ರಣವೀರ್ ನಟನೆಯ ‘ಧುರಂಧರ್ 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ

ಸೋಶಿಯಲ್ ಮೀಡಿಯಾದಲ್ಲಿ 'ಧುರಂಧರ್ 2' Vs 'ಟಾಕ್ಸಿಕ್' ಚರ್ಚೆ ಜೋರಾಗಿದೆ. ಮಾರ್ಚ್ 3ಕ್ಕೆ ಬರಬೇಕಿದ್ದ 'ಧುರಂಧರ್ 2' ಟ್ರೇಲರ್ ಚಂದ್ರ ಗ್ರಹಣದ ಕಾರಣ ಮುಂದೂಡಲ್ಪಟ್ಟಿದೆ. ಗ್ರಹಣವನ್ನು ಶುಭ ಎಂದು ಪರಿಗಣಿಸದ ಕಾರಣ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆ. ಮಾರ್ಚ್ 5 ಅಥವಾ 6ರಂದು ಹೊಸ ಟ್ರೇಲರ್ ದಿನಾಂಕ ನಿರೀಕ್ಷಿಸಲಾಗಿದೆ.

ರಣವೀರ್ ನಟನೆಯ ‘ಧುರಂಧರ್ 2’ ವಿಳಂಬಕ್ಕೆ ಕಾರಣವಾಯ್ತು ಚಂದ್ರ ಗ್ರಹಣ
ಧುರಂಧರ್ 2

Updated on: Mar 03, 2026 | 3:09 PM

ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ‘ಧುರಂಧರ್ 2’ (Dhurandhar 2) Vs ‘ಟಾಕ್ಸಿಕ್’ ಎಂಬ ಚರ್ಚೆ ಕಾಣಿಸುತ್ತದೆ. ಇಂದು (ಮಾರ್ಚ್ 3) ಸಿನಿಮಾ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಆದರೆ, ನಂತರ ಅದನ್ನು ಮುಂದಕ್ಕೆ ಹಾಕಲಾಯಿತು. ಇದಕ್ಕೆ ಕಾರಣ ಆಗಿದ್ದು ಚಂದ್ರ ಗ್ರಹಣ ಎಂದು ವರದಿ ಆಗಿದೆ. ಈ ಬಗ್ಗೆ ಬಾಲಿವುಡ್ ಹಂಗಾಮ ವರದಿ ಮಾಡಿದೆ. ಬಾಲಿವುಡ್​​ನವರೂ ಇದನ್ನು ಬಹುವಾಗಿ ನಂಬುತ್ತಾರೆ ಎಂಬ ವಿಷಯ ಅನೇಕರಿಗೆ ಅಚ್ಚರಿ ತಂದಿದೆ.

ಕೆಲವರ ನಂಬಿಕೆ ಪ್ರಕಾರ ಗ್ರಹಣ ದಿನವನ್ನು ಒಳ್ಳೆಯ ದಿನ ಎಂದು ಪರಿಗಣಿಸಲಾಗುವುದಿಲ್ಲ. ಈ ಕಾರಣದಿಂದ ಅಂದು ಸಾಕಷ್ಟು ಪೂಜೆಗಳನ್ನು ಮಾಡಲಾಗುತ್ತದೆ. ಕೆಲವು ಕಡೆಗಳಲ್ಲಿ ಗ್ರಹಣದ ಸಮಯದಲ್ಲಿ ಆಹಾರ ಸೇವನೆಯನ್ನೂ ಮಾಡೋದಿಲ್ಲ. ಗ್ರಹಣದ ಬಳಿಕ ಸ್ನಾನ ಮಾಡಿ, ಮನೆಯನ್ನು ಶುಚಿಗೊಳಿಸುವವರೂ ಇದ್ದಾರೆ. ಹೀಗಾಗಿ, ಈ ದಿನ ‘ಧುರಂಧರ್ 2’ ಟ್ರೇಲರ್ ರಿಲೀಸ್ ಮಾಡೋದು ಬೇಡ ಎಂಬ ನಿರ್ಧಾರಕ್ಕೆ ಚಿತ್ರತಂಡಕ್ಕೆ ಬಂದಂತೆ ಇದೆ.

ಮಾರ್ಚ್ 3ರಂದು ಟ್ರೇಲರ್ ಲಾಂಚ್ ಮಾಡಬೇಕು ಎಂಬ ಆಲೋಚನೆಯನ್ನು ತಂಡ ಹೊಂದಿದ್ದು ನಿಜವೇ ಆಗಿತ್ತು. ಆದರೆ, ಗ್ರಹಣದ ಸಮಯ ಬೆಳಿಗ್ಗೆ 9.30ರಿಂದ ಆರಂಭ ಆಗಿ ಸಂಜೆ 6.46ರವರೆಗೆ ಇದೆ. ಹೀಗಾಗಿ, ಈ ಆಲೋಚನೆಯನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಾ ಇದೆ. ಆದರೆ, ಈ ಬಗ್ಗೆ ತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ‘ಟಾಕ್ಸಿಕ್’ಗೆ ತಿರುಗೇಟು ಕೊಡಲು ಸರ್​​​ಪ್ರೈಸ್ ಶಾಕ್ ರೆಡಿ ಮಾಡಿದ ‘ಧುರಂಧರ್ 2’

ಸದ್ಯ ಕೇಳಿ ಬರುತ್ತಿರುವ ಹೊಸ ವರದಿ ಪ್ರಕಾರ ಮಾರ್ಚ್ 5 ಅಥವಾ 6ರಂದು ಟ್ರೇಲರ್ ಲಾಂಚ್ ಆಗಲಿದೆಯಂತೆ. ಮುಂಬೈನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅಲ್ಲಿ ಈ ಟ್ರೇಲರ್ ರಿವೀಲ್ ಆಗುವ ಸಾಧ್ಯತೆ ಇದೆ.
ಈಗಾಗಲೇ ‘ಟಾಕ್ಸಿಕ್’ ಸಿನಿಮಾ ಟ್ರೇಲರ್ ಮಾರ್ಚ್ 8ರಂದು ರಿವೀಲ್ ಆಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಅದಕ್ಕೂ ಮೊದಲೇ ‘ಧುರಂಧರ್ 2’ ಟ್ರೇಲರ್ ರಿಲೀಸ್ ಆದರೆ, ಚಿತ್ರಕ್ಕೆ ಹೆಚ್ಚು ಸಹಕಾರಿ ಆಗಬಹುದು. ಒಂದೊಮ್ಮೆ ಎರಡೂ ಟ್ರೇಲರ್​​​ಗಳು ಒಂದೇ ದಿನ ಬಿಡುಗಡೆ ಕಂಡರೆ ಯೂಟ್ಯೂಬ್​​​ನಲ್ಲೂ ಇವು ಕ್ಲ್ಯಾಶ್ ಆದಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us