ವಿಮಾನದಲ್ಲಿ ಜನಸಾಮಾನ್ಯರ ಜೊತೆ ಪ್ರಯಾಣಿಸಿದ ದೀಪಿಕಾ ಪಡುಕೋಣೆ; ಗುರುತು ತಿಳಿಯದಂತೆ ಮಾಡಲು ನಟಿ ಮಾಡಿದ್ದೇನು?

Deepika Padukone: ‘ಪಠಾಣ್​’ ಚಿತ್ರದಿಂದ ದೀಪಿಕಾ ಗೆದ್ದು ಬೀಗಿದ್ದಾರೆ. ಈ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಿದ್ದರೂ ಅವರು ಜನಸಾಮಾನ್ಯರ ಜತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ವಿಮಾನದಲ್ಲಿ ಜನಸಾಮಾನ್ಯರ ಜೊತೆ ಪ್ರಯಾಣಿಸಿದ ದೀಪಿಕಾ ಪಡುಕೋಣೆ; ಗುರುತು ತಿಳಿಯದಂತೆ ಮಾಡಲು ನಟಿ ಮಾಡಿದ್ದೇನು?
ದೀಪಿಕಾ ಪಡುಕೋಣೆ

Updated on: Feb 16, 2023 | 12:30 PM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ‘ಪಠಾಣ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ಸಾಲು ಸಾಲು ಸೋಲು ಕಂಡಿದ್ದ ಅವರು ಈಗ ‘ಪಠಾಣ್’ ಚಿತ್ರದಿಂದ ಗೆಲುವಿನ ನಗೆ ಬೀರಿದ್ದಾರೆ. ಈ ಮಧ್ಯೆ ದೀಪಿಕಾ ಪಡುಕೋಣೆ ಅವರು ವಿಮಾನದಲ್ಲಿ ಬಿಸ್ನೆಸ್​ ಕ್ಲಾಸ್​ನಲ್ಲಿ ಪ್ರಯಾಣಿಸುವ ಬದಲು ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ದೀಪಿಕಾ ಹ್ಯಾಟ್ ಹಾಗೂ ಕಪ್ಪು ಗ್ಲಾಸ್ ಹಾಕಿದ್ದರು. ಆದರೂ ಫ್ಯಾನ್ಸ್ ಅವರ ಗುರುತು ಹಿಡಿದಿದ್ದಾರೆ.

ದೀಪಿಕಾ ಪಡುಕೋಣೆ ಅವರು ಬಾಲಿವುಡ್​ನ ಬಹುಬೇಡಿಕೆಯ ನಟಿ ಆಗಿದ್ದಾರೆ. 2018ರಲ್ಲಿ ತೆರೆಗೆ ಬಂದ ‘ಪದ್ಮಾವತ್’ ಚಿತ್ರವೇ ಕೊನೆ. ಅದಾದ ಬಳಿಕ ಅವರಿಗೆ ಸಾಲು ಸಾಲು ಸೋಲುಗಳು ಉಂಟಾದವು. ಜೆಎನ್​ಯು ಪ್ರತಿಭಟನೆಗೆ ಅವರು ಬೆಂಬಲ ನೀಡಿದ್ದರಿಂದ ಕೆಲವರ ವಿರೋಧ ಕಟ್ಟಿಕೊಂಡರು. ಈಗ ‘ಪಠಾಣ್​’ ಚಿತ್ರದಿಂದ ದೀಪಿಕಾ ಗೆದ್ದು ಬೀಗಿದ್ದಾರೆ. ಅವರು ಈ ಚಿತ್ರದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಿಂದ ಅವರ ಜನಪ್ರಿಯತೆ ಹೆಚ್ಚಿದೆ. ಹೀಗಿದ್ದರೂ ಅವರು ಜನಸಾಮಾನ್ಯರ ಜತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ.

ದೀಪಿಕಾ ಅವರು ಕಿತ್ತಳೆ ಬಣ್ಣದ ಡ್ರೆಸ್ ಹಾಕಿದ್ದರು. ತಲೆಗೆ ಕ್ಯಾಪ್ ಹಾಕಿ, ಗ್ಲಾಸ್ ಹಾಕಿದ್ದರಿಂದ ಅವರನ್ನು ಗುರುತಿಸೋದು ಕಷ್ಟ ಆಗಿದೆ. ಆದಾಗ್ಯೂ ಕೆಲವರು ದೀಪಿಕಾ ಅವರನ್ನು ಪತ್ತೆ ಹಚ್ಚಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಸದ್ಯ ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ದೀಪಿಕಾ ಎಷ್ಟು ಸಿಂಪಲ್’ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಇದನ್ನೂ ಓದಿ: Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು

ದೀಪಿಕಾ ಪಡುಕೋಣೆ ‘ಜವಾನ್’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ. ಇದು ಶಾರುಖ್ ಖಾನ್ ನಟನೆಯ ಸಿನಿಮಾ. ಈ ಚಿತ್ರಕ್ಕೆ ತಮಿಳಿನ ಅಟ್ಲಿ ನಿರ್ದೇಶನ ಮಾಡುತ್ತಿದ್ದಾರೆ. ‘ಫೈಟರ್​’, ‘ಪ್ರಾಜೆಕ್ಟ್​ ಕೆ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ 2024ರಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 12:30 pm, Thu, 16 February 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us