ಜಾಕ್ವೆಲಿನ್ ಫರ್ನಾಂಡಿಸ್​​​ನ ಈಗಲೂ ಪ್ರೀತಿಸುತ್ತಿದ್ದಾನೆ ಸುಕೇಶ್​? ನಟಿಗೆ ವ್ಯಾಲೆಂಟೈನ್ಸ್​ ವಿಶ್ ಮಾಡಿದ ಆರೋಪಿ

ಜಾಕ್ವೆಲಿನ್ ಹಾಗೂ ಸುಕೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ. ಇದರಿಂದ ಜಾಕ್ವೆಲಿನ್​ಗೆ ಮುಜುಗರ ಆಗಿತ್ತು.

ಜಾಕ್ವೆಲಿನ್ ಫರ್ನಾಂಡಿಸ್​​​ನ ಈಗಲೂ ಪ್ರೀತಿಸುತ್ತಿದ್ದಾನೆ ಸುಕೇಶ್​? ನಟಿಗೆ ವ್ಯಾಲೆಂಟೈನ್ಸ್​ ವಿಶ್ ಮಾಡಿದ ಆರೋಪಿ
ಸುಕೇಶ್​-ಜಾಕ್ವೆಲಿನ್

Updated on: Feb 15, 2023 | 12:01 PM

ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರು ಸದ್ಯ ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್​ ಜತೆ ಸಬಂಧ​ ಇಟ್ಟುಕೊಂಡ ವಿಚಾರಕ್ಕೆ ಅವರು ತನಿಖೆ ಎದುರಿಸುತ್ತಿದ್ದಾರೆ. ಈಗ ಜಾಕ್ವೆಲಿನ್​​ಗೆ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಪ್ರೇಮಿಗಳ ದಿನದ ವಿಶ್ ತಿಳಿಸಿದ್ದಾನೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.

ಜಾಕ್ವೆಲಿನ್ ಹಾಗೂ ಸುಕೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಲವು ಫೋಟೋಗಳನ್ನು ಸುಕೇಶ್ ಲೀಕ್ ಮಾಡಿದ್ದ. ಇದರಿಂದ ಜಾಕ್ವೆಲಿನ್​ಗೆ ಮುಜುಗರ ಆಗಿತ್ತು. ಈ ಫೋಟೋದಿಂದ ನಟಿ​ಗೆ ಸಂಕಷ್ಟಕೂಡ ಹೆಚ್ಚಿತ್ತು. ಅವರು ವಿವಿಧ ರೀತಿಯಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಸುಕೇಶ್​ನಿಂದ ಹಲವು ದುಬಾರಿ ಗಿಫ್ಟ್ ಪಡೆದಿರುವುದರಿಂದ ಜಾಕ್ವೆಲಿನ್ ಅವರು ಜಾರಿ ನಿರ್ದೇಶನಾಲಯದಿಂದ ಎದುರಾಗುತ್ತಿರುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ. ಈಗ ಜಾಕ್ವೆಲಿನ್​ಗೆ ಸುಕೇಶ್ ಪ್ರೇಮ ಸಂದೇಶ ಕಳುಹಿಸಿದ್ದಾನೆ.

ಇದನ್ನೂ ಓದಿ
ಮನಶಾಂತಿ ಹುಡುಕಿ ವೈಷ್ಣೋ ದೇವಿಗೆ ತೆರಳಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್
Nora Fatehi: ನಟಿ ಜಾಕ್ವೆಲಿನ್​ ಫರ್ನಾಂಡಿಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಟಿ ನೋರಾ ಫತೇಹಿ  
ಸುಕೇಶ್ ಚಂದ್ರಶೇಖರ್ ಬಹು ಕೋಟಿ​ ವಂಚನೆ ಪ್ರಕರಣ: ಜಾಕ್ವೆಲಿನ್ ಬಳಿಕ ನೋರಾಗೆ ಹೆಚ್ಚಿತು ಸಂಕಷ್ಟ

ಸುಕೇಶ್ ಅವರನ್ನು ಕೋರ್ಟ್​ಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಆತನನ್ನು ಸಿಎನ್​ಎನ್​ನ್ಯೂಸ್​18 ವರದಿಗಾರ ಪ್ರಶ್ನೆ ಮಾಡಿದ್ದಾರೆ. ‘ನನ್ನನ್ನು ಸುಕೇಶ್ ಬಳಸಿಕೊಂಡ ಎಂಬುದು ಜಾಕ್ವೆಲಿನ್ ಆರೋಪ. ಇದಕ್ಕೆ ಏನು ಹೇಳ್ತೀರಾ?’ ಎಂಬುದಾಗಿ ಸುಕೇಶ್​ಗೆ ಕೇಳಲಾಯಿತು. ‘ನಾನು ಈ ಬಗ್ಗೆ ಏನನ್ನೂ ಹೇಳಲ್ಲ. ಹೀಗೆ ಹೇಳಲು ಜಾಕ್ವೆಲಿನ್​ಗೆ ಅವರದ್ದೇ ಆದ ಕಾರಣಗಳಿವೆ’ ಎಂದಿದ್ದಾರೆ ಸುಕೇಶ್.

‘ನೀವು ಅವರನ್ನು ಈಗಲೂ ಪ್ರೀತಿ ಮಾಡುತ್ತೀರಾ’ ಎಂದೂ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನನ್ನ ಕಡೆಯಿಂದ ಅವರಿಗೆ ವ್ಯಾಲೆಂಟೈನ್ಸ್ ದಿನದ ಶುಭಾಶಯ ತಿಳಿಸಿ’ ಎಂದಿದ್ದಾರೆ. ನೋರಾ ಫತೇಹಿ ಬಗ್ಗೆಯೂ ಸುಕೇಶ್​ಗೆ ಪ್ರಶ್ನೆ ಮಾಡಲಾಯಿತು. ‘ಹಣಕ್ಕಾಗಿ ಸಂಬಂಧ ಬೆಳೆಸುವವರ ಬಗ್ಗೆ ಮಾತನಾಡಲ್ಲ’ ಎಂದಿದ್ದಾರೆ ಸುಕೇಶ್.

ಇತ್ತೀಚೆಗೆ ಕೋರ್ಟ್​ಗೆ ಮಾಹಿತಿ ನೀಡಿದ್ದ ಜಾಕ್ವೆಲಿನ್​, ‘ನಾನು ನಿಮ್ಮ ದೊಡ್ಡ ಫ್ಯಾನ್ ಎಂದು ಚಂದ್ರಶೇಖರ್ ಹೇಳಿದ್ದ. ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದ. ಸನ್​ ಟಿವಿ ಮಾಲೀಕ ಆಗಿರುವುದರಿಂದ ಹಲವು ಪ್ರಾಜೆಕ್ಟ್​​ಗಳು ಲೈನಪ್​ ಆಗಿವೆ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆತ ಹೇಳಿದ್ದ. ಸುಕೇಶ್ ನನ್ನ ದಾರಿ ತಪ್ಪಿಸಿದ. ನನ್ನ ಜೀವನ ಹಾಗೂ ವೃತ್ತಿಜೀವನವನ್ನು ಆತ ಹಾಳು ಮಾಡಿದ’ ಎಂದು ಜಾಕ್ವೆಲಿನ್ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:01 pm, Wed, 15 February 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us