Allu Arjun: ‘ಜವಾನ್​’ ಸಿನಿಮಾದಲ್ಲಿ ನಟಿಸಲ್ವಾ ಅಲ್ಲು ಅರ್ಜುನ್​? ಶಾರುಖ್​ ಖಾನ್​ ಚಿತ್ರದ ಬಗ್ಗೆ ಹತ್ತಾರು ಗಾಸಿಪ್​

Shah Rukh Khan: ಅಲ್ಲು ಅರ್ಜುನ್​ ಅವರದ್ದು ಅತಿಥಿ ಪಾತ್ರ ಆಗಿರಲಿದ್ದು, ಅವರು ಈಗಾಗಲೇ ಶೂಟಿಂಗ್​ ಕೂಡ ಮುಗಿಸಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಹೊಸ ಮಾಹಿತಿ ಹಬ್ಬಿದೆ.

Allu Arjun: ‘ಜವಾನ್​’ ಸಿನಿಮಾದಲ್ಲಿ ನಟಿಸಲ್ವಾ ಅಲ್ಲು ಅರ್ಜುನ್​? ಶಾರುಖ್​ ಖಾನ್​ ಚಿತ್ರದ ಬಗ್ಗೆ ಹತ್ತಾರು ಗಾಸಿಪ್​
ಶಾರುಖ್​ ಖಾನ್​, ಅಲ್ಲು ಅರ್ಜುನ್​

Updated on: May 28, 2023 | 12:22 PM

ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಗಾಸಿಪ್​ ವಲಯದಲ್ಲಿ ಸಾಕಷ್ಟು ಅಂತೆ-ಕಂತೆಗಳು ಹರಿದಾಡುತ್ತವೆ. ಶಾರುಖ್​ ಖಾನ್​ (Shah Rukh Khan) ನಟನೆಯ ‘ಜವಾನ್​’ ಸಿನಿಮಾ ಬಗ್ಗೆಯೂ ಸಿಕ್ಕಾಪಟ್ಟೆ ಗಾಸಿಪ್​ ಹುಟ್ಟಿಕೊಂಡಿವೆ. ಈ ಸಿನಿಮಾದಲ್ಲಿ ಟಾಲಿವುಡ್​ನ ಸ್ಟಾರ್​ ನಟ ಅಲ್ಲು ಅರ್ಜುನ್​ (Allu Arjun) ನಟಿಸುತ್ತಾರೆ ಎಂದು ಕೆಲವೇ ದಿನಗಳ ಹಿಂದೆ ಗುಸುಗುಸು ಕೇಳಿಬಂದಿತ್ತು. ಆದರೆ ಆ ಬಗ್ಗೆ ಚಿತ್ರತಂಡದಿಂದ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಲಿಲ್ಲ. ಅಲ್ಲು ಅರ್ಜುನ್​ ಅವರದ್ದು ಅತಿಥಿ ಪಾತ್ರ ಆಗಿರಲಿದ್ದು, ಅವರು ಈಗಾಗಲೇ ಶೂಟಿಂಗ್​ ಕೂಡ ಮುಗಿಸಿದ್ದಾರೆ ಎನ್ನಲಾಗಿತ್ತು. ಈಗ ಹೊಸ ಮಾಹಿತಿ ಹಬ್ಬಿದೆ. ‘ಜವಾನ್​’ (Jawan) ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ನಟಿಸಿಲ್ಲ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ. ಸೆಪ್ಟೆಂಬರ್​ 7ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಅಲ್ಲಿಯವರೆಗೂ ಇಂಥ ಅಂತೆ-ಕಂತೆಗಳು ಕೇಳಿಬರುವುದು ಸಹಜ. ಈ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ.

ಅಲ್ಲು ಅರ್ಜುನ್​ ಅವರು ಸದ್ಯಕ್ಕೆ ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ಮತ್ತು ಸೌತ್​ ಸಿನಿಮಾ ಇಂಡಸ್ಟ್ರಿ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಹಿಂದಿ ನಟರು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸೋದು ಹೆಚ್ಚಾಗಿದೆ. ಅದೇ ರೀತಿ ಸೌತ್​ ಸ್ಟಾರ್​ಗಳಿಗೆ ಬಾಲಿವುಡ್​ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿದೆ. ಹಾಗಾಗಿ ‘ಜವಾನ್​’ ಚಿತ್ರದಲ್ಲಿ ಅಲ್ಲು ಅರ್ಜುನ್​ ನಟಿಸಬಹುದು ಎಂಬ ಗಾಸಿಪ್ ಹುಟ್ಟಿಕೊಂಡಿತ್ತು. ಆದರೆ ಅದು ನಿಜವಾಗುವಂತೆ ಕಾಣುತ್ತಿಲ್ಲ.

ಇದನ್ನೂ ಓದಿ: Pushpa 2: ಈ ವರ್ಷ ರಿಲೀಸ್ ಆಗಲ್ವಾ ‘ಪುಷ್ಪ 2’ ಸಿನಿಮಾ? ಅಲ್ಲು ಅರ್ಜುನ್​ ಅಭಿಮಾನಿಗಳಿಗೆ ಬೇಸರ

‘ಜವಾನ್​’ ಸಿನಿಮಾದಲ್ಲಿ ಸಾನ್ಯಾ ಮಲ್ಹೋತ್ರಾ:

ಶಾರುಖ್​ ಖಾನ್​ ಜೊತೆ ‘ಜವಾನ್​’ ಸಿನಿಮಾದಲ್ಲಿ ಸಾನ್ಯಾ ಮಲ್ಹೋತ್ರಾ ಕೂಡ ಬಣ್ಣ ಹಚ್ಚಿದ್ದಾರೆ ಎಂಬುದು ಈಗ ಖಚಿತವಾಗಿದೆ. ಸ್ವತಃ ಅವರೇ ಈ ವಿಷಯ ಸ್ಪಷ್ಟಪಡಿಸಿದ್ದಾರೆ ಎಂದು ‘ಈ ಟೈಮ್ಸ್​’ ಇತ್ತೀಚೆಗೆ ವರದಿ ಮಾಡಿತ್ತು. ನಯನತಾರಾ, ವಿಜಯ್​ ಸೇತುಪತಿ ಮುಂತಾದ ಘಟಾನುಘಟಿ ಕಲಾವಿದರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಸಾನ್ಯಾ ಮಲ್ಹೋತ್ರಾ ಅವರು ಸಹ ಈ ಬಹುನಿರೀಕ್ಷಿತ ಚಿತ್ರದಲ್ಲಿ ನಟಿಸಿರಬಹುದು ಎಂಬ ಗುಮಾನಿ ಹಲವರಿಗೆ ಮೂಡಿತ್ತು. ಆ ಬಗ್ಗೆ ಕೆಲವು ವರದಿಗಳು ಪ್ರಕಟ ಆಗಿದ್ದವು. ಈಗ ಆ ಗುಮಾನಿ ನಿಜವಾಗಿದೆ. ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಸಾನ್ಯಾ ಮಲ್ಹೋತ್ರಾ ಅವರು ಖುಷಿಯಾಗಿದ್ದಾರೆ.

ಇದನ್ನೂ ಓದಿ: Shah Rukh Khan: ‘ಮಲ್ಲಿಕಾ ಶೆರಾವತ್​ ಜತೆ ನಾನು ಆಟ ಆಡಬಹುದಾ?’: ಶಾರುಖ್​ ಖಾನ್​ ಹಳೇ ವಿಡಿಯೋ ವೈರಲ್​

ಶಾರುಖ್​ ಖಾನ್​ ಅವರು ‘ಪಠಾಣ್​’ ಸಿನಿಮಾದ ಗೆಲುವಿನ ಬಳಿಕ ಮತ್ತೆ ಫಾರ್ಮ್​ಗೆ ಮರಳಿದ್ದಾರೆ. ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೆಚ್ಚಿನ ನಿರೀಕ್ಷೆ ಸೃಷ್ಟಿ ಆಗಿದೆ. ಪ್ರಸ್ತುತ ಶಾರುಖ್​ ಖಾನ್​ ಅವರು ‘ಡಂಕಿ’ ಮತ್ತು ‘ಜವಾನ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಜವಾನ್​’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್​ ದಿನಾಂಕ ತಿಳಿಸಲು ಇತ್ತೀಚೆಗೆ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಸೆಪ್ಟೆಂಬರ್​ 7ರಂದು ‘ಜವಾನ್​’ ತೆರೆಕಾಣಲಿದೆ ಎಂದು ಶಾರುಖ್​ ಖಾನ್​ ತಿಳಿಸಿದ್ದಾರೆ. ಶಾರುಖ್​ ಖಾನ್​ ಅವರ ಹೋಂ ಬ್ಯಾನರ್​ ‘ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​’ ಮೂಲಕ ‘ಜವಾನ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಶಾರುಖ್​ ಪತ್ನಿ ಗೌರಿ ಖಾನ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದೇಶದ ವಿವಿಧ ನಗರಗಳಲ್ಲಿ ಈ ಚಿತ್ರದ ಶೂಟಿಂಗ್​ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us