ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಅನುಪಮ್ ಖೇರ್, ಚಿರಂಜೀವಿ; ಕಾರಣವೇನು?

|

Updated on: Feb 08, 2025 | 1:01 PM

ವರ್ಡ್ ಆಡಿಯೋ ವಿಶ್ಯುವಲ್ಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಶೃಂಗಸಭೆ (WAVES) ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖೇಶ್ ಅಂಬಾನಿ ಮತ್ತು ಅಮಿತಾಭ್ ಬಚ್ಚನ್ ಅವರೊಂದಿಗೆ ಚರ್ಚಿಸಿದ್ದಾರೆ. ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ದಕ್ಷಿಣ ಭಾರತದ ನಟ ಚಿರಂಜೀವಿ ಅವರನ್ನು ಸಲಹಾ ಮಂಡಳಿಗೆ ನೇಮಿಸಲಾಗಿದೆ. ಇಬ್ಬರೂ ನಟರು ಪ್ರಧಾನಿಯವರಿಗೆ ಧನ್ಯವಾದ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಅನುಪಮ್ ಖೇರ್, ಚಿರಂಜೀವಿ; ಕಾರಣವೇನು?
ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಅನುಪಮ್ ಖೇರ್, ಚಿರಂಜೀವಿ; ಕಾರಣವೇನು?
Follow us on

ವರ್ಡ್​​ ಆಡಿಯೋ ವಿಶ್ಯುವಲ್ಸ್ ಆ್ಯಂಡ್ ಎಂಟರ್​ಟೇನ್​ಮೆಂಟ್ ಶೃಂಗಸಭೆ (WAVES) ನಡೆಯುತ್ತಿದೆ. ಈ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿ ಮುಖೇಷ್ ಅಂಬಾನಿ, ನಟ ಅಮಿತಾಭ್ ಬಚ್ಚನ್ ಜೊತೆ ಚರ್ಚೆ ನಡೆಸಿದರು. ಈ ಶೃಂಗಸಭೆಯ ಸಲಹಾ ಮಂಡಳಿಗೆ ಬಾಲಿವುಡ್ ನಟ ಅನುಪಮ್ ಖೇರ್ ಹಾಗೂ ದಕ್ಷಿಣದ ಹೀರೋ ಚಿರಂಜೀವಿಯನ್ನು ಆಯ್ಕೆ ಮಾಡಲಾಗಿದೆ. ಈ ಇಬ್ಬರೂ ಹೀರೋಗಳು ಈಗ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರೇ ಧನ್ಯವಾದ. ನನಗೆ ಒಂದು ಒಳ್ಳೆಯ ಅವಕಾಶ ನಿಡಿದ್ದೀರಾ. ನಾನು WAVESನ ಸಲಹಾ ಸಮಿತಿಯಲ್ಲಿ ಇರುವುದಕ್ಕೆ ಖುಷಿ ಆಗುತ್ತಿದೆ. ಇದೊಂದು ಒಳ್ಳೆಯ ಕ್ರಮ. ಇದು ಭಾರತವನ್ನು ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುತ್ತದೆ’ ಎಂದು ಅನುಮಪ್ ಖೇರ್ ಹೇಳಿದ್ದಾರೆ.

ಚಿರಂಜೀವಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರೇ ಧನ್ಯವಾದ. ಈ ಸಲಹಾ ಸಮಿತಿಯ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ. WAVES ಇದು ಪ್ರಧಾನಿ ಮೋದಿ ಅವರ ಚಿಂತನೆ ಅನ್ನೋದು ಗೊತ್ತು’ ಎಂದಿದ್ದಾರೆ ಚಿರಂಜೀವಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.