‘ಭೂಲ್​ ಭುಲಯ್ಯ 3’ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​, ಸಾರಾ ಅಲಿ ಖಾನ್​ ಜೋಡಿ?

|

Updated on: Dec 11, 2023 | 3:15 PM

‘ಭೂಲ್​ ಭುಲಯ್ಯ 3’ ಸಿನಿಮಾಗೆ ಭೂಷಣ್​ ಕುಮಾರ್​ ಬಂಡವಾಳ ಹೂಡಲಿದ್ದಾರೆ. ಅನೀಸ್​ ಬಾಜ್ಮಿ ಅವರು ನಿರ್ದೇಶನ ಮಾಡಲಿದ್ದಾರೆ. ‘ಲವ್​ ಆಜ್​ ಕಲ್​’ ಬಳಿಕ ಮತ್ತೊಮ್ಮೆ ಜೋಡಿಯಾಗಿ ನಟಿಸಲು ಕಾರ್ತಿಕ್ ಆರ್ಯನ್​ ಮತ್ತು ಸಾರಾ ಅಲಿ ಖಾನ್​ ಉತ್ಸುಕರಾಗಿದ್ದಾರೆ. 3 ತಿಂಗಳ ಕಾಲ ಈ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ.

‘ಭೂಲ್​ ಭುಲಯ್ಯ 3’ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್​, ಸಾರಾ ಅಲಿ ಖಾನ್​ ಜೋಡಿ?
ಕಾರ್ತಿಕ್​ ಆರ್ಯನ್​, ಸಾರಾ ಅಲಿ ಖಾನ್​
Follow us on

ಬಾಲಿವುಡ್​ನಲ್ಲಿ ‘ಭೂಲ್​ ಭುಲಯ್ಯ’ ಮತ್ತು ‘ಭೂಲ್​ ಭುಲಯ್ಯ 2’ ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಈಗ ಈ ಸಿನಿಮಾದ ಮೂರನೇ ಪಾರ್ಟ್​ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಮೊದಲ ಪಾರ್ಟ್​​ನಲ್ಲಿ ಅಕ್ಷಯ್​​ ಕುಮಾರ್​ ನಟಿಸಿದ್ದರು. ‘ಭೂಲ್​ ಭುಲಯ್ಯ 2’ ಚಿತ್ರದಲ್ಲಿ ಕಾರ್ತಿಕ್​ ಆರ್ಯನ್ (Kartik Aaryan) ಹೀರೋ ಆಗಿ​ ಅಭಿನಯಿಸಿ ಗೆಲುವು ಪಡೆದರು. ಈಗ ಮೂರನೇ ಪಾರ್ಟ್​​ನಲ್ಲೂ ಕಾರ್ತಿಕ್​ ಆರ್ಯನ್​ ನಟಿಸಲಿದ್ದಾರೆ ಎಂಬುದು ಖಚಿತವಾಗಿದೆ. ವಿಶೇಷ ಏನೆಂದರೆ, ‘ಭೂಲ್​ ಭುಲಯ್ಯ 3’ (Bhool Bhulaiyaa 3) ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಸಾರಾ ಅಲಿ ಖಾನ್​ (Sara Ali Khan) ನಟಿಸುತ್ತಾರೆ ಎಂಬ ಗಾಸಿಪ್​ ಕೇಳಿಬಂದಿದೆ.

ಈ ಮೊದಲು ‘ಲವ್​ ಆಜ್​ ಕಲ್​’ ಸಿನಿಮಾದಲ್ಲಿ ಸಾರಾ ಅಲಿ ಖಾನ್​ ಮತ್ತು ಕಾರ್ತಿಕ್​ ಆರ್ಯನ್​ ಅವರು ಜೋಡಿಯಾಗಿ ನಟಿಸಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರು ಡೇಟಿಂಗ್​ ಮಾಡುತ್ತಿದ್ದರು ಎಂಬ ಮಾತಿದೆ. ಆದರೆ ಆ ಬಳಿಕ ಅವರಿಬ್ಬರು ಬ್ರೇಕಪ್​ ಮಾಡಿಕೊಂಡರು. ಈಗ ಅವರು ಮತ್ತೆ ಜೋಡಿಯಾಗಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದನ್ನೂ ಓದಿ: Kartik Aaryan: 100 ಕೋಟಿ ರೂಪಾಯಿ ಗಳಿಸಿದ ‘ಸತ್ಯಪ್ರೇಮ್​ ಕಿ ಕಥಾ’: ಕಿಯಾರಾ ಅಡ್ವಾಣಿ, ಕಾರ್ತಿಕ್​ ಆರ್ಯನ್​ಗೆ ಮತ್ತೊಂದು ಗೆಲುವು

ಹಾರರ್​ ಕಥಾಹಂದರದ ‘ಭೂಲ್​ ಭುಲಯ್ಯ 3’ ಸಿನಿಮಾಗೆ ಈಗಾಗಲೇ ಸ್ಕ್ರಿಪ್ಟ್​ ಕೆಲಸಗಳು ಪೂರ್ಣಗೊಂಡಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2024ರ ಫೆಬ್ರವರಿಯಲ್ಲಿ ಶೂಟಿಂಗ್​ ಆರಂಭ ಆಗಲಿದೆ. 2024ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಿನಿಮಾವನ್ನು ತೆರೆಕಾಣಿಸಬೇಕು ಎಂದು ನಿರ್ಮಾಪಕರು ಅಂದುಕೊಂಡಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಇದನ್ನೂ ಓದಿ: ಸೀರೆಯಲ್ಲೂ, ಮಾಡರ್ನ್​ ಡ್ರೆಸ್​ನಲ್ಲೂ ನಟಿ ಸಾರಾ ಅಲಿ ಖಾನ್​ ಸೂಪರ್​

‘ಭೂಲ್​ ಭುಲಯ್ಯ 3’ ಸಿನಿಮಾಗೆ ಭೂಷಣ್​​ ಕುಮಾರ್​ ಬಂಡವಾಳ ಹೂಡಲಿದ್ದಾರೆ. ಅನೀಸ್​ ಬಾಜ್ಮಿ ಅವರು ನಿರ್ದೇಶನ ಮಾಡಲಿದ್ದಾರೆ. ಮತ್ತೊಮ್ಮೆ ಜೋಡಿಯಾಗಿ ನಟಿಸಲು ಕಾರ್ತಿಕ್ ಆರ್ಯನ್​ ಮತ್ತು ಸಾರಾ ಅಲಿ ಖಾನ್​ ಅವರು ಉತ್ಸುಕರಾಗಿದ್ದಾರೆ. ಬರೋಬ್ಬರಿ 3 ತಿಂಗಳ ಕಾಲ ಈ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.