ಶಾರುಖ್ ಖಾನ್ ಪುತ್ರನ ಸಹವಾಸದಿಂದ ರಣ್​​ಬೀರ್​​ ಕಪೂರ್​​ ವಿರುದ್ಧ ದೂರು

Bads of Bollywood: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ‘ಬ್ಯಾಡ್ಸ್ ಆಫ್ ಬಾಲಿವಡ್’ ವೆಬ್ ಸರಣಿ ನಿರ್ದೇಶನ ಮಾಡಿದ್ದು, ವೆಬ್ ಸರಣಿ ಕೆಲ ದಿನಗಳ ಹಿಂದಷ್ಟೆ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ವೆಬ್ ಸರಣಿಯಲ್ಲಿ ಬಾಲಿವುಡ್​ನ ಹಲವು ದಿಗ್ಗಜರು ನಟಿಸಿದ್ದಾರೆ. ನಟ ರಣ್​​ಬೀರ್ ಕಪೂರ್ ಸಹ ವೆಬ್ ಸರಣಿಯಲ್ಲಿ ನಟಿಸಿದ್ದು, ಇದೇ ಕಾರಣಕ್ಕೆ ರಣ್​ಬೀರ್ ಕಪೂರ್ ವಿರುದ್ಧ ದೂರು ದಾಖಲಾಗಿದೆ.

ಶಾರುಖ್ ಖಾನ್ ಪುತ್ರನ ಸಹವಾಸದಿಂದ ರಣ್​​ಬೀರ್​​ ಕಪೂರ್​​ ವಿರುದ್ಧ ದೂರು
Ranbir Kapoor

Updated on: Sep 23, 2025 | 10:45 AM

ಬಾಲಿವುಡ್ (Bollywood) ಸ್ಟಾರ್ ನಟ ರಣ್​​ಬೀರ್ ಕಪೂರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಾರುಖ್ ಖಾನ್ ಪುತ್ರ ‘ಸಹವಾಸ’ ಮಾಡಿದ್ದಕ್ಕೆ ಅವರ ವಿರುದ್ಧ ದೂರು ದಾಖಲಾಗಿದೆ. ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ‘ಬ್ಯಾಡ್ಸ್​ ಆಫ್ ಬಾಲಿವುಡ್’ ಹೆಸರಿನ ವೆಬ್ ಸರಣಿ ಒಂದನ್ನು ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ವೆಬ್ ಸರಣಿಯಲ್ಲಿ ರಣ್​​ಬೀರ್ ಕಪೂರ್ ಸಹ ನಟಿಸಿದ್ದಾರೆ. ಇದೇ ಕಾರಣಕ್ಕೆ ರಣ್​​ಬೀರ್ ವಿರುದ್ಧ ಹಾಗೂ ವೆಬ್ ಸರಣಿ ನಿರ್ಮಾಣ ಸಂಸ್ಥೆ ಮತ್ತು ಒಟಿಟಿ ವಿರುದ್ಧವೂ ದೂರು ದಾಖಲಾಗಿದೆ.

‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿಯ ಕೊನೆಯ ಎಪಿಸೋಡ್​​ನಲ್ಲಿ ರಣ್​​ಬೀರ್ ಕಪೂರ್ ಕಾಣಿಸಿಕೊಂಡಿದ್ದಾರೆ. ರಣ್​​ಬೀರ್ ಕಪೂರ್ ಅವರ ಸೀನ್​​ನಲ್ಲಿ ಇ ಸಿಗರೇಟು ಸೇದುತ್ತಿರುತ್ತಾರೆ. ಅಸಲಿಗೆ ಭಾರತದಲ್ಲಿ ಇ-ಸಿಗರೇಟುಗಳು ಬ್ಯಾನ್ ಆಗಿವೆ. ಇದೇ ಕಾರಣಕ್ಕೆ ಇದೀಗ ರಣ್​​ಬೀರ್ ಕಪೂರ್ ವಿರುದ್ಧ ದೂರು ದಾಖಲಾಗಿದೆ. ಮಾನವ ಹಕ್ಕು ಸಂಘಟನೆಯು, ಈ ಕುರಿತು ಮಾಹಿತಿ ಮತ್ತು ಪ್ರಸಾರ ಖಾತೆ ಇಲಾಖೆಗೆ ದೂರು ದಾಖಲು ಮಾಡಿದೆ.

ನಿಷೇಧಿತ ಇ-ಸಿಗರೇಟು ಸೇದಿರುವುದು ಮಾತ್ರವಲ್ಲದೆ, ಆ ದೃಶ್ಯ ಪ್ರಸಾರ ಆಗುವಾಗ ಎಚ್ಚರಿಕೆ ಸಂದೇಶವನ್ನು ಸಹ ಅವರು ಪ್ರಕಟ ಮಾಡಿಲ್ಲ. ಜನಪ್ರಿಯ ನಟರೊಬ್ಬರು ನಟಿಸಿ ನಿಷೇಧಿತ ವಸ್ತುಗಳಿಗೆ ಪ್ರಚಾರ ನೀಡಿದ್ದಾರೆ. ವೆಬ್ ಸರಣಿ ನೋಡುವ ಯುವಕರು ಇ-ಸಿಗರೇಟು ಬಳಸಲು ಉತ್ಸುಕರಾಗುವ ಅಪಾಯ ಇದೆ. ಹಾಗಾಗಿ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಮಾನವ ಹಕ್ಕು ಸಂಘಟನೆಯು ತನ್ನ ದೂರಿನಲ್ಲಿ ಹೇಳಿದೆ.

‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದು, ಇದೀಗ ನಟ ರಣ್​​ಬೀರ್ ಕಪೂರ್, ನಿರ್ಮಾಣ ಸಂಸ್ಥೆಯಾದ ರೆಡ್ ಚಿಲ್ಲೀಸ್, ನಟ ರಣ್​​ಬೀರ್ ಕಪೂರ್ ವಿರುದ್ಧ ದೂರು ದಾಖಲಾಗಿದೆ. ‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿಯನ್ನು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನಿರ್​ದೇಶನ ಮಾಡಿದ್ದು, ಶಾರುಖ್ ಖಾನ್ ಅವರೇ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ಗೆಲ್ಲೋ ಕನಸು ಕಂಡಿದ್ದ ಹರ್ಷಗೆ ಭಾರೀ ನಿರಾಸೆ; ‘ಬಾಘಿ 4’ ಚಿತ್ರದಿಂದ ನಿರ್ಮಾಪಕರಿಗೆ ನಷ್ಟ

‘ಬ್ಯಾಡ್ಸ್​ ಆಫ್ ಬಾಲಿವುಡ್’ ವೆಬ್ ಸರಣಿಯು, ಬಾಲಿವುಡ್ ಬಗೆಗಿನ ವೆಬ್ ಸರಣಿಯಾಗಿದ್ದು, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರಣ್ವೀರ್ ಸಿಂಗ್, ಕರಣ್ ಜೋಹರ್, ಬಾದ್​​ಶಾ ಸೇರಿದಂತೆ ಇನ್ನೂ ಹಲವಾರು ಮಂದಿ ಬಾಲಿವುಡ್ ದಿಗ್ಗಜರು ವೆಬ್ ಸರಣಿಯ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ರಾಜಮೌಳಿ ಸಹ ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ವೆಬ್ ಸರಣಿ ನೆಟ್​ಫ್ಲಿಕ್ಸ್​​ನಲ್ಲ ಬಿಡುಗಡೆ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us