ಸೆಲೆಬ್ರಿಟಿಗಳು ಏನೇ ಮಾಡಿದರೂ ಅದರಲ್ಲಿ ತಪ್ಪು ಕಂಡು ಹಿಡಿಯಲು ಕೆಲವು ಮಂದಿ ಕಾದು ಕುಳಿತಿರುತ್ತಾರೆ. ನಟಿ ತಾಪ್ಸಿ ಪನ್ನು (Taapsee Pannu) ಅವರು ಧರಿಸಿದ್ದ ಬಟ್ಟೆ ಮತ್ತು ಆಭರಣ ಈಗ ವಿವಾದಕ್ಕೆ ಕಾರಣ ಆಗಿದೆ. ಹಿಂದೂಗಳ (Hindu) ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಅವರ ವಿರುದ್ಧ ದೂರು ನೀಡಲಾಗಿದೆ. ತಮ್ಮ ನೇರ ನಡೆ-ನುಡಿಯ ವ್ಯಕ್ತಿತ್ವದ ಕಾರಣದಿಂದ ನಟಿ ತಾಪ್ಸಿ ಪನ್ನು ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಾರೆ. ಅವರಿಗೆ ಕಾಂಟ್ರವರ್ಸಿ (Controversy) ಹೊಸದೇನೂ ಅಲ್ಲ. ಈಗ ಬಟ್ಟೆ ವಿಚಾರಕ್ಕೆ ಅವರನ್ನು ಕೆಲವರು ವಿರೋಧಿಸಿದ್ದಾರೆ. ಅಷ್ಟಕ್ಕೂ ತಾಪ್ಸಿ ಧರಿಸಿದ ಬಟ್ಟೆಯಿಂದ ಕಿರಿಕ್ ಆಗಿದ್ದು ಯಾಕೆ? ಇಲ್ಲಿದೆ ವಿವರ..
ಮೈ ಕಾಣುವಂತಹ ಬಟ್ಟೆ ಧರಿಸಿ, ಅದರ ಜೊತೆಗೆ ಲಕ್ಷ್ಮಿ ದೇವಿಯ ಚಿತ್ರ ಇರುವಂತಹ ಆಭರಣ ಧರಿಸಿದ್ದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಗೌರ್ ಅವರು ದೂರು ನೀಡಿದ್ದಾರೆ. ಸನಾತನ ಧರ್ಮಕ್ಕೆ ಅವಮಾನ ಮಾಡುವ ಸಲುವಾಗಿ ಮಾಡಿದ ಉದ್ದೇಶ ಪೂರ್ವಕ ಕೃತ್ಯ ಇದು ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
Taapsee Pannu: ಎಲ್ಲರ ಎದುರು ತಾಪ್ಸಿ ಪನ್ನು ಕಿರಿಕ್; ನಟಿಯ ಕೋಪಕ್ಕೆ ಕಾರಣವಾಯ್ತು ಫೋಟೋಗ್ರಾಫರ್ ವರ್ತನೆ
ಮಾರ್ಚ್ 12ರಂದು ಮುಂಬೈನಲ್ಲಿ ಲ್ಯಾಕ್ಮೆ ಫ್ಯಾಷನ್ ವೀಕ್ ನಡೆಯಿತು. ಅದರಲ್ಲಿ ತಾಪ್ಸಿ ಪನ್ನು ಅವರು ರ‍್ಯಾಂಪ್ ವಾಕ್ ಮಾಡಿದರು. ಈ ವೇಳೆ ಅವರು ಧರಿಸಿದ್ದ ಗೌನ್ ಗಮನ ಸೆಳೆಯಿತು. ಸಖತ್ ಗ್ಲಾಮರಸ್ ಆಗಿದ್ದ ಬಟ್ಟೆ ಧರಿಸಿ ಅವರು ಕಾಣಿಸಿಕೊಂಡರು. ಆ ಫೋಟೋಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ಆದರೆ ಇಷ್ಟೆಲ್ಲ ಮೈ ಕಾಣುವ ರೀತಿಯಲ್ಲಿ ಬಟ್ಟೆ ಧರಿಸಿ, ಅದರ ಜೊತೆ ಲಕ್ಷ್ಮಿ ದೇವಿಯ ಚಿತ್ರ ಇರುವ ಆಭರಣ ಧರಿಸಿದ್ದು ಸರಿಯಲ್ಲ ಎಂದು ಏಕಲವ್ಯ ಗೌರ್ ಟೀಕೆ ಮಾಡಿದ್ದಾರೆ.
ಹಾಟ್ ಆಗಿರುವ ಫೋಟೋಗಳನ್ನು ತಾಪ್ಸಿ ಪನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ. ‘ತಾಪ್ಸಿ ಪನ್ನುಗೆ ನಾಚಿಕೆ ಆಗಬೇಕು. ಓರ್ವ ಸೆಲೆಬ್ರಿಟಿಯಾಗಿ ಧಾರ್ಮಿಕ ಚಿಹ್ನೆಗಳಿಗೆ ಯಾವ ರೀತಿ ಗೌರವ ನೀಡಬೇಕು ಎಂಬ ಜ್ಞಾನ ಇರಬೇಕು’ ಎಂದು ಕೆಲವರು ಪಾಠ ಮಾಡಿದ್ದಾರೆ. 6 ಲಕ್ಷಕ್ಕೂ ಅಧಿಕ ಜನರು ಈ ಫೋಟೋಗಳಿಗೆ ಲೈಕ್ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಾಪ್ಸಿ ಪನ್ನು ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. 2 ಕೋಟಿಗೂ ಅಧಿಕ ಜನರು ಅವರನ್ನು ಫಾಲೋ ಮಾಡುತ್ತಿದ್ದಾರೆ. ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.