ಬಚ್ಪನ್ಕಾ ಪ್ಯಾರ್ ಹಾಡಿನ ಮೂಲಕ ದೇಶದಲ್ಲಿ ಹೊಸ ಸಂಚಲನ ಮೂಡಿಸಿದ್ದ ಸಹದೇವ್ ದಿರ್ಡೋಗೆ ಅಪಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬಾಲಿವುಡ್ ರಾಪ್ ಸಿಂಗರ್ ಬಾದ್ ಶಾ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಛತ್ತೀಸ್ಘಡದ 10 ವರ್ಷದ ಬಾಲಕ ಸಹದೇವ್ ತಂದೆಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಅಪಘಾತವಾಗಿದ್ದು ಸಹದೇವ್ ಬೈಕ್ನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೈಕ್ನಿಂದ ಬಿದ್ದ ಸಹದೇವ್ ಅವರ ತಲೆಗೆ ಬಲವಾಗಿ ಏಟು ಬಿದ್ದಿದೆ ಎನ್ನಲಾಗಿದ್ದು, ಸಹದೇವ್ ಅವರನ್ನು ಜಗದಲ್ಪುರ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಾದ್ ಶಾ, ಸಹದೇವ್ ಕುಟುಂಬದೊಂದಿಗೆ ನಾನು ಸಂಪರ್ಕದಲ್ಲಿದ್ದೇನೆ. ಅವರಿಗೆ ಎಲ್ಲಾ ರೀತಿಯ ನೆರವನ್ನು ನೀಡುತ್ತೇನೆ ಎಂದಿದ್ದಾರೆ. ಈ ಬಗ್ಗೆ ನಿನ್ನೆ ರಾತ್ರಿ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಸಹದೇವ್ ಅವರ ಮೇಲೆ ವೈದ್ಯರು ನಿಗಾ ವಹಿಸಿದ್ದು, ಸ್ಥಳೀಯ ಜಿಲ್ಲಾಧಿಕಾರಿ ಕೂಡ ಆಸ್ಪತ್ರೆಗೆ ತೆರಳಿ ಸಹದೇವ್ ಆರೋಗ್ಯ ವಿಚಾರಿಸಿದ್ದಾರೆ.
In touch with Sahdev’s family and friends. He is unconscious, on his way to hospital. Im there for him. Need your prayers ?
— BADSHAH (@Its_Badshah) December 28, 2021
2021ರಲ್ಲಿ ಬಚ್ಪನ್ಕಾ ಪ್ಯಾರ್ ಹಾಡಿನ ಮೂಲಕ ಸಹದೇವ್ ಇಡೀ ದೇಶದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಛತ್ತೀಸ್ಘಡ ಮುಖ್ಯಮಂತ್ರಿಗಳು ಕೂಡ ಸಹದೇವ್ ಅವರನ್ನು ಸನ್ಮಾನಿಸಿದ್ದರು. ಅಲ್ಲದೆ ಅಗಸ್ಟ್ನಲ್ಲಿ ಬಾಲಿವುಡ್ನ ರಾಪ್ ಸಿಂಗರ್ ಬಾದ್ ಶಾ ಸಹದೇವ್ ಅವರನ್ನು ಭೇಟಿಯಾಗಿ ಅವರೊಂದಿಗೆ ಹಾಡನ್ನೂ ಹಾಡಿದ್ದರು. ಅವರಿಬ್ಬರ ರಿಮಿಕ್ಸ್ ಎಲ್ಲೆಡೆ ವೈರಲ್ ಆಗಿತ್ತು.
Published On - 9:35 am, Wed, 29 December 21