ಸಿನಿಮಾಗಳ ಮೂಲಕ ಅವರು ನಟಿಸಿ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.

ಇದನ್ನೂ ಓದಿ: ಆಲಿಯಾ ಭಟ್ ನಟಿಯಷ್ಟೆ ಅಲ್ಲ ಉದ್ಯಮಿಯೂ ಹೌದು, ಆಲಿಯಾ ಹಣ ತೊಡಗಿಸಿರುವ ಸಂಸ್ಥೆಗಳು ಯಾವುವು?

ಆಲಿಯಾ ಭಟ್ ಅವರು ಸದ್ಯ ಮಗಳು ರಹಾ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆ ಅವರು ಹೊಸ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳಬೇಕಿದೆ. ಮಹೇಶ್ ಭಟ್ ಅವರ ಮತ್ತೋರ್ವ ಮಗಳು ಪೂಜಾ ಭಟ್ ಇತ್ತೀಚೆಗೆ ಬಿಗ್ ಬಾಸ್ ಒಟಿಟಿಗೆ ತೆರಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us