ಬಾಲ್ಯದ ಗೆಳತಿ ನತಾಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್​ ಧವನ್

ವರುಣ್​ ಧವನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಎಲ್ಲರೂ ನವ ದಂಪತಿಗೆ ಶುಭಾಶಯ ಕೋರಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದೆ.

ಬಾಲ್ಯದ ಗೆಳತಿ ನತಾಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್​ ಧವನ್
ವರುಣ್​ ಧವನ್-ನತಾಶಾ ಮದುವೆ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 25, 2021 | 3:50 PM

ಬಾಲಿವುಡ್​ ನಟ ವರುಣ್​ ಧವನ್​ ಹಾಗೂ ಅವರ ಬಹುಕಾಲದ ಗೆಳತಿ ನತಾಶಾ ದಲಾಲ್​ ವಿವಾಹ ಅದ್ದೂರಿಯಾಗಿ ನೆರವೇರಿದೆ. ಹಿಂದೂ ಸಂಪ್ರದಾಯದಂತೆ ಮದುವೆ ನಡೆದಿದೆ. ಮುಂಬೈನ ಐಷಾರಾಮಿ ದಿ ಮ್ಯಾನ್ಶನ್ ಹೋಟೆಲ್​ನಲ್ಲಿ ಮದುವೆ ಕಾರ್ಯಕ್ರಮಗಳು ನಡೆದವು. ಮದುವೆಯಲ್ಲಿ ಆಪ್ತರಿಗಷ್ಟೇ ಆಮಂತ್ರಣ ನೀಡಲಾಗಿತ್ತು.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಜೋಡಿ ಮೇ ತಿಂಗಳಲ್ಲೇ ಹಸೆಮಣೆ ಏರಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಮದುವೆ ಮುಂದೂಡಲಾಗಿತ್ತು. ಈಗ ಕೊರೊನಾ ಪ್ರಕರಣ ನಿಧಾನವಾಗಿ ಕಡಿಮೆ ಆಗುತ್ತಿದೆ. ಹೀಗಾಗಿ, ಆಪ್ತರ ಸಮ್ಮುಖದಲ್ಲಿ ಇವರು ವಿವಾಹವಾಗಿದ್ದಾರೆ.

ವರುಣ್​-ನತಾಶಾ ಅವರದ್ದು ಬಾಲ್ಯದ ಪ್ರೇಮ. ಶಾಲಾ ದಿನಗಳಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ, ಇಬ್ಬರೂ ಪ್ರೇಮದ ವಿಚಾರವನ್ನು ಗುಟ್ಟಾಗಿಟ್ಟಿದ್ದರು. ನತಾಶಾ ವೃತ್ತಿಯಲ್ಲಿ ಫ್ಯಾಶನ್​ ಡಿಸೈನರ್​. ಅವರು ತಮ್ಮ ಉಡುಗೆ ಡಿಸೈನಿಂಗ್​ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

View this post on Instagram

A post shared by VarunDhawan (@varundvn)

ವರುಣ್​ ಧವನ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಅಗಿದೆ. ಎಲ್ಲರೂ ನವ ದಂಪತಿಗೆ ಶುಭಾಶಯ ಕೋರಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಲಿದ್ದು, ಸೆಲೆಬ್ರಿಟಿಗಳಿಗೆ ಆಮಂತ್ರಣ ನೀಡಲಾಗಿದೆ.

ತಮನ್ನಾ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ ಲವ್ ಮಾಕ್ಟೇಲ್ ಜೋಡಿ