ದಾಖಲೆ ಬರೆಯಲು ‘ಧುರಂಧರ್ 2’ ಚಿತ್ರಕ್ಕೆ ಬೇಕಿರೋದು ಎಷ್ಟು ಕೋಟಿ ರೂಪಾಯಿ?

ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ನಾಲ್ಕು ವಾರಗಳನ್ನು ಪೂರೈಸಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಭಾರತದಲ್ಲಿ ₹1,099 ಕೋಟಿ ನಿವ್ವಳ ಗಳಿಸಿರುವ ಈ ಚಿತ್ರ, ವಿಶ್ವಾದ್ಯಂತ ₹1,733 ಕೋಟಿ ಬಾಚಿದೆ. 'ಪುಷ್ಪ 2' ಚಿತ್ರದ ದಾಖಲೆ ಮುರಿಯಲು ಇನ್ನು ಕೇವಲ ₹135 ಕೋಟಿ ಬೇಕಿದೆ. ಚಿತ್ರತಂಡ ಸದ್ಯಕ್ಕೆ ಸಿನಿಮಾನ ಒಟಿಟಿಗೆ ತರುವ ಆಲೋಚನೆ ಹೊಂದಿಲ್ಲ.

ದಾಖಲೆ ಬರೆಯಲು ‘ಧುರಂಧರ್ 2’ ಚಿತ್ರಕ್ಕೆ ಬೇಕಿರೋದು ಎಷ್ಟು ಕೋಟಿ ರೂಪಾಯಿ?
ಧುರಂಧರ್ 2

Updated on: Apr 16, 2026 | 11:10 AM

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಾಲ್ಕು ವಾರಗಳನ್ನು ಪೂರ್ಣಗೊಳಿಸಿದೆ. ಈ ಚಿತ್ರ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ. ಆದಾಗ್ಯೂ ಸಿನಿಮಾದ ಕಲೆಕ್ಷನ್ ಜೋರಾಗಿಯೇ ಇದೆ. ಭಾರತದಲ್ಲಿ ದಾಖಲೆಯ ಗಳಿಕೆ ಮಾಡಲು ಸಿನಿಮಾಗೆ ಬೇಕಿರುವುದು ಇನ್ನು ಕೆಲವೇ ಕೋಟಿ ರೂಪಾಯಿ ಮಾತ್ರ.

‘ಧುರಂಧರ್ 2’ ಸಿನಿಮಾ ರಿಲೀಸ್ ಆಗಿದ್ದು ಮಾರ್ಚ್ 19ರಂದು. ಅಂದಿನಿಂದ ಇಂದಿನವರೆಗೂ ಸಿನಿಮಾ ಅಬ್ಬರಿಸುತ್ತಲೇ ಇದೆ. ವಾರಾಂತ್ಯದಲ್ಲಿ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಭಾರತದ ನೆಟ್ ಕಲೆಕ್ಷನ್ 1,099 ರೂಪಾಯಿ ಆಗಿದೆ. ಈ ಚಿತ್ರದ ಭಾರತದ ಗ್ರಾಸ್ ಕಲೆಕ್ಷನ್ 1,316 ರೂಪಾಯಿ ಆಗಿದೆ. ಈ ಚಿತ್ರದ ವಿದೇಶದಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ವಿಶ್ವಾದ್ಯಂತ 1,733 ಕೋಟಿ ರೂಪಾಯಿ ಬಾಚಿಕೊಂಡಿದೆ.

ಭಾರತದ ಗಲ್ಲಾ ಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರವನ್ನು ಬೀಟ್ ಮಾಡಲು ಸಿನಿಮಾಗೆ ಇನ್ನು ಬೇಕಿರೋದು 135 ಕೋಟಿ ರೂಪಾಯಿ ಮಾತ್ರ. ಸಿನಿಮಾ ‘ಪುಷ್ಪ 2’ ದಾಖಲೆಯನ್ನು ಮುರಿಯುತ್ತದೆಯೇ ಎಂಬುದು ಸದ್ಯದ ಪ್ರಶ್ನೆ. ವಿಶ್ವ ಬಾಕ್ಸ್ ಆಫೀಸ್​​ ಕಲೆಕ್ಷನ್ ಅಲ್ಲಿ ‘ಪುಷ್ಪ 2’ ಚಿತ್ರವನ್ನು ‘ಧುರಂಧರ್ 2’ ಸದ್ಯದಲ್ಲೇ ಬೀಟ್ ಮಾಡಲಿದೆ. ಇದಕ್ಕೆ ಬೇಕಿರೋದು ಬೆರಳೆಣಿಕೆ ಕೋಟಿಗಳು ಮಾತ್ರ.

ಇದನ್ನೂ ಓದಿ: ‘ಧುರಂಧರ್ 2’ ಕಲೆಕ್ಷನ್: ‘ಪುಷ್ಪ 2’, ‘ಬಾಹುಬಲಿ 2’ ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬಾಕಿ

‘ಧುರಂಧರ್ 2’ ಸಿನಿಮಾ ಚಿತ್ರವನ್ನು ಸದ್ಯಕ್ಕಂತೂ ಒಟಿಟಿಗೆ ತರುವ ಆಲೋಚನೆ ಇಲ್ಲ ಎಂದು ಹೇಳಲಾಗುತ್ತಾ ಇದೆ. ಇದಕ್ಕೆ ಕಾರಣವೂ ಇದೆ. ಸಾಮಾನ್ಯವಾಗಿ ಸಿನಿಮಾಗಳು 50 ದಿನಕ್ಕೆಲ್ಲ ಒಟಿಟಿಗೆ ಬರುತ್ತವೆ. ಆದರೆ, ‘ಧುರಂಧರ್ 2’ ಬಳಿ ಹೆಚ್ಚಿನ ಶಕ್ತಿ ಇರುವುದರಿಂದ ಸಿನಿಮಾ 2 ತಿಂಗಳು ಥಿಯೇಟರ್​​​ನಲ್ಲಿ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us