Kangana Ranaut: ಹೃತಿಕ್​ ರೋಷನ್​ಗೆ ನಟನೆ ಬರಲ್ಲ ಎಂದು ನೇರವಾಗಿ ಹೇಳಿದ ಕಂಗನಾ​; ತಿರುಗೇಟು ನೀಡಿದ ಫ್ಯಾನ್ಸ್​

Hrithik Roshan | Kangana Ranaut Twitter: ಟ್ವಿಟರ್​ನಲ್ಲಿ ಅಭಿಮಾನಿಗಳ ಜೊತೆ ಕಂಗನಾ ರಣಾವತ್​ ಅವರು ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಹೃತಿಕ್​ ರೋಷನ್​ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

Kangana Ranaut: ಹೃತಿಕ್​ ರೋಷನ್​ಗೆ ನಟನೆ ಬರಲ್ಲ ಎಂದು ನೇರವಾಗಿ ಹೇಳಿದ ಕಂಗನಾ​; ತಿರುಗೇಟು ನೀಡಿದ ಫ್ಯಾನ್ಸ್​
ಕಂಗನಾ ರಣಾವತ್, ಹೃತಿಕ್ ರೋಷನ್

Updated on: Feb 20, 2023 | 5:05 PM

ನಟ ಹೃತಿಕ್​ ರೋಷನ್​ ಮತ್ತು ನಟಿ ಕಂಗನಾ ರಣಾವತ್​ (Kangana Ranaut) ನಡುವೆ ಬಹಳ ದಿನಗಳ ಕಾಲ ಕಿತ್ತಾಟ ನಡೆದಿತ್ತು. ಇಬ್ಬರೂ ಪರಸ್ಪರ ಡೇಟಿಂಗ್​ ಮಾಡುತ್ತಿದ್ದರು ಎಂಬ ಮಾತಿದೆ. ಆದರೆ ಬಳಿಕ ಕಿರಿಕ್​ ಶುರುವಾಯಿತು. ಅದೆಲ್ಲ ಶಾಂತವಾಗಿ ಬಹಳ ದಿನಗಳೇ ಕಳೆದಿವೆ. ಆದರೆ ಕಂಗನಾ ರಣಾವತ್​ ಮಾತ್ರ ಸುಮ್ಮನಾಗಿಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಹೃತಿಕ್​ ರೋಷನ್​ (Hrithik Roshan) ಅವರನ್ನು ಕೆಣಕುವ ರೀತಿಯಲ್ಲಿ ಕಂಗನಾ ರಣಾವತ್​ ಪೋಸ್ಟ್​ ಮಾಡಿದ್ದಾರೆ. ‘ಹೃತಿಕ್​ ರೋಷನ್​ಗೆ ನಟನೆಯ ಬರುವುದಿಲ್ಲ’ ಎಂಬರ್ಥದಲ್ಲಿ ಅವರು ಟ್ವೀಟ್​ (Kangana Ranaut Tweet) ಮಾಡಿದ್ದಾರೆ. ಇದು ಹೃತಿಕ್​ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ಹಾಗಾಗಿ ಕಂಗನಾಗೆ ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ.

ಟ್ವಿಟರ್​ನಲ್ಲಿ ಅಭಿಮಾನಿಗಳ ಜೊತೆ ಕಂಗನಾ ರಣಾವತ್​ ಅವರು ಪ್ರಶ್ನೋತ್ತರ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಹೃತಿಕ್​ ರೋಷನ್​ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ‘ಹೃತಿಕ್​ ರೋಷನ್​ ಮತ್ತು ದಿಲ್ಜಿತ್​ ದೋಸಾಂಜ್​ ಇವರಿಬ್ಬರಲ್ಲಿ ನಿಮ್ಮ ನೆಚ್ಚಿನ ನಟ ಯಾರು’ ಎಂದು ಕೇಳಿದ ಪ್ರಶ್ನೆಗೆ ಕಂಗನಾ ಅವರು ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ. ‘ಇವರಲ್ಲಿ ಒಬ್ಬರು ಆ್ಯಕ್ಷನ್​ ಮಾಡುತ್ತಾರೆ. ಮತ್ತೊಬ್ಬರು ವಿಡಿಯೋ ಸಾಂಗ್​ ಮಾಡುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರು ನಟಿಸುವುದನ್ನು ನಾನೆಂದೂ ನೋಡಿಲ್ಲ. ನೋಡಿದಾಗ ಹೇಳುತ್ತೇನೆ. ಅಂಥದ್ದೇನಾದರೂ ಆದರೆ ನನ್ನ ಗಮನಕ್ಕೆ ತನ್ನಿ’ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಹೃತಿಕ್​ ರೋಷನ್​ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬ ಕೌತುಕ ಮೂಡಿದೆ.

ಇದನ್ನೂ ಓದಿ
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ಇದನ್ನೂ ಓದಿ: Kangana Ranaut: ಕಂಗನಾ ರಣಾವತ್​ ವಾಟ್ಸಪ್​ ಮೆಸೇಜ್​ ಲೀಕ್​; ಸ್ಟಾರ್​ ದಂಪತಿ ಮೇಲೆ ಅನುಮಾನ

ಬಾಲಿವುಡ್​ನಲ್ಲಿ ಅನೇಕರನ್ನು ಕಂಗನಾ ರಣಾವತ್​ ಅವರು ಎದುರು ಹಾಕಿಕೊಂಡಿದ್ದಾರೆ. ಅದರಲ್ಲಿ ಹೃತಿಕ್​ ರೋಷನ್​ ಕೂಡ ಒಬ್ಬರು. ಟೀಕಿಸುವ ಭರದಲ್ಲಿ ಅವರಿಗೆ ನಟನೆಯೇ ಬರುವುದಿಲ್ಲ ಎಂದು ಕಂಗನಾ ಹೇಳಿದ್ದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ. ‘ಹಾಗಾದರೆ ಸೂಪರ್​ 30, ಕೋಯಿ ಮಿಲ್​ ಗಯಾ, ಗುಜಾರಿಶ್​ ಚಿತ್ರಗಳಲ್ಲಿ ಇರುವುದು ಹೃತಿಕ್​ ನಟನೆ ಅಲ್ಲವೇ?’ ಎಂದು ಫ್ಯಾನ್ಸ್​ ಮರುಪ್ರಶ್ನೆ ಕೇಳಿದ್ದಾರೆ.

‘ಚಂದ್ರಮುಖಿ 2’ ಸಿನಿಮಾದ ಶೂಟಿಂಗ್​ನಲ್ಲಿ ಕಂಗನಾ ರಣಾವತ್​ ಬ್ಯುಸಿ ಆಗಿದ್ದಾರೆ. ಚಿತ್ರೀಕರಣದ ಗ್ಯಾಪ್​ನಲ್ಲಿ ಅವರು ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ. ನೆಟ್ಟಿಗರು ಕೇಳಿದ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಎಮರ್ಜೆನ್ಸಿ’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಆ ಚಿತ್ರಕ್ಕೆ ಶೂಟಿಂಗ್​ ಮುಕ್ತಾಯ ಆಗಿದೆ. ಅದರಲ್ಲಿ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us