
ಕಾರ್ತಿಕ್ ಆರ್ಯನ್ (Kartik Aaryan) ವೃತ್ತಿ ಜೀವನದಲ್ಲಿ ‘ಭೂಲ್ ಭುಲಯ್ಯ 2’ ಸಿನಿಮಾ (Bhool Bhulaiyaa 2 ) ತುಂಬಾನೇ ವಿಶೇಷವಾಗಿದೆ. ಅವರಿಗೆ ಈ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿದೆ. 100 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಚಿತ್ರ ಮತ್ತೊಂದು ಮೈಲುಗಲ್ಲು ದಾಟಿದೆ. ಇಂದು (ಮೇ 29) ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಹೆಜ್ಜೆ ಹಾಕುತ್ತಿದೆ. ಚಿತ್ರದ ಯಶಸ್ಸಿನ ಬಗ್ಗೆ ಚಿತ್ರತಂಡ ಸಖತ್ ಖುಷಿಪಟ್ಟಿದೆ.
ಇತ್ತೀಚಿನ ದಿನಗಳಲ್ಲಿ ಬಾಲಿವುಡ್ಗೆ ಗ್ರಹಣ ಮೆಟ್ಟಿಕೊಂಡಿತ್ತು. ಹಿಂದಿ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಆಗಿತ್ತು. ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಅನ್ನೋದು ಇದಕ್ಕೆ ಪ್ರಮುಖ ಕಾರಣ. ಆದರೆ, ಈಗ ‘ಭೂಲ್ ಭುಲಯ್ಯ 2’ ಚಿತ್ರದಿಂದ ಬಾಲಿವುಡ್ಗೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಈ ಸಿನಿಮಾ 200 ಕೋಟಿ ರೂಪಾಯಿ ಗಳಿಕೆ ಮಾಡಲಿದೆಯೇ ಅನ್ನೋದು ಸದ್ಯದ ಕುತೂಹಲ.
ಈ ಚಿತ್ರ ರಿಲೀಸ್ ಆದ ಮೊದಲ ವಾರವೇ 50+ ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ವಾರವೂ ಚಿತ್ರದ ಕಮಾಯಿ ಚೆನ್ನಾಗಿಯೇ ಆಗುತ್ತಿದೆ. ಶುಕ್ರವಾರ (ಮೇ 27) 6.52 ಕೋಟಿ ರೂಪಾಯಿ, ಶನಿವಾರ (ಮೇ 28) 11.32 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 109 ಕೋಟಿ ರೂಪಾಯಿ ದಾಟಿದೆ. ಇಂದಿನ ಕಲೆಕ್ಷನ್ ಅನಾಯಾಸವಾಗಿ 15 ಕೋಟಿ ರೂಪಾಯಿ ದಾಟುವುದರಿಂದ ಚಿತ್ರದ ಒಟ್ಟಾರೆ ಕಲೆಕ್ಷನ್ 125 ಕೋಟಿ ರೂಪಾಯಿ ಸಮೀಪಿಸಲಿದೆ.
ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಅವರು ‘ಭೂಲ್ ಭುಲ್ಲಯ್ಯ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಶೇರ್ಷಾ’ ಬಳಿಕ ಕಿಯಾರಾಗೆ ಮತ್ತೊಂದು ಗೆಲುವು ಸಿಕ್ಕಿದೆ. ಇವರ ಕೆಮಿಸ್ಟ್ರಿ ವರ್ಕ್ ಆಗಿದೆ. ಇತ್ತೀಚೆಗೆ ಪುಣೆಯಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಕಾರ್ತಿಕ್ ಆರ್ಯನ್ ಅವರು ರಸ್ತೆ ಬದಿಯ ಹೋಟೆಲ್ನಲ್ಲಿ ನಿಂತು ಊಟ ಮಾಡಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.