
‘ಧುರಂಧರ್’ ಸಿನಿಮಾ (Dhurandhar Movie) ಬಿಡುಗಡೆ ಆಗಿ 23 ದಿನಗಳ ಕಳೆದಿವೆ. ಯಶಸ್ವಿಯಾಗಿ 25ನೇ ದಿನಕ್ಕೆ ಈ ಸಿನಿಮಾ ಕಾಲಿಡುತ್ತಿದೆ. ಅಕ್ಷರಶಃ ಈ ಸಿನಿಮಾ 25 ದಿನಗಳ ಹೌಸ್ಫುಲ್ ಪ್ರದರ್ಶನ ಕಂಡಿದೆ. ಅದರ ಪರಿಣಾಮವಾಗಿ ಬಾಕ್ಸ್ ಆಫೀಸ್ನಲ್ಲಿ ಹಣದ ಹೊಳೆ ಹರಿದಿದೆ. ಜನರು ಮುಗಿಬಿದ್ದು ‘ಧುರಂಧರ್’ ಸಿನಿಮಾ ವೀಕ್ಷಿಸಿದ್ದಾರೆ. 23ನೇ ದಿನವಾದ ಶನಿವಾರ (ಡಿಸೆಂಬರ್ 27) ಕೂಡ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್ ಆಗಿದೆ. ರಣವೀರ್ ಸಿಂಗ್ (Ranveer Singh) ಅಭಿನಯದ ಈ ಸಿನಿಮಾಗೆ ಈವರೆಗೂ ಭಾರತದ ಮಾರುಕಟ್ಟೆಯಲ್ಲಿ 668 ಕೋಟಿ ರೂಪಾಯಿ ಕಲೆಕ್ಷನ್ (Dhurandhar Box Office Collection) ಆಗಿದೆ. ವಿದೇಶದ ಗಳಿಕೆಯನ್ನೂ ಸೇರಿಸಿದರೆ 1024 ಕೋಟಿ ರೂಪಾಯಿ ಮೀರಲಿದೆ!
ಆದಿತ್ಯ ಧಾರ್ ನಿರ್ದೇಶನ ಮಾಡಿರುವ ‘ಧುರಂಧರ್’ ಸಿನಿಮಾದಲ್ಲಿ ದೇಶಭಕ್ತಿ ಕಥಾಹಂದರ ಇದೆ. ಪಾಕಿಸ್ತಾನದಲ್ಲಿ ನಡೆದ ರಿಯಲ್ ಘಟನೆಗಳನ್ನು ಆಧರಿಸಿ ಈ ಸಿನಿಮಾ ತಯಾರಾಗಿದೆ. ಪ್ರೇಕ್ಷಕರಿಗೆ ಈ ಸಿನಿಮಾ ಬಹಳ ಇಷ್ಟ ಆಗಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮವಾದ ಬಾಯಿ ಮಾತಿನ ಪ್ರಚಾರ ಸಿಕ್ಕಿದೆ. 23 ದಿನ ಕಳೆದು, 24ನೇ ದಿನಕ್ಕೆ ಕಾಲಿಟ್ಟರೂ ಕೂಡ ಈ ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಲೇ ಇದೆ.
ಪ್ರತಿ ವೀಕೆಂಡ್ ಕೂಡ ‘ಧುರಂಧರ್’ ಸಿನಿಮಾಗೆ ಹಣದ ಹೊಳೆ ಹರಿದಿದೆ. ಡಿಸೆಂಬರ್ 27ರಂದು ಅಂದಾಜು 20.50 ಕೋಟಿ ರೂಪಾಯಿ ಆಗಿದೆ. ಭಾನುವಾರ (ಡಿಸೆಂಬರ್ 28) ಕೂಡ ಖಂಡಿತವಾಗಿ ಕಲೆಕ್ಷನ್ ಹೆಚ್ಚಾಗಲಿದೆ. ಆ ಮೂಲಕ ಅನಾಯಾಸವಾಗಿ ‘ಧುರಂಧರ್’ ಸಿನಿಮಾ ಭಾರತದ ಮಾರುಕಟ್ಟೆಯಲ್ಲೇ 700 ಕೋಟಿ ರೂಪಾಯಿ ಗಡಿ ದಾಟಲಿದೆ.
ಎಷ್ಟೇ ಹೊಸ ಸಿನಿಮಾಗಳು ಬಿಡುಗಡೆ ಆದರೂ ಕೂಡ ‘ಧುರಂಧರ್’ ಸಿನಿಮಾದ ಗಳಿಕೆ ಮೇಲೆ ಪರಿಣಾಮ ಬೀರಲು ಸಾಧ್ಯವಾಗಿಲ್ಲ. ‘ಅಖಂಡ 2’, ‘ದಿ ಡೆವಿಲ್’, ‘ಮಾರ್ಕ್’, ‘45’, ‘ವೃಷಭ’, ‘ಅವತಾರ್ 3’, ‘ಅನಾಕೊಂಡ’, ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಮುಂತಾದ ಸಿನಿಮಾಗಳ ಪೈಪೋಟಿಯ ನಡುವೆಯೂ ‘ಧುರಂಧರ್’ ಸಿನಿಮಾ ಅಬ್ಬರಿಸುತ್ತಿದೆ.
ಇದನ್ನೂ ಓದಿ: ‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ವೀಕೆಂಡ್ ಮತ್ತು ಹೊಸ ವರ್ಷದ ಸಂಭ್ರಮದಲ್ಲಿ ‘ಧುರಂಧರ್’ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಲಿದೆ. ಹೊಸ ವರ್ಷದ ಆರಂಭದಲ್ಲಿ ಕೂಡ ಈ ಸಿನಿಮಾದ ಅಬ್ಬರ ಮುಂದುವರಿಯಲಿದೆ. ರಣವೀರ್ ಸಿಂಗ್ ಜೊತೆ ಸಾರಾ ಅರ್ಜುನ್, ಅಕ್ಷನ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಮ್ಪಾಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲರ ಖ್ಯಾತಿ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.