
‘ಧುರಂಧರ್ 2’ ಸಿನಿಮಾನ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ (Aditya Dhar) ನಿರ್ದೇಶನದ ಈ ಚಿತ್ರದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಆದಿತ್ಯಧಾರ್ ಅವರು ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಇದು ಸಿನಿಮಾದಲ್ಲಿ ಸ್ಪಷ್ಟವಾಗಿದೆ. ಈ ಕಾರಣಕ್ಕೆ ಎಲ್ಲರೂ ಆದಿತ್ಯಧಾರ್ ಅವರನ್ನು ಹೊಗಳುತ್ತಿದ್ದಾರೆ. ಆದರೆ, ಈಗ ಅವರು ಮಾಡಿದ ತಪ್ಪೊಂದು ಎದ್ದು ಕಾಣಿಸಿದೆ.
ಆದಿತ್ಯಧಾರ್ ಅವರು ಸಣ್ಣ ಸಣ್ಣ ವಿಷಯಗಳನ್ನೂ ಗಮನ ಇಟ್ಟು ಸಿನಿಮಾ ಮಾಡುತ್ತಾರೆ. ಇದೇ ಕಾರಣಕ್ಕೆ ‘ಪೀಕ್ ಡೀಟೇಲಿಂಗ್ ಆಫ್ ಆದಿತ್ಯಧಾರ್’ ಎಂಬು ಚರ್ಚೆ ಆಗುತ್ತಿದೆ. ಅಂದರೆ ಆದಿತ್ಯ ಧಾರ್ ಅವರು ಸಣ್ಣ ಸಣ್ಣ ವಿಷಯವನ್ನೂ ಹೆಚ್ಚು ಗಮನದಲ್ಲಿಟ್ಟು ಸಿನಿಮಾ ಮಾಡುತ್ತಾರೆ ಎಂಬುದು ಇದರ ಅರ್ಥ ಆಗಿತ್ತು. ಆದಾಗ್ಯೂ ‘ಧುರಂಧರ್ 2’ ಚಿತ್ರದಲ್ಲಿ ಒಂದು ದೊಡ್ಡ ಎಡವಟ್ಟು ನಡೆದು ಹೋಗಿದೆ. ಈ ವಿಡಿಯೋನ ಸಿನಿಮಾ ನೋಡಿದವರು ವೈರಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಕ್ರಿಕೆಟರ್ ಆಗಬೇಕಿದ್ದ ‘ಧುರಂಧರ್’ ನಿರ್ದೇಶಕ ಆದಿತ್ಯ ಸಿನಿಮಾ ರಂಗಕ್ಕೆ ಬಂದಿದ್ದು ಹೇಗೆ?
ಹಮ್ಜಾ ಹಾಗೂ ಅವನ ಗೆಳೆಯನ ಮಧ್ಯೆ ಕಿತ್ತಾಟ ನಡೆಯೋ ದೃಶ್ಯ ಇದೆ. ಈ ದೃಶ್ಯ ಪ್ರಸಾರ ಕಾಣುವಾಗ ಕನ್ನಡಿಯಲ್ಲಿ ಕ್ಯಾಮೆರಾಮೆನ್ ಕೂಡ ಕಾಣುತ್ತಾರೆ. ಇದನ್ನು ಆದಿತ್ಯ ಧಾರ್ ನೋಡದೇ ಹೇಗೆ ಮಿಸ್ ಮಾಡಿದರು ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಇನ್ನೂ ಕೆಲವರು ಆದಿತ್ಯ ಅವರನ್ನು ಬೆಂಬಲಿಸಿದ್ದಾರೆ.
‘ಇದು ಆದಿತ್ಯ ಧಾರ್ ಅವರ ಪೀಕ್ ಡೀಟೇಲಿಂಗ್. ಅವರ ತಂಡ ಬಹುಶಃ ಆ್ಯಕ್ಷನ್ ಮೇಲೆ ಗಮನ ಹರಿಸಿತ್ತು ಎನ್ನಲಾಗಿದೆ’ ಎಂದು ಅವರು ಹೇಳಿದ್ದಾರೆ. ಇನ್ನೂ ಕೆಲವರು ಕ್ರಿಸ್ಟೋಫರ್ ನೋಲನ್ ಕೂಡ ಇದೇ ತಪ್ಪು ಮಾಡಿದ್ದರು ಎಂದಿದ್ದರು. ‘ಆದಿತ್ಯ ಧಾರ ಕೂಡ ಮನುಷ್ಯ. ಅವರಿಂದಲೂ ತಪ್ಪಾಗುತ್ತದೆ’ ಎಂದು ಆದಿತ್ಯ ಧಾರ್ ಪರ ಬ್ಯಾಟ್ ಬೀಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:07 am, Mon, 23 March 26